ಅಯ್ಯಪ್ಪ ವ್ರತ ಮಾಡೋದು ಬಹಳ ಒಳ್ಳೇದು, ಆದರೆ ಮಾಡೋದು ಹೇಗೆ ಅಂತ ಗೊತ್ತಿಲ್ಲ ಅಂದ್ರೆ ಇದನ್ನ ಓದಿ…

0
1698

ಅಯ್ಯಪ್ಪ ವ್ರತ ಹೇಗ್ ಮಾಡೋದು ಗೊತ್ತಾ..?

ಯಾವುದೇ ವ್ರತ ಮಾಡಬೇಕು ಅಂದ್ರು ನಿಯಮಗಳನ್ನ ಪಾಲಿಸ್ಲೇಬೇಕು. ಎಲ್ಲಾ ವ್ರತವನ್ನು 41 ದಿನ ಮಾಡ್ಬೇಕು. ವ್ರತ ಮಾಡೋದೇ ಒಮದು ದೈವೀಕ ಅನುಭವ. ಸನಾತನ ಧರ್ಮದ ಪ್ರಕಾರ ಮನುಷ್ಯ ಭಗವಂತನಲ್ಲಿ ಐಕ್ಯವಾಗಲು ರಾಜ ಯೋಗ, ಭಕ್ತಿ ಯೋಗ, ಕರ್ಮಾ ಯೋಗ, ಜ್ಞಾನ ಯೋಗ ಮಾರ್ಗಗಳಿವೆ. ವ್ರತ ಮಾಡುವವರು ‘ಭಕ್ತಿ ಯೋಗ’ ಮೂಲಕ ದೈವ ಸ್ವರೂಪದ ಅನುಭವ ಪಡೆಯುತ್ತಾರೆ.

ಸ್ವಾಮಿ ಅಯ್ಯಪ್ಪ ವ್ರತ ಮಾಡುವ ಭಕ್ತರು ಶಬರಿ ಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಪಡೆಯುವ ಮೊದಲು 41 ದಿನಗಳ ಕಠಿಣ ವ್ರತಾಚರಣೆ ಮಾಡ್ಬೇಕು. ಆ ವ್ರತಾಚರಣೆಯಲ್ಲಿ ಯಾವೆಲ್ಲಾ ನಿಯಮಗಳಿವೆ..?

ಅಯ್ಯಪ್ಪ ಮಾಲೆ ವ್ರತದ ನಿಯಮಗಳು:

 • ಗುರುಸ್ವಾಮಿಯಾದವರಿಂದ ವ್ರತ ದೀಕ್ಷೆಯನ್ನು ಪಡೆದು ಕೊರಳಲ್ಲಿ ರುದ್ರಾಕ್ಷಿ ಮತ್ತು ತುಳಸಿ ಮಾಲೆಯನ್ನು ಧರಿಸಬೇಕು.
 • ಒಮ್ಮೆ ಮಾಲೆ ಹಾಕಿದ್ಮೇಲೆ ದಿನಾ ಬೆಳಿಗ್ಗೆ ಮತ್ತು ಸಾಯಂಕಾಲ ಸ್ನಾನ ಮಾಡಿ ಅಯ್ಯಪ್ಪನಿಗೆ ಪ್ರಾತಃ ಸಂಧ್ಯಾ ಮತ್ತು ಸಾಯಂ ಸಂಧ್ಯಾ ಸಮಯಗಳಲ್ಲಿ ಪೂಜೆ ಮತ್ತು ನೈವೇದ್ಯಾದಿಗಳನ್ನು ಅರ್ಪಿಸಬೇಕು.
 • ಕಪ್ಪು ವಸ್ತ್ರಗಳನ್ನು ಧರಿಸಬೇಕು.
 • ಉಗುರು ಮತ್ತು ಕೂದಲನ್ನು ಕತ್ತರಿಸುವಂತಿಲ್ಲ.
 • 41 ದಿನಗಳ ಕಾಲ ಕೇವಲ ಒಂದು ಹೊತ್ತು ಊಟ ಮಾಡಬೇಕು. ಸಸ್ಯಾಹಾರವನ್ನೇ ಸೇವಿಸಬೇಕು.
 • 41 ದಿನ ಬ್ರಹ್ಮಚರ್ಯವನ್ನು ಪಾಲಿಸಬೇಕು. ಅಂದರೆ ಮನೆಯಿಂದ ದೂರ ಗುಡಿಗಳಲ್ಲಿ ಅಥವಾ ಉದ್ಯಾನಗಳಲ್ಲಿ ಹೆಂಗಸರ ಸಂಪರ್ಕವಿಲ್ಲದ ಕಡೆ ವಾಸವಿರಬೇಕು.

 • ಸ್ವತಃ ಅಥವಾ ಅಯ್ಯಪ್ಪನ ದೀಕ್ಷೆ ಕೈಗೊಂಡಿರುವವರು ತಯಾರಿಸಿದ ಆಹಾರವನ್ನು ಮಾತ್ರ ಸೇವಿಸ ಬೇಕು.
 • ನೆಲ ಅಥವಾ ಚಾಪೆಯ ಮೇಲೆ ಮಲಗಬೇಕು.
 • ಮಾಲೆ ಧರಿಸಿದ ಕ್ಷಣದಿಂದ ತನ್ನನ್ನು ಹಾಗೂ ಇತರರನ್ನು ಕೂಡ “ಅಯ್ಯಪ್ಪ” ಎಂದೇ ಕರೆಯಬೇಕು.
 • ಸ್ವತಃ ತನ್ನ ಪತ್ನಿ ಹಾಗೂ ಇತರ ಹೆಂಗಸರನ್ನು  “ಮಾತಾ” ಎಂದೇ ಸಂಭೋದಿಸಬೇಕು.
 • ಚಪ್ಪಲಿಯನ್ನು ಧರಿಸ ಕೂಡದು ಮತ್ತು ಯಾವುದೇ ರೀತಿಯ ವಾಹನಗಳನ್ನು ಉಪಯೋಗಿಸದೆ ಕಾಲು ನಡಿಗೆಯಲ್ಲಿ ಪ್ರಯಾಣ ಮಾಡಬೇಕು.
 • ಅಯ್ಯಪ್ಪ ಮಾಲೆಯನ್ನು ಧರಿಸಿದವರೆಲ್ಲರಿಗೂ ವಯೋಬೇಧ ಮತ್ತು ಕುಲಭೇದವಿಲ್ಲದೆ ಅವರು ಭೇಟಿಯಾದಾಗ ಕಾಲು ಮುಟ್ಟಿ  ನಮಸ್ಕರಿಸಬೇಕು.
 • ಆಚರಣೆ ವೇಳೆ ಕನಿಷ್ಠ ಐದು ಜನ ಮಾಲೆ ಧರಿಸಿದ ಸ್ವಾಮಿಗಳಿಗೆ ಭೋಜನದ ವ್ಯವಸ್ಥೆ ಮಾಡಬೇಕು. ಯಾರೇ ಅಯ್ಯಪ್ಪನ ಮಾಲೆ ಧರಿಸಿದವರು ಊಟ ಮತ್ತು ಪೂಜೆಗೆ ಕರೆದರೆ ಹೋಗಬೇಕು.
 • ಋತುಮತಿಯಾಗದ ಚಿಕ್ಕ ಹುಡುಗಿಯರು ಮತ್ತು ಮುಟ್ಟು ನಿಂತ ಹಿರಿಯ ಹೆಂಗಸರು ಮಾತ್ರ ಮಾಲೆ ಧರಿಸಲು ಅರ್ಹರು.
 • ವ್ರತಾಚರಣೆ ವೇಳೆ ಮಾದಕ ವಸ್ತುಗಳ ಸೇವನೆ ಮತ್ತು ಚಿತ್ತಚಾಂಚಲ್ಯ ಅಥವಾ ಮನೋವಿಕಾರಗೊಳಿಸುವ ವಿಚಾರ ಮತ್ತು ವಸ್ತುಗಳಿಂದ ದೂರವಿರಬೇಕು.