ಮಹಾಭಾರತದ ದ್ರೌಪದಿಯ ಈ ಒಂಬತ್ತು ವಿಷಯಗಳನ್ನು ನೀವು ಓದಿದರೆ ಒಬ್ಬ ಹೆಣ್ಣು ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಅಂತ ಗೊತ್ತಾಗುತ್ತೆ..!

0
2116

ಮಹಾಭಾರತದ ಅತ್ಯಂತ ಸಂಕೀರ್ಣವಾದ ಪಾತ್ರಗಳಲ್ಲಿ ದ್ರೌಪದಿಯ ಪಾತ್ರ ಒಂದು. ದ್ರೌಪದಿದಿಯ ಕುರಿತಾದ ಪ್ರತಿಯೊಂದು ಅಂಶವು ಕುತೂಹಲಕಾರಿಯಾಗಿರುತ್ತದೆ.

೧. ಭಾರತೀಯ ಸಾಹಿತ್ಯದ ಪ್ರಸಿದ್ಧ ಸ್ತ್ರೀಪಾತ್ರಗಳಲ್ಲಿ ದ್ರೌಪದಿಯ ಪಾತ್ರವೂ ಒಂದು. ಪಾಂಚಾಲ ರಾಜ ದ್ರುಪದನ ಅಗ್ನಿಪುತ್ರಿ. ದ್ರುಷ್ಟ್ಯದ್ಯುಮ್ಯನ ತಂಗಿ.

೨. ಸ್ವಯಂವರದಲ್ಲಿ ಪಣವಾಗಿರಿಸಿದ್ದ ಮತ್ಸ್ಯ ಯಂತ್ರವನ್ನು ಅರ್ಜುನ ಭೇದಿಸಿದಾಗ ದ್ರೌಪದಿ ವರುಣಮಾಲಿಕೆಯನ್ನು ಅರ್ಜುನನ ಕೊರಳಿಗೆ ಹಾಕಿ ಅವನನ್ನು ವರಿಸುತ್ತಾಳೆ. ಕುಂತಿಯ ಅಜಾಗರೂಕ ಮಾತಿನಿಂದ ಈಕೆ ಪಾಂಡವರ ಧರ್ಮಪತ್ನೀಯಾಗ ಬೇಕಾಗುತ್ತದೆ.

೩. ದ್ರೌಪದಿ ಐವರೂ ಪಾಂಡವರ ಪತ್ನಿ. ಹಿಂದಿನ ಜನ್ಮದಲ್ಲಿ ದ್ರೌಪದಿ ಶಿವನನ್ನು ಕುರಿತು ತಪಸ್ಸು ಮಾಡಿ, ಐದು ಒಳ್ಳೆಯ ಗುಣಗಳಿರುವ ವರನನ್ನು ತನಗೆ ಗಂಡನಾಗಿ ಕೊಡಬೇಕೆಂದು ವಿನಂತಿಸಿಕೊಳ್ಳತ್ತಾಳೆ. ಆದರೆ ಶಿವ ಐದು ಒಳ್ಳೆಯ ಗುಣಗಳು ಒಬ್ಬನಲ್ಲಿ ಇರಲು ಸಾಧ್ಯವಿಲ್ಲ. ಮುಂದಿನ ಜನ್ಮದಲ್ಲಿ ನಿನ್ನ ಇಷ್ಟಾರ್ಥ ನೆರವೇರುತ್ತದೆ ಎಂದು ಹೇಳುತ್ತಾನೆ. ಅದರ ಫಲವಾಗಿ ದ್ರೌಪದಿ ಪಾಂಡವರ ಪತ್ನಿಯಾಗುತ್ತಾಳೆ.

೪. ದ್ರೌಪದಿ ಐವರೂ ಪಾಂಡವರನ್ನು ಮದುವೆ ಅಗುದಕ್ಕಿಂತ ಮುಂಚೆ ಒಂದು ಷರತ್ತನ್ನು ಹಾಕಿರುತ್ತಾಳೆ ಅದೇನೆಂದರೆ, ಪಾಂಡವರು ದ್ರೌಪದಿಯನ್ನು ಮದುವೆಯಾದ ಬಳಿಕ ಪಾಂಡವರು ಬೇರೆ ರಾಣಿಯರನ್ನು ಮದುವೆಯಾದರೂ ಇಂದ್ರಪ್ರಸ್ಥದ ಮಹಾರಾಣಿ ನಾನೇ ಆಗಿರಬೇಕು ಮತ್ತು ಮದುವೆಯಾದ ಹೆಂಡತಿಯನ್ನು ಇಂದ್ರಪ್ರಸ್ಥಕ್ಕೆ ಕರೆತರಬಾರದೆಂದು ಹೇಳಿರುತ್ತಾಳೆ.

೫. ದ್ರೌಪದಿ ಐವರೂ ಪಾಂಡವರ ಪತ್ನಿಯಾದರು ಅವಳನ್ನು ಮಹಾ ಪತಿವ್ರತೆ ಎಂದು ಹೇಳಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ದ್ರೌಪದಿಗೆ ಶಿವನಿಂದ ಸಿಕ್ಕ ವರ. ಪ್ರತಿದಿನ ದ್ರೌಪದಿ ಪ್ರತಿಯೊಬ್ಬ ಗಂಡನ ಜೊತೆ ಕಾಲ ಕಳೆದ ಮರುದಿನ ಬೆಳೆಗ್ಗೆ ಸ್ನಾನದ ನಂತರ ಅವಳು ಕನ್ನೆಯಾಗುತ್ತಾಳೆ. ಇದರಿಂದ ಅವಳನ್ನು ಐದು ಜನ ಗಂಡಂದಿರು ಇದ್ದರೂ ಮಹಾ ಪತಿವ್ರತೆ ಎಂದು ಹೇಳಲಾಡುತ್ತದೆ.

೬. ರಾಜಸೂಯಯಾಗ ಸಂದರ್ಭದಲ್ಲಿ ದೂರ್ಯೋಧನನನ್ನು ಕಂಡು ಈಕೆ ಪರಿಹಾಸ ಮಾಡಿದಳಾಗಿ ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ದುರ್ಯೋಧನ ಮುಂದೆ ದ್ಯೂತದಲ್ಲಿ ಪಾಂಡವರು ತಮ್ಮ ಸರ್ವಸ್ವವನ್ನು ಹೆಂಡತಿಯನ್ನು ಪಣವಾಗಿಟ್ಟು ಸೋತ ಕಾಲದಲ್ಲಿ ಈಕೆಯನ್ನು ತುಂಬಿದ ಸಭೆಗೆ ಕರೆಸಿ ವಸ್ತ್ರಾಪಹರಣ ಮಾಡಲು ಯತ್ನಿಸಿದ.

೭. ವಸ್ತ್ರಾಭರಣ ಸಮಯದಲ್ಲಿ ಶ್ರೀ ಕೃಷ್ಣನು ದ್ರೌಪದಿಯ ಮಾನವನ್ನು ಕಾಪಾಡುತ್ತಾನೆ. ಈ ಸಂದರ್ಭದಲ್ಲಿ ಶ್ರೀ ಕೃಷ್ಣನು ನಿಮಿತ್ತ ಮಾತ್ರ ಇದರ ಹಿಂದೆ ಒಂದು ಕಥೆ ಇದೆ. ಅದೇನಾನೆಂದರೆ ಒಂದು ದಿನ ಋಷಿ ದೂರ್ವಾಸ ನದಿಯಲ್ಲಿ ಸ್ನಾನ ಮಾಡಲು ಹೋದಾಗ ಅವರ ಅಂಗ ವಸ್ತ್ರ ನದಿಯಲ್ಲಿ ಕೊಚ್ಚಿ ಹೋಗುತ್ತದೆ. ಆಗ ಅಲ್ಲೇ ಇದ್ದ ದ್ರೌಪದಿ ತನ್ನ ಸೀರೆಯ ಒಂದು ಭಾಗವನ್ನು ಹರಿದು ಕೊಡುತ್ತಾಳೆ ಇದರಿಂದ ಪ್ರಸನ್ನನಾದ ಋಷಿ ದ್ರೌಪದಿಗೆ ಮುಂದೆ ಒಂದು ದಿನ ಕೊನೆಯೇ ಇರದ ಸೀರೆಯನ್ನು ನೀಡುತ್ತೇನೆ ಎಂದು ವರವನ್ನು ಕೊಡುತ್ತಾನೆ.

೮. ದ್ರೌಪದಿ ಯುಧಿಷ್ಠಿರನಿಂದ ಪ್ರತಿವಿಂಧ್ಯ, ಭೀಮನಿಂದ ಶ್ರುತಸೋಮ, ಅರ್ಜುನನಿಂದ ಶ್ರತುಕೀರ್ತಿ, ನಕುಲನಿಂದ ಶತಾನೀಕ, ಸಹದೇವನಿಂದ ಶ್ರುತಸೇನ ಎಂಬ ಐದು ಜನ ಮಕ್ಕಳನ್ನು ಪಡೆದಳು.

೯. ತಮಗಾದ ಅನ್ಯಾಯವನ್ನು ಪ್ರತಿಭಟಿಸ್ತ, ಅದಕ್ಕೆ ಪ್ರತೀಕಾರ ತೀರಿಸುತ್ತ, ಗೋಳಾಟ, ಸ್ವಾನುಕಂಪಗಳಿಲ್ಲದೆ ಅದನ್ನ ತನಗೆ ತಾನೆ ನಿಭಾಯಿಸುತ್ತ ಜೀವನ ಉದ್ದಕ್ಕೂ ಕಷ್ಟದಲ್ಲೇ ಬಂದವಳು