ತಲೆಯಲ್ಲಿ ಕೂದಲು ಇಲ್ಲ ಅಂತ ಚಿಂತಿಸಬೇಡಿ ಈ ಸುಲಭ ವಿಧಾನವನ್ನು ಪಾಲಿಸಿದರೆ ಆರೋಗ್ಯಕರ ಕೂದಲು ಬೆಳೆಯುತ್ತವೆ…!

0
1942

Kannada News | Health tips in kannada

ಹಿಂದಿನ ಕಾಲದಲ್ಲಿ ವಾರದಲ್ಲಿ ಎರಡರಿಂದ ಮೂರು ದಿನವಾದರೂ ಕೂದಲಿಗೆ ಎಣ್ಣೆ ಹಾಕಿಕೊಂಡು ಮಸಾಜ್ ಮಾಡುತ್ತಾ ಇದ್ದರು. ಆಗ ಮಹಿಳೆಯರ ಕೂದಲು ಸುಂದರವಾಗಿ ಉದ್ದಗೆ ಇರುತ್ತಿತ್ತು. ಇಂದು ಕೂದಲು ಕೂಡ ಸಣ್ಣದಾಗಿದೆ ಮತ್ತು ಎಣ್ಣೆ ಹಚ್ಚಿಕೊಂಡು ಕುಳಿತುಕೊಳ್ಳಲು ಸಮಯವೂ ಇಲ್ಲ. ಇದರಿಂದಾಗಿಯೇ ಇರುವ ಕೂದಲು ಕೂಡ ಉದುರಲು ಆರಂಭವಾಗಿದೆ.

ತಲೆಯಲ್ಲಿ ಕೂದಲು ಇಲ್ಲ ಅಂತ ಚಿಂತಿಸಬೇಡಿ ಆರೋಗ್ಯಕರ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವ ಅತ್ಯುತ್ತಮ ಹಾಗು ಸುಲಭ ವಿಧಾನವನ್ನು ನಾವು ನಿಮಗೆ ತಿಳಿಸುತ್ತೇವೆ.

ಆಕ್ಯುಪ್ರೆಶರ್ ಚಿಕಿತ್ಸೆ:
ಆಕ್ಯುಪ್ರೆಶರ್, ಈ ವಿಧಾನವನ್ನು ಹಲವಾರು ವರ್ಷಗಳಿಂದ ನಮ್ಮ ಹಿರಿಯರು ಪಾಲಿಸಿಕೊಂಡು ಬರುತ್ತಿದ್ದಾರೆ. ನಿಮ್ಮ ಎರಡು ಕೈ ಬೆರಳುಗಳ ಉಗುರನ್ನು ಒಂದಕ್ಕೊಂದು ಕೂಡಿಸಿ ಜೋರಾಗಿ ತಿಕ್ಕಬೇಕು. ಹೀಗೆ ಮಾಡಿದರೆ ಆಕ್ಯುಪ್ರೆಶರ್ ಪಾಯಿಂಟ್ ಸಕ್ರಿಯಗೊಳ್ಳುತ್ತದೆ.

ಹೀಗೆ ಮಾಡಿರಿ:
ದಿನಕ್ಕೆ ಎರಡರಿಂದ ಮೂರು ಸಲ 10 ರಿಂದ 20 ನಿಮಿಷಗಳ ಕಾಲ ನಿಮ್ಮ ಕೈ ಬೆರಳುಗಳ ಉಗುರುಗಳನ್ನು ಒಂದಕ್ಕೊಂದು ತಿಕ್ಕಿದರೆ ನಿಮ್ಮ ಕೂದಲು ಸೊಂಪಾಗಿ ಬೆಳೆಯುತ್ತವೆ. ಆದರೆ ನಿಮ್ಮ ಕೈ ಹೆಬ್ಬೆರಳನ್ನು ಹೊರತುಪಡಿಸಿ ಉಳಿದ ನಾಲ್ಕು ಬೆರಳುಗಳನ್ನು ಮಾತ್ರ ಒಂದಕ್ಕೊಂದು ತಿಕ್ಕಬೇಕು. ಹೆಬ್ಬೆರಳು ತಿಕ್ಕುವುದರಿಂದ ಮುಖದ ಮೇಲೆನ ಕೂದಲು ಹೆಚ್ಚಾಗುತ್ತವೆ.

ಆಕ್ಯುಪ್ರೆಶರ್ ಚಿಕಿತ್ಸೆ ಉಪಯೋಗ:
ಹೀಗೆ ಮಾಡುವುದರಿಂದ ಬಕ್ಕ ತಲೆ ಸಮಸ್ಯೆ, ಕೂದಲು ಉದುರುವುದು ಮತ್ತು ಕೂದಲು ಬೆಳ್ಳಗಾಗುವುದು ಕಡಿಮೆಯಾಗಿ ನಿಮ್ಮ ಮೊದಲಿನ ನೈಸರ್ಗಿಕ ಕೂದಲು ಮತ್ತೆ ಬೆಳೆಯುತ್ತವೆ.

ಆಕ್ಯುಪ್ರೆಶರ್ ಚಿಕಿತ್ಸೆಯ ಕಾರ್ಯ ವಿಧಾನ:
ನಿಮ್ಮ ಕೈ ಬೆರಳಿನ ಉಗುರುಗಳನ್ನು ತಿಕ್ಕುವುದರಿಂದ, ಕೂದಲಿನ ಬುಡದಲ್ಲಿ ರಕ್ತ ಸಂಚಲನೆ ಹೆಚ್ಚಾಗಿ, ಕೂದಲಿನ ಕೋಶಗಳನ್ನು ಬಲಿಷ್ಟ ಮಾಡುವುದರ ಜೊತೆಗೆ, ಕೂದಲು ಉದುರುವುದನ್ನು ಮತ್ತು ಬೆಳ್ಳಗಾವುದನ್ನು ತಡೆಗಟ್ಟುತ್ತದೆ.

ಚಿಕಿತ್ಸೆಯ ಪರಿಣಾಮ ಸಮಯ:
ನಿಮ್ಮ ಕೂದಲು ಉದುರುವುದು ಕಡಿಮೆಯಾಗಬೇಕು ಅಂದರೆ 3 ರಿಂದ 6 ತಿಂಗಳ ಕಾಲಾವಕಾಶ ಬೇಕು. ಹಾಗು ಕೂದಲು ಬೆಳಿಯೋಕೆ 6 ರಿಂದ 9 ತಿಂಗಳು ಬೇಕು. ಇದು ನೀವು ದಿನಕ್ಕೆ ಬೆರಳುಗಳನ್ನು ಎಷ್ಟು ಸಲ ತಿಕ್ಕುತ್ತೀರಿ ಅನ್ನೊದರ ಮೇಲೆ ನಿರ್ಭರವಾಗಿರುತ್ತದೆ.

ಇವರು ಆಕ್ಯುಪ್ರೆಶರ್ ನಿಂದ ದೂರವಿರಿ:
ಇದು ರೋಗಿಗಳಿಗೆ ಅಥವಾ ಅಧಿಕ ರಕತದೊತ್ತಡ ಇರುವವರಿಗೆ ತುಂಬಾ ಅಪಾಯ ಮತ್ತು ಗರ್ಭಿಣಿ ಮಹಿಳೆಯರು ಇದನ್ನು ಅಪ್ಪಿ-ತಪ್ಪಿಯೂ ಪಾಲಿಸಬಾರದು.

ಇದರ ಜೊತೆ-ಜೊತೆಗೆ ಒತ್ತಡ ಕಡಿಮೆ ಮಾಡಲು ಯೋಗ, ಧ್ಯಾನ ಮಾಡಿ, ಉತ್ತಮ ಪೋಷಕಾಂಶವುಳ್ಳ ಆಹಾರ, ಲಘು ವ್ಯಾಯಾಮ, ವಾಯು ವಿಹಾರ ಮಾಡಿದರೆ ಕೂದಲು ಉದುರುವುದು ಕಡಿಮೆಯಾಗಿ ಕೂದಲು ದಟ್ಟವಾಗಿ ಬೆಳೆಯುತ್ತವೆ.

Also read: ಈ ಬಸಳೆ ಸೊಪ್ಪಿನ ತಂಬುಳಿ ಮಾಡಿಕೊಂಡು ತಿನ್ನಿ, ಉತ್ತಮ ಆರೋಗ್ಯಕ್ಕೆ ಇನ್ನ್ಯಾವುದೇ ಸಪ್ಲಿಮೆಂಟ್ ಮಾತ್ರೆಗಳು ಬೇಡ..