ಡ್ರಾಮಾ ಜೂನಿಯರ್ಸ್ ನಿಂದ T N ಸೀತಾರಮ್ ರವರು ಹೊರ ನಡೆದಿದ್ದೇಕೆ?? ಅವರ ಬದಲಿಗೆ ಬಂದಿರುವ ಜಡ್ಜ್ ಯಾರು ಗೊತ್ತೇ??

0
712

ಹೌದು, ಕಿರುತೆರೆಯ ಪ್ರಸಿದ್ಧ ರಿಯಾಲಿಟಿ ಶೊ ಆಗಿರಿವ ಡ್ರಾಮ ಜೂನಿಯರ್ ಸೀಸನ್ 2 ನ ಜಡ್ಜ್ ಸ್ಥಾನದಿಂದ ಟಿ ಎನ್ ಸೀತಾರಮ್ ರವರು ಹೊರನಡೆದಿದ್ದಾರೆ..

ಈಗಾಗಲೇ ಮೊದಲ ಸೀಸನ್ ನಲ್ಲಿ ಭರ್ಜರಿ ಯಶಸ್ಸು ಪಡೆದಿದ್ದ ಡ್ರಾಮಾ ಜೂನಿಯರ್ಸ್ ನ ಎರಡನೇ ಸೀಸನ್ ಅನ್ನೂ ಹೊಸ ಪ್ರತಿಭೆಗಳೊಂದಿಗೆ ಶುರು ಮಾಡಿದರು.. ಆದರೆ ಜಡ್ಜಸ್ ನಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ‌. ಏಕೆಂದರೆ ಸೀತಾರಮ್ ಸರ್ ಲಕ್ಷ್ಮಿ ಅಮ್ಮ ಹಾಗೂ ವಿಜಯರಾಘವೇಂದ್ರ ರವರ ನಿಷ್ಪಕ್ಷಪಾತ ತೀರ್ಪಿನಿಂದಾಗಿ ಸಹ ಕಾರ್ಯಕ್ರಮ ಹೆಸರಾಗಿತ್ತು..

ಈಗ ಈ ಮೂವರಲ್ಲಿ ಸೀತಾರಮ್ ಸರ್ ರವರು ಜಡ್ಜ್ ಸ್ಥಾನದಿಂದ ಕೆಳಗಿಳಿದಿದ್ದಾರೆ.. ಕಾರಣವೇನೆಂದರೆ ಸೀತಾರಮ್ ರವರ ಈಗಿನ ಚಿತ್ರದ ಪ್ರಚಾರ ಹಾಗೂ ಮುಂದಿನ ಚಿತ್ರದ ತಯಾರಿಗಾಗಿ ಹೊರದೇಶಕ್ಕೆ ಹೋಗಬೇಕಿದೆ.. ನಂತರ ಒಂದು ಸಾಕ್ಶ್ಯಾ ಚಿತ್ರದ ಸಲುವಾಗಿ 3 ವಾರಗಳು ಡ್ರಾಮಾ ಜೂನಿಯರ್ಸ್ ಗೆ ಬರಲಾಗುವುದಿಲ್ಲ.. ಡೇಟ್ಸ್ ಹೊಂದಿಸಿಕೊಳ್ಳುವುದು ಕಷ್ಟವಾಗುತ್ತಿದೆ.. ಅದಕ್ಕಾಗಿಯೇ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ..

ಹೊಗುವ ಮುನ್ನ ಕಾರ್ಯಕ್ರಮದ ವ್ಯವಸ್ಥಾಪಕರಿಗೆ ಹಾಗೂ ಜೀ ವಾಹಿನಿಗೆ ನಾನು ಚಿರಋಣಿ ಎಂದು ಹೇಳುವ ಮೂಲಕ ಶೊ ಬಗ್ಗೆ ಇದ್ದ ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸಿದ್ದಾರೆ..

ಹಾಗೂ ಇದೇ ಶನಿವಾರದಿಂದ ಸೀತಾರಮ್ ಸರ್ ನ ಸ್ಥಾನವನ್ನು ನಮ್ಮ ಹಿರಿಯ ನಟರಾದ ಮುಖ್ಯಮಂತ್ರಿ ಚಂದ್ರು ಸರ್ ರವರು ತುಂಬಲಿದ್ದಾರೆ..

ಈ ದೊಡ್ಡ ಮಟ್ಟದ ಬದಲಾವಣೆ ಇಂದ ಡ್ರಾಮಾ ಜೂನಿಯರ್ಸ್ ಶೊ ನ ಟಿ ಆರ್ ಪಿ ಮೇಲೆ ಪರಿಣಾಮ ಬೀರುವುದೇ ಕಾದು ನೋಡಬೇಕಿದೆ..
ಆಲ್ ದಿ ಬೆಸ್ಟ್ ಸೀತಾರಮ್ ಸರ್ ಹಾಗೂ ಮುಖ್ಯಮಂತ್ರಿ ಚಂದ್ರು ಸರ್..