ನೀವೂ ಬೆಳಗ್ಗಿನ ಉಪಾಹಾರ ಮಾಡೋದಿಲ್ಲ? ಹಾಗಿದ್ರೆ ನಿಮಗೆ ಹೃದಯಾಘಾತ ಸಮಸ್ಯೆ ಬರಬಹುದು ಎಚ್ಚರ!!

0
154

ಈಗಿನ ಕಾಲದಲ್ಲಿ ವಯಸ್ಸಿನ ಅಂತರವಿಲ್ಲದೆ ಕಾಯಿಲೆಗಳು ಬರುವುದು ಸಾಮಾನ್ಯವಾಗಿದೆ. ಅದರಲ್ಲಿ ಹಲವು ಕಾಯಿಲೆಗಳು ಕೆಟ್ಟ ಹವ್ಯಾಸಗಳಿಂದ ಬರುತ್ತಿದ್ದರೆ, ಇನ್ನೂ ಕೆಲವು ಆಹಾರದ ಸೇವನೆಯಿಂದ ಬರುತ್ತಿವೆ, ಅದಕ್ಕಾಗಿ ಒಳ್ಳೆಯ ಆಹಾರ ತಿಂದರೆ ಹೆಚ್ಚಾಗಿ ಈ ಕಾಯಿಲೆಗಳಿಂದ ತಪ್ಪಿಸಿಕೊಳ್ಳಬಹುದು ಎನ್ನಿಸಿದರೂ. ಆಹಾರ ಸೇವನೆ ಸಮಯದ ವಿಳಂಭದಿಂದ ಹಲವು ಕಾಯಿಲೆಗಳು ಬರುತ್ತಿವೆ. ಇಂತವುಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಮತ್ತು ಹೃದಯ ಆಘಾತಕ್ಕೆ ಕಾರಣ ಬೆಳಗಿನ ಆಹಾರವನ್ನು ತಿನ್ನದೇ ಇರುವುದು ಕಾರಣವೆಂದು ಅಧ್ಯಯನಯೊಂದು ಹೇಳಿದೆ.


Also read: ದಿನಾಗ್ಲು ತೀವ್ರ ಬೆನ್ನು ನೋವು ಅನುಭವಿಸುವುದರಿಂದ ಮುಕ್ತರಾಗಲು ಈ ನೈಸರ್ಗಿಕ ಎಣ್ಣೆಗಳನ್ನು ಉಪಯೋಗಿಸಿ!!

ಏನಿದು ಅಧ್ಯಯನ?

ಉಪಾಹಾರವು ನಮ್ಮ ದಿನದ ಪ್ರಮುಖ ಆಹಾರವಾಗಿದೆ. ಉಪಾಹಾರವನ್ನು ತ್ಯಜಿಸಿದರೆ ಆರೋಗ್ಯದ ಮೇಲೆ ನಾನಾ ರೀತಿಯ ಪರಿಣಾಮಗಳನ್ನು ಉಂಟು ಮಾಡಬಹುದು. ಉಪಾಹಾರವು ನಮಗೆ ದಿನಪೂರ್ತಿ ಕೆಲಸ ಮಾಡಲು ಬೇಕಾಗುವಂತಹ ಪೋಷಕಾಂಶಗಳನ್ನು ಇದು ಒದಗಿಸಿಕೊಡುವುದು. 6-8 ಗಂಟೆಗಳ ಕಾಲ ನಿದ್ರೆ ಮಾಡಿದ ಬಳಿಕ ದೇಹಕ್ಕೆ ಸಿಗುವ ಮೊದಲ ಆಹಾರವಾಗಿದ್ದು ದೇಹಕ್ಕೆ ಅತಿಮುಖ್ಯವಾಗಿದೆ. ಆದರು ದಿನದ ಪ್ರಮುಖ ಆಹಾರವನ್ನು ನೀವು ಕಡೆಗಣಿಸಿದರೆ, ಆಗ ಹಲವಾರು ಆರೋಗ್ಯ ಸಮಸ್ಯೆಗಳನ್ನು ಆಹ್ವಾನಿಸಿದಂತೆ ಆಗುವುದು. ಎನ್ನುವುದು ಸತ್ಯವಾಗಿದೆ.


Also read: ಪಪ್ಪಾಯ ಎಲೆಗಳು ಉಪಯೋಗಿಸೋದ್ರಿಂದ ಎಲ್ಲ ತರಹದ ಜ್ವರದಿಂದ ಹಿಡಿದು ಕ್ಯಾನ್ಸರ್-ವರೆಗೆ ಗುಣಪಡಿಸಬಹುದು ಈ ಮನೆಮದ್ದಿನ ಬಗ್ಗೆ ತಿಳಿದುಕೊಳ್ಳಿ!!

ಸಂಶೋಧನೆ ಹೇಳುವ ಪ್ರಕಾರ ಜನರಲ್ಲಿ ಹೃದಯಾಘಾತದ ಸಮಸ್ಯೆಯು ಹೆಚ್ಚಿರುವುದು. ನಿಯಮಿತವಾಗಿ ಉಪಾಹಾರ ತ್ಯಜಿಸಿದರೆ ಆಗ ದೇಹದಲ್ಲಿ ಬೊಜ್ಜು ಬರುವುದು. ಕೆಲವರು ಉಪಹಾರ ಮಾಡಿದರೆ ದೇಹದಲ್ಲಿ ಬೊಜ್ಜು ಹೆಚ್ಚುತ್ತದೆ ಎನ್ನುತಾರೆ. ಇಂತಹ ಯೋಚನೆಯಿಂದ ನೀವು ಉಪಾಹಾರ ಮಾಡದೆ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಅಧ್ಯಯನ ತಿಳಿಸಿದ್ದು. ಉಪಾಹಾರವು ಚಯಾಪಚಯ ಹೆಚ್ಚಿಸುವ ಆಹಾರವಾಗಿದೆ ಮತ್ತು ಇದು ದೇಹಕ್ಕೆ ಬೇಕಿರುವ ಪ್ರಮುಖ ಪೋಷಕಾಂಶಗಳನ್ನು ನೀಡಿ ತೂಕ ಇಳಿಸಲು ಬಯಸುವವರಿಗೆ ನೆರವಾಗುತ್ತದೆ. ಒಂದು ವೇಳೆ ಉಪಹಾರ ಮಾಡದೇ ಇದ್ದರೆ. ಕೊಬ್ಬು ಕರಗಿಸುವ ಸಾಮರ್ಥ್ಯವನ್ನು ಕಡಿಮೆ ಮಾಡಿಕೊಂಡು, ಮತ್ತಷ್ಟು ತೂಕ ಹೆಚ್ಚಾಗುವಂತೆ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.


Also read: ಅಪೆಂಡಿಕ್ಸ್ ನಿವಾರಣೆ ಮಾಡಲು ಇರುವ ಕೆಲವು ನೈಸರ್ಗಿಕ ಮನೆಮದ್ದುಗಳು; ಶಸ್ತ್ರಚಿಕಿತ್ಸೆಗೆ ಮೊರೆ ಹೋಗುವ ಮುನ್ನ ಒಮ್ಮೆ ಹೀಗೆ ಮಾಡಿ ನೋಡಿ..

ಅದರಂತೆ 6-8 ಗಂಟೆಗಳ ಕಾಲ ನಿದ್ರಿಸಿದ ಬಳಿಕ ದೇಹಕ್ಕೆ ಹೆಚ್ಚಿನ ಶಕ್ತಿ ಮತ್ತು ಪೋಷಕಾಂಶಗಳು ಬೇಕಾಗಿರುವುದು. ಯಾಕೆಂದರೆ 3-4 ಗಂಟೆಗಳ ಕಾಲ ಉಪವಾಸ ಮಾಡಿದರೆ ಆಗ ಹೊಟ್ಟೆಯಲ್ಲಿನ ಆಮ್ಲೀಯ ಮಟ್ಟವು ಹೆಚ್ಚಾಗುವುದು. ಈ ಆಮ್ಲವು ಸರಿಯಾಗಿ ಆಹಾರ ಜೀರ್ಣವಾಗಲು ನೆರವಾಗುವುದು. ಆಹಾರ ತ್ಯಜಿಸಿದರೆ ಆಗ ಗ್ಯಾಸ ಮತ್ತು ಮಲಬದ್ಧತೆ ಸಮಸ್ಯೆಯು ಬರುವುದು. ಜೀರ್ಣಕ್ರಿಯೆ ವ್ಯವಸ್ಥೆಯು ಆರೋಗ್ಯಕಾರಿ ಆಗಬೇಕಾದರೆ ಪ್ರತೀ 3-4 ಗಂಟೆಗೊಮ್ಮೆ ಆಹಾರ ಸೇವಿಸಬೇಕು. ನೀವು ತಿನ್ನುವಂತಹ ಆಹಾರ ಮತ್ತು ಊಟವು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುವುದು. ಉಪಾಹಾರವು ದಿನದ ಪ್ರಮುಖ ಆಹಾರವಾಗಿದೆ ಮತ್ತು ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಲಾಗಿದೆ. ಸರಿಯಾದ ಪ್ರಮಾಣದಲ್ಲಿ ಉಪಾಹಾರ ಸೇವಿಸಿದರೆ ಆಗ ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಿಸಲು ನೆರವಾಗುವುದು ಮತ್ತು ಮಧುಮೇಹ ನಿಯಂತ್ರಿಸಲು ಇದು ನೆರವಾಗುವುದು. ಅಷ್ಟೇ ಅಲ್ಲದೆ ಉಪಾಹಾರ ತಪ್ಪಿಸುವ ಜನರಲ್ಲಿ ಖಿನ್ನತೆ ಮತ್ತು ಒತ್ತಡ ಕೂಡ ಉಂಟಾಗುವುದು, ಉಪಾಹಾರವು ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ಆಮ್ಲೀಯ ಮಟ್ಟವನ್ನು ಕಾಪಾಡುವುದು, ಉಪಾಹಾರ ತ್ಯಜಿಸಿದರೆ ಆಗ ಅದರಿಂದ ಹೊಟ್ಟೆಯ ಅಲ್ಸರ್ ಕೂಡ ಬರುತ್ತದೆ. ಎಂದು ಅಧ್ಯಯನ ಹೇಳಿದೆ.