ಈ ಮುಸ್ಲಿಂ ವ್ಯಕ್ತಿಯ ಹೆಸರು ಡಾ. ಹನೀಫ್ ಖಾನ್ ಶಾಸ್ತ್ರೀ

0
938

ಡಾ. ಹನೀಫ್ ಖಾನ್ ಶಾಸ್ತ್ರೀ, ಏನಿದು ಶಾಸ್ತ್ರೀ ಅಂತ ಯಾಕೆ ಬರೆದಿದ್ದೇನೆ ಅಂತ ಅಂದುಕೊಂಡಿದ್ದೀರಾ? ಹೌದು, ಇವರ ಹೆಸರೇ ಹನೀಫ್ ಖಾನ್ ಶಾಸ್ತ್ರೀ ಅಂತ. ಕುರ್ ಆನ್ ಮತ್ತು ಹಿಂದು ಪುರಾಣಗಳಲ್ಲಿರುವ ಸಮಾನ ಹೋಲಿಕೆಯನ್ನು ಎತ್ತಿಹಿಡಿಯುವ ಮೂಲಕ ಪ್ರಶಂಸೆಗೆ ಒಳಗಾಗಿದ್ದಾರೆ.

ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಶಾಸ್ತ್ರಿ ರವರು, ಹಿಂದೂ ಮತ್ತು ಮುಸ್ಲಿಂ ಧರ್ಮಗಳಲ್ಲಿ ಕೋಮ ಸಾಮರಸ್ಯ ಬೀರುವ ಹೋಲಿಕೆಗಳ ಕುರಿತಂತೆ ‘ಗೀತಾ ಔರ್ ಕುರ್ ಆನ್ ಮೇನ್ ಸಂನ್ಯಾಶ್ಯ’, ‘ವೇದ್ ಔರ್ ಕುರ್ ಆನ್ ಸೆ ಮಹಾಮಂತ್ರ’ ಮತ್ತು ‘ಗಾಯತ್ರಿ ಔರ್ ಸುರಾ ಫತಿಹಾ ‘ ಎಂಬ ಹಿಂದಿ ಮತ್ತು ಸಂಸ್ಕ್ರತದಲ್ಲಿ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕುರ್ ಆನ್ ಮತ್ತು ಹಿಂದು ಪುರಾಣಗಳಲ್ಲಿರುವ ಸಮಾನ ಹೋಲಿಕೆಗಳ ಬಗ್ಗೆ ಬರೆದ ಲೇಖನಗಳಿಗೆ 2009ರಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿರುತ್ತಾರೆ.

ZEE ನ್ಯೂಸ್ ವಾಹಿನಿ ಸಂದರ್ಶನ ಒಂದರಲ್ಲಿ ಡಾ. ಹನೀಫ್ ಖಾನ್ ಶಾಸ್ತ್ರೀ ರವರು ಹಿಂದೂ ಸಂಪ್ರದಾಯದ ಭಗವತ್ ಗೀತೆ ಜೊತೆಗೆ ಇರುವ ಭಾವನೆಗಳನ್ನು ಎತ್ತಿಹಿಡಿದಿದ್ದಾರೆ. ಇವರು ಹಿಂದೂ ಎಂಬುವುದು ಧರ್ಮದ ಹೆಸರಲ್ಲ ಅದು ಒಂದು ಸಂಸ್ಕೃತಿಯ ಪ್ರತೀಕ ಎಂದು ಹೇಳುತ್ತಾರೆ, ಹಾಗೆಯೇ ಭಾರತದಲ್ಲಿನ ಭಾವೈಕ್ಯತೆಯ ಬಗ್ಗೆ ಅನೇಕ ಮಾತುಗಳನ್ನು ಹೇಳುತ್ತಾರೆ.

ಮೊಹಮದ್ ಹನೀಫ್ ಖಾನ್ ರವರಿಗೆ ಡಾ. ಮೊಹಮದ್ ಹನೀಫ್ ಖಾನ್ ಶಾಸ್ತ್ರೀ ಎಂದು ಹೇಗೆ ಬಂತು???

ಮೊಹಮದ್ ಹನೀಫ್ ಖಾನ್ ರವರಿಗೆ ಶಾಸ್ತ್ರೀ ಅಂತ ಹೇಗೆ ಬಂತು ಅಂತ ಕೇಳಿದಾಗ ಮೊಹಮದ್ ಹನೀಫ್ ಖಾನ್ ರವರು ಶಾಸ್ತ್ರೀ ಅನ್ನುವುದು ಅವರ ಡಿಗ್ರಿ ಮತ್ತು ನಾವು ಭಾರತೀಯರ ಎನ್ನುವುದಕ್ಕೋಸ್ಕರವಾಗಿ ಶಾಸ್ತ್ರೀ ಅನ್ನುವುದನ್ನು ತಮ್ಮ ಹೆಸರಿನ ಮುಂದೆ ಹಾಕಿಕೊಂಡಿದ್ದರಂತೆ. ಮತ್ತು ಒಂದು ಸಾಲ ಅಫ್ಘಾನಿಸ್ತಾನಕ್ಕೆ ಶಾಸ್ತ್ರೀ ಯವರು ಹೋದಾಗ ಅಲ್ಲಿನ ತಾಲಿಬಾನ್ ರವರು ಅವರನ್ನು ಹಿಡಿದುಕೊಂಡು ನೀವು ಮುಸ್ಲಿಂ ಆದರೂ ಶಾಸ್ತ್ರೀ ಅಂತ ಯಾಕೆ ನಿಮ್ಮ ಹೆಸರಿನ ಮುಂದೆ ಇದೆ ಎಂದು ಕೇಳಿದಾಗ ಅವರು ಹೇಳಿದರಂತೆ, ಜಗತ್ತಿನಲ್ಲಿ ೧ ಕೋಟಿಗೂ ಹೆಚ್ಚು ಮೊಹಮದ್ ಹನೀಫ್ ಹೆಸರುಳ್ಳವರು ಸಿಗುತ್ತಾರೆ ಅವರೆಲ್ಲರನ್ನು ಕರಿಸಿ ಅದರಲ್ಲಿ ಯಾರು ಯಾವ ದೇಶದವರು ಎಂದು ತಿಳಿಯಲು ಅಸಾಧ್ಯ. ಅದೇ, ಮೊಹಮದ್ ಹನೀಫ್ ಖಾನ್ ಶಾಸ್ತ್ರೀ ಎಂದು ತಿಳಿದಾಗ ನಾವು ಭಾರತದವರೆಂದು ಅವರೇ ತಿಳಿದುಕೊಳ್ಳುತ್ತಾರೆ.

ಎಷ್ಟು ನಿಜವಾದ ಮಾತು… ಸಮಾಜದಲ್ಲಿ ಏಕತೆ ಹಾಗೂ ಶಾಂತಿ-ಸಮರಸವನ್ನು ನೆಲೆಗೊಳಿಸುವ ಇಂತಹ ಕರೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು.