ನಿಮ್ಮ ಸ್ಮಾರ್ಟ್ ಫೋನ್-ನಲ್ಲಿ ಈ App ಬಳಸಿದರೆ ಸಿಗುತ್ತೆ ಉಚಿತ ಪೆಟ್ರೋಲ್; ಈ ಬಂಪರ್ ಆಫರ್ ಪಡೆಯಲು ಈ ಮಾಹಿತಿ ನೋಡಿ..

0
761

ಸ್ಮಾರ್ಟ್ ಫೋನ್ ಬಂದಾಗಿನಿಂದ ವಿವಿಧ ಕಂಪನಿಗಳು ತಮ್ಮ app ಬಳಕೆ ಮಾಡಿಕೊಂಡವರಿಗೆ ಹಣ, ಬಸ್ ಟಿಕೆಟ್, ಹೋಟೆಲ್ ಬುಕಿಂಗ್, ಹೀಗೆ ಏನೇನೊ ನೀಡಿ ತಮ್ಮತ ಹೆಚ್ಚು ಬಳಕೆದಾರರನ್ನು ಸೆಳೆಯುತ್ತಿವೆ. ಗ್ರಾಹಕರು ಕೂಡ ಇದಕ್ಕೆ ಹೆಚ್ಚಾಗಿ ಮಾರು ಹೋಗಿ ಲಾಭವನ್ನು ಪಡೆಯುತ್ತಿದ್ದಾರೆ. ಉದಾಹರಣೆಗೆ TEZ, phone pay, paytem ಈ ಕಂಪನಿಗಳು ಮೊದಲು ಶುರುಮಾಡಿದ ಈ ಪ್ಲಾನ್ ಈಗ ಪೆಟ್ರೋಲ್ ಪಂಪ್ ವರೆಗೂ ಸ್ಟಾರ್ಟ್ ಆಗಿದೆ, ಒಂದು app downlod ಮಾಡಿಕೊಂಡು login ಆದರೆ ಸಾಕು free ಪೆಟ್ರೋಲ್ ಸಿಗುತ್ತೆ, ಅದು ಹೇಗೆ ಅಂತ ಇಲ್ಲಿದೆ ನೋಡಿ.

Also read: ನೀವು ಪೆಟ್ರೋಲ್ ಪಂಪ್ ಮಾಲಿಕತ್ವ ಪಡೆಯಬೇಕ? ಹಾಗಾದ್ರೆ ಈ ಮಾಹಿತಿ ನೋಡಿ..

ಹೌದು ಈ ಹಿಂದೆ ಹಲವು ಕಂಪನಿಗಳು ನೀಡಿದ ಆಫರ್ ಈಗ ಪೆಟ್ರೋಲಿಯಂ ಕಂಪನಿಗಳು ಕೂಡ ನೀಡುವಲ್ಲಿ ಯಶ್ವಸ್ವಿ ಕಾಣುತ್ತಿವೆ. ಇದಕ್ಕೆ ಲಕ್ಷಾಂತರ ಜನರು ಕೂಡ ಮುಗಿಬಿದ್ದು ಲಾಭಪಡೆಯುತ್ತಿದ್ದಾರೆ. ಇದೆಲ್ಲ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (HPCL) ಗ್ರಾಹಕರನ್ನು ಆಕರ್ಷಿಸಲು ಮಾಡಿದ ಭರ್ಜರಿ ಕೊಡುಗೆಯಾಗಿದೆ. ಈ ಆಫರ್ ಮೂಲಕ ನೀವು ಎಚ್​ಪಿ ಪೆಟ್ರೋಲಿಯಂ ಕಂಪೆನಿಯಿಂದ 1 ಲೀಟರ್ ಉಚಿತ ಪೆಟ್ರೋಲ್ ಪಡೆಯಬಹುದು.

ಇದರ ಬಳಕೆ ಹೇಗೆ?

Also read: ಪೆಟ್ರೋಲ್ ಪಂಪ್-ನಲ್ಲಿ ಚಿಪ್ ಹಾಕಿ ಗ್ರಾಹಕರಿಗೆ ಮೋಸ ಮಾಡುತ್ತಿದ್ದ ಪೆಟ್ರೋಲ್ ಪಂಪ್-ಅನ್ನು ಸೀಜ್ ಮಾಡಿದ ಪೊಲೀಸರು, ಇನ್ನೆಷ್ಟು ಹೀಗೆ ಮೋಸ ಮಾಡುತ್ತಿವೆಯೋ??

ನಿಮ್ಮ ಮೊಬೈಲ್-ನಲ್ಲಿ ಸಿಗುವ ಪ್ಲೇಸ್ಟೋರ್ ಮೂಲಕ app download ಮಾಡುವ ಹಾಗೇನೆ HP Re-Fuel app ಸಿಗುತ್ತೆ ಈ app ಗೆ ಸಂಬಂಧಪಟ್ಟ ಹಾಗೆ, ಅಧಿಕೃತ ವೆಬ್​ಸೈಟ್​ನಲ್ಲಿ ನೀಡಲಾಗಿರುವ ಮಾಹಿತಿ ಪ್ರಕಾರ, ನೀವು ಹೆಚ್​ಪಿ ಗ್ಯಾಸ್​ ಸಿಲಿಂಡರ್​ನ್ನು HP ರಿಫ್ಯೂಯೆಲ್ ಆ್ಯಪ್ ಮೂಲಕ ಖರೀದಿಸುತ್ತಿದ್ದರೆ ನಿಮಗೆ ಒಂದು ಲೀಟರ್​ ಪೆಟ್ರೋಲ್ ಸಿಗಲಿದೆ. ಈ ಆಫರ್​ನ್ನು ಪಡೆಯಲು ನೀವು ಮಾಡಬೇಕಿರುವುದು ಇಷ್ಟೇ.

ಪೆಟ್ರೋಲ್ ಪಡೆಯುವುದು ಹೇಗೆ?:

HPCL ಕಂಪೆನಿಯು HP ರಿಫ್ಯೂಯೆಲ್ ಆ್ಯಪ್​ನ್ನು ಪರಿಚಯಿಸಿದೆ. ಈ ಅಪ್ಲಿಕೇಶನ್​ ಮೂಲಕ ನೀವು ಹೆಚ್​ಪಿ ಎಲ್​ಪಿಜಿ ಗ್ಯಾಸ್ ಬುಕ್ ಮಾಡಿಕೊಳ್ಳಬಹುದು. ಅಲ್ಲದೆ ಆ್ಯಪ್​ ಸಹಾಯದಿಂದಲೇ ಹಣ ಪಾವತಿಸುವ ಸೌಲಭ್ಯವನ್ನೇ ನೀಡಲಾಗಿದೆ. ಈ ರೀತಿಯಾಗಿ ನೀವು ಹೆಚ್​ಪಿ ಎಲ್​ಪಿಜಿ ಬುಕ್ ಮಾಡಿ, ಪಾವತಿ ಮಾಡಿದರೆ, ಗ್ರಾಹಕರಿಗೆ HPCL ಒಂದು ಲೀಟರ್ ಪೆಟ್ರೋಲ್​ನ್ನು ಉಚಿತವಾಗಿ ನೀಡುತ್ತದೆ. ಈ ಲಾಭವನ್ನು ಪಡೆಯಲು ಹೆಚ್ಚಿನ ಜನರು ಈ app- ಗೆ ಮೊರೆ ಹೋಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಈ app ಬಳಕೆಯಿಂದ ಲಾಭವೇನು?

Also read: ಪೆಟ್ರೋಲ್ ಬಂಕ್-ನಲ್ಲಿ ಮೊಬೈಲ್ ಬಳಸುವುದು ಬ್ಯಾನ್ ಆಗಿದ್ದರೂ, PayTM ಅಥವಾ BHIM ಆಪ್-ಗಳನ್ನು ಬಳಸುವುದು ಎಷ್ಟು ಸುರಕ್ಷಿತ

ನೀವು ಈ ಹಿಂದೆ ಗ್ಯಾಸ್ ಬುಕ್ ಮಾಡಲು direct ಮೊಬೈಲ್ ಮೂಲಕ book ಮಾಡಬೇಕಿತ್ತು ಇದಕ್ಕೆ ಮೆಸೇಜ್ ಫ್ರೀ ಇಲ್ಲವೆಂದರೆ ಹಣ ಕಟ್ ಆಗುತ್ತಿತು ಮತ್ತು ಇದು ಎಲ್ಲರಿಗೂ ತಿಳಿದಿರಲಿಲ್ಲ ಇದರಿಂದ ಜನರಿಗೆ ಸ್ವಲ್ಪ ಕಿರಿಕಿರಿ ಕೂಡ ಆಗುತ್ತಿತು ಈಗ ಬಂದಿರುವ HP Re-Fuel app ನಿಂದ ಗ್ಯಾಸ್ ಬುಕ್ ಮಾಡುವುದು ಮತ್ತು ಹಣ ಪಾವತಿ, ಬಿಲ್, ಪಾವತಿ. ಹೀಗೆ ಅನೇಕ ತರಹದ ಅನುಕೂಲತೆಗಳು ಇವೆ.

ಈ app ಮೂಲಕ ಇತರೆ ಲಾಭವೇನು?

HP ಪೆಟ್ರೋಲ್ ಪಂಪ್ ನಲ್ಲಿ ಡೈರೆಕ್ಟ್ ಆಗಿ ಪೆಟ್ರೋಲ್ ಗೆ ಹಣ ಪಾವತಿಸುವ ಬದಲು ಈ HP Re-Fuel ಮೂಲಕ ಹಣ ಪಾವತಿ ಮಾಡಿದರೆ ಒಂದು ಲೀಟರ್ ವರೆಗೂ ಫ್ರೀ ಪೆಟ್ರೋಲ್ ಪಡೆಯಬಹುದು. ಇದು ಹೇಗೆ ಅಂದರೆ. ಇದೂ ಕೂಡ ಆ್ಯಪ್​ ಆಫರ್​ ಆಗಿದ್ದು, ಇದನ್ನು ಪಡೆಯಲು ಮೊಬೈಲ್​ನಲ್ಲಿ ಹೆಚ್​ಪಿ ರಿಫ್ಯೂಯೆಲ್ ಆ್ಯಪ್​ನ್ನು ಡೌನ್​ಲೋಡ್ ಮಾಡಿಕೊಳ್ಳಬೇಕು. ನಂತರ ಹೆಚ್​ಪಿ ಪಂಪ್​ನಲ್ಲಿ 5 ಲೀಟರ್​ ತನಕ ಪೆಟ್ರೋಲ್​ನ್ನು ಖರೀದಿಸಿ, ಹೆಚ್​​ಪಿ ಆ್ಯಪ್ ಮೂಲಕ ಪಾವತಿ ಮಾಡಬೇಕು. ನೀವು ಹಣವನ್ನು ಪಾವತಿಸಿದ ಬಳಿಕ ನಿಮಗೆ ಒಂದು ಲೀಟರ್ ಪೆಟ್ರೋಲ್ ಉಚಿತವಾಗಿ ದೊರೆಯಲಿದೆ. ಆದಷ್ಟು ಬೇಗೆ ಇದರ ಲಾಭವನ್ನು ಪಡೆಯರಿ.

Also read: ಪೆಟ್ರೋಲ್ ಬಂಕ್-ನಲ್ಲಿ ಕೆಲಸ ಮಾಡುವ ಈ ಹುಡುಗನ ಸಾಧನೆಯಿಂದ ಎಲ್ಲರೂ ಪ್ರೇರೇಪಿತರಾಗಲೇಬೇಕು..

ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು http://www.hindustanpetroleum.com ವೆಬ್​ಸೈಟ್​ನಲ್ಲಿ ಪರಿಶೀಲಿಸಬಹುದು.