ಇನ್ಮುಂದೆ ಸೊಳ್ಳೆ ಕಚ್ಚುತ್ತೇವೆ ಎನ್ನುವ ಚಿಂತೆ ಬೇಡ; ಸೊಳ್ಳೆ ಕಡಿತಕ್ಕೂ ಸಿಗಲಿದೆ 1 ಲಕ್ಷದ ವಿಮೆ.!

0
332

ಜನರು ಸುರಕ್ಷತೆಯ ದೃಷ್ಟಿಯಿಂದ ಮೊದಲು ಯೋಚನೆ ಮಾಡುವುದು ವಿಮೆಯನ್ನು ಕಟ್ಟುವುದು, ಅದರಂತೆ ಪ್ರತಿಯೊಂದಕ್ಕೂ ವಿಮೆ ಬಂದಿದ್ದು, ಹೆಲ್ತ್ ಪ್ರೊಟೆಕ್ಟರ್ ಪ್ಲಸ್ ಪಾಲಸಿ, ವೈಯಕ್ತಿಕ ಅಪಘಾತ ವಿಮಾ ಪಾಲಿಸಿ ಗಂಭೀರ ಖಾಯಿಲೆಯ ವಿಮಾ ಪಾಲಿಸಿ ಸೇರಿದಂತೆ ಕ್ಯಾನ್ಸರ್ ಖಾಯಿಲೆಗೂ ಕೂಡ ಪಾಲಿಸಿ ಬಂದಿದೆ. ಆದರೆ ಇವೆಲ್ಲವುಕ್ಕಿಂತ ಬೆರಗುಗೊಳಿಸುವ ಪಾಲಿಸಿವೊಂದು ಬಂದಿದ್ದು ಜನರಿಗೆ ಆಕರ್ಷಣೆಯಾಗಿದೆ. ಅಂತಹ ವಿಮೆ ಎಂದರೆ ಸೊಳ್ಳೆ ಕಡಿತಕ್ಕೂ ಸಿಗಲಿದೆ 1 ಲಕ್ಷದ ವಿಮೆ ಸಿಗುತ್ತೆ.


Also read: ನಿಮ್ಮ ಆಧಾರ್ ಕಾರ್ಡ್-ನಲ್ಲಿ ಈ 6 ತಿದ್ದುಪಡಿಗೆ ಯಾವುದೇ ದಾಖಲೆ ಬೇಕಿಲ್ಲ; ಹಾಗಾದ್ರೆ ಯಾವವು 6 ಬದಲಾವಣೆ ಇಲ್ಲಿದೆ ಮಾಹಿತಿ.!

ಸೊಳ್ಳೆ ಕಡಿತಕ್ಕೂ ಸಿಗಲಿದೆ 1 ಲಕ್ಷದ ವಿಮೆ?

ಹೌದು ಅನಾರೋಗ್ಯ ಸಂದರ್ಭದಲ್ಲಿ ಚಿಕಿತ್ಸೆ ಪಡೆಯಲು ನಾನಾ ರೀತಿಯ ವಿಮೆಗಳಿಗೆ. ಇದೀಗ ಸೊಳ್ಳೆಯಿಂದ ಹರಡುವ ಸಾಂಕ್ರಾಮಿಕ ರೋಗಕ್ಕೂ ವಿಮೆ ಒದಗಿಸಲು ಟೋಕಿಯೋದ ಕಂಪೆನಿಯೊಂದು ಮುಂದಾಗಿದ್ದು. ಈ ವಿಚಾರ ಆಶ್ಚರ್ಯ ಅನಿಸಿದರು ಸತ್ಯವಾಗಿದೆ. ಟೋಕಿಯೋದ ಇಪ್ಕೋ ಟೋಕಿಯೋ ಜನರಲ್ ಇನ್ಸೂರೆನ್ಸ್ ಕಂಪೆನಿ ಸೊಳ್ಳೆ ಕಡಿತದಿಂದ ಅನಾರೋಗ್ಯಕ್ಕೆ ಒಳಗಾದ ರೋಗಿಗಳಿಗೆ 1 ಲಕ್ಷ ರೂ. ವಿಮೆಯನ್ನು ಒದಗಿಸಲು ಮುಂದಾಗಿದೆ. ಈ ವಿಮೆ ದೊಡ್ಡ ಕಾಯಿಲೆಗಳಿಗೆ ಮಾತ್ರ ವಿಮೆಗಳನ್ನು ನೀಡಲಾಗುತ್ತಿತ್ತು. ಸಣ್ಣ-ಪುಟ್ಟ ಕಾಯಿಲೆಗಳಿಗೆ ಯಾವುದೇ ವಿಮೆಗಳಿರಲಿಲ್ಲ. ಮಾತ್ರವಲ್ಲದೆ, ಹೆಚ್ಚಿನ ವಿಮೆಗಳು ದುಬಾರಿ ಮೊತ್ತವನ್ನು ಹೊಂದಿರುದರಿಂದ ಅನೇಕರು ವಿಮೆ ಮಾಡಿಸಲು ಹಿಂದೇಟು ಹಾಕುತ್ತಿದ್ದರು.
ಆದರೀಗ, ಟೋಕಿಯೋದ ಇಪ್ಕೋ ಟೋಕಿಯೋ ಜನರಲ್ ಇನ್ಸೂರೆನ್ಸ್ ಕಂಪೆನಿ ಸೊಳ್ಳೆ ಕಡಿತದಿಂದ ಅನಾರೋಗ್ಯಕ್ಕೆ ಒಳಗಾದ ರೋಗಿಗಳಿಗೆ 1 ಲಕ್ಷ ರೂ. ವಿಮೆಯನ್ನು ಒದಗಿಸಲು ಮುಂದಾಗಿದೆ. ಈ ವಿಮೆಯನ್ನು ಮೋಸ್-ಬೈಟ್ ಪ್ರೊಟೆಕ್ಟರ್ ಪಾಲಿಸಿ ಎಂದು ಹೆಸರಿಡಲಾಗಿದೆ.


Also read: ಕಾಫಿ ಕುರಿತು ಹೊಸ ಅಧ್ಯಯನ; ಪ್ರತಿದಿನ ಕಾಫಿ ಕುಡಿದರೆ ಲಿವರ್‌ ಕ್ಯಾನ್ಸರ್‌ ಬರೋದಿಲ್ಲವಂತೆ.!

ಇದರ ಮೂಲಕ ಅನಾರೋಗ್ಯ ಪೀಡಿತ ಜನರಿಗೆ 1 ಲಕ್ಷ ವಿಮೆ ಸೌಲಭ್ಯ ನೀಡುತ್ತಿದೆ. ಸೊಳ್ಳೆ ಕಚ್ಚಿದಾಗ ವೈರಸ್, ಬ್ಯಾಕ್ಟೀರಿಯಾಗಳು ಹರಡುತ್ತವೆ. ಡೆಂಗ್ಯೂ, ಮೆಲೇರಿಯಾ ರೋಗಗಳಿಗೂ ಕಾರಣವಾಗುತ್ತದೆ. ವಿಶ್ವದಾದ್ಯಂತ ಪ್ರತಿ ವರ್ಷ ಮಲೇರಿಯಾದಿಂದ 4 ಲಕ್ಷ ಜನರು ಸಾವನಪ್ಪುತ್ತಿದ್ದಾರೆ. ಈ ನಿಟ್ಟಿನಲ್ಲಿ ಇಪ್ಕೋ ಟೋಕಿಯೋ ಜನರಲ್ ಇನ್ಸೂರೆನ್ಸ್ ಕಂಪೆನಿ ಮೋಸ್-ಬೈಟ್ ಪ್ರೊಟೆಕ್ಟರ್ ಪಾಲಿಸಿಯನ್ನು ಪರಿಚಯಿಸಿದೆ.


Also read: ಆರ್‌ಬಿಐ ಮಹತ್ವದ ನಿರ್ಧಾರ; ಸ್ವಂತ ಮನೆ, ಕಾರು ಖರಿಧಿಸುವ ಕನಸು ಕಾಣುತ್ತಿರುವವರಿಗೆ ಸಿಹಿ ಸುದ್ದಿ..

ಡೆಂಗ್ಯೂ ಜ್ವರ, ಮಲೇರಿಯಾ, ಲಿಮ್ಯಾಥಿಕ್ ಫಿಲೇರಿಯಾಸಿಸ್, ಕಾಲ – ಅಜಾರ್, ಚಿಕನ್ ಗುನ್ಯಾ, ಜಪಾನೀಸ್ ಎನ್ಸೆಫಾಲಿಟಿಸ್ ಮತ್ತು ಜಿಕಾ ವೈರಸ್ ರೋಗಗಳಿಗೆ ಮಾತ್ರ ಈ ಪಾಲಿಸಿಯನ್ನು ಬಳಸಬಹುದಾಗಿದೆ. ಇನ್ನು 18 ವರ್ಷದಿಂದ 65 ವರ್ಷ ವಯಸ್ಸಿನ ವ್ಯಕಿಗಳು ಈ ಮೋಸ್-ಬೈಟ್ ಪ್ರೊಟೆಕ್ಟರ್ ಪಾಲಿಸಿಯನ್ನು ಮಾಡಿಸಬಹುದಾಗಿದೆ. ಆರಂಭಿಕ 876 ರೂ.ವಿನಿಂದ ಪಾಲಿಸಿ ಪ್ರಾರಂಭವಾಗುತ್ತದೆ. ಮೋಸ್-ಬೈಟ್ ಪ್ರೊಟೆಕ್ಟರ್ ಪಾಲಿಸಿ ಎರಡು ಮತ್ತು ಮೂರು ವರ್ಷದ ಪ್ರಿಮಿಯಂ ಪಾಲಿಸಿಯಾಗಿದೆ. ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ ಮೊದಲಾದ ಕಾಯಿಲೆಗಳಿಗೆ ಈ ವಿಮಾ ಯೋಜನೆಯಡಿ ಸೌಲಭ್ಯ ಪಡೆಯಬಹುದಾಗಿದೆ. ಆರೋಗ್ಯ ತಪಾಸಣೆಯ ಅಗತ್ಯವಿಲ್ಲ. ವಿಮೆ ಹಣ ಪಡೆಯಲು 48 ಗಂಟೆ ಆಸ್ಪತ್ರೆಯಲ್ಲಿ ಇರಬೇಕು ಎಂದು ಹೇಳಲಾಗಿದೆ.