ವಾಹನ ಸವಾರರೆ ಎಚ್ಚರ; ಇನ್ಮುಂದೆ ಡ್ರಂಕ್ ಅಂಡ್ ಡ್ರೈವ್‌’ ಮಾಡಿದರೆ ಬುಡಕ್ಕೆ ಕತ್ತರಿ ಇಡುವ, ಕೇಂದ್ರ ಸಾರಿಗೆ ಇಲಾಖೆಯ ಹೊಸ ನಿಯಮ..

0
556

ವಾಹನಗಳ ಅಪಘಾತಗಳಲ್ಲಿ ಹೆಚ್ಚಾಗಿ ಕಂಡು ಬರುವ ಪ್ರಕರಣಗಳು ಡ್ರಂಕ್ ಅಂಡ್ ಡ್ರೈವ್ ಎಂದು ಕೇಳಿ ಬರುತ್ತಿವೆ. ಇದನ್ನು ಹತ್ತೋಟಗೆ ತರಲು ಸರ್ಕಾರ ಏನೆಲ್ಲಾ ಕಾಯ್ದೆ ತಂದರು ಈ ನಸೆಯ ಮಂದಿ ತಮ್ಮ ಚಾಳಿ ಬಿಡುತ್ತಿಲ್ಲ, ಕಳೆದ ವರ್ಷವಂತು ಇಂತಹ ಪ್ರಕರಣಗಳು ಹೇರಳವಾಗಿದ್ದು ಇದರಲ್ಲಿ ಅಮಾಯಕರೆ ಹೆಚ್ಚು ಬಲಿಯಾಗಿದ್ದು ಎಂದು ತಿಳಿದು ಬಂದಿದೆ. ಈ ವಿಷಯವಾಗಿ ಸರ್ಕಾರ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು ಇನ್ಮುಂದೆ ಕುಡಿದು ವಾಹನ ಓಡಿಸಿ ಡ್ರೈವ್‌’ ಕೇಸ್‌ನಲ್ಲಿ ಸಿಕ್ಕಿಬಿದ್ರೆ ದೊಡ್ಡ ಮಾರಿಹಬ್ಬಾನೆ ಇದೆ.

ಹೌದು ಸುಪ್ರೀಂಕೋರ್ಟ್ ಕೋರ್ಟ್ ನಿರ್ದೇಶನದಂತೆ, ಕೇಂದ್ರ ಸರ್ಕಾರವು ಜಾರಿಗೆ ತರಲು ಹೊರಟಿರುವ ಹೊಸ ನಿಯಮದ ಪ್ರಕಾರ ಕುಡಿದ ವಾಹನ ಚಾಲನೆ ಮಾಡಿ ಅಪಘಾತ ಸಂಭವಿಸಿ ಸಾವಿಗೆ ಕಾರಣರಾದರೆ 7 ವರ್ಷಗಳ ಕಾಲ ಸೆರೆವಾಸ ವಿಧಿಸುವ ಹೊಸ ಕಾನೂನು ಜಾರಿ ಮಾಡುತ್ತಿದ್ದು, ಈ ಹಿಂದೆ ಇದ್ದ 2 ವರ್ಷಗಳ ಜೈಲುವಾಸದ ಮಿತಿಯನ್ನು ಹೆಚ್ಚಿಸಲಾಗುತ್ತಿದೆ. ಸದ್ಯ ಇರುವ ನಿಯಮ 2 ವರ್ಷವಿದೆ ಆದರು ಸಹ ಅಪಘಾತ ಪ್ರಕರಣಗಳು ಮಾತ್ರ ಹತ್ತೋಟಗೆ ಬರುತ್ತಿಲ್ಲ. ಇದರಿಂದ ಸುಪ್ರೀಂ ಸೂಚನೆ ಮೇರೆಗೆ ಯಾವುದೇ ಬೆಲ್ ಇಲ್ಲದೆ 7 ವರ್ಷ ಜೈಲು ವಾಸವನ್ನು ವಿಧಿಸುವ ಬಗ್ಗೆ ಕೇಂದ್ರ ಒಪ್ಪಿಗೆ ಸೂಚಿಸಿದೆ.

ವಿಕೇಂಡ್‌ ನಾಸೆಗೆ ಹೆಚ್ಚು ಅಮಾಯಕರ ಬಲಿ;

ರಜೆ ದಿನಗಳಲ್ಲಿ ಮತ್ತು ವಾರದ ಅಂತ್ಯದಲ್ಲಿ ಜನರು ಹೆಚ್ಚು ಮಜಾ ಮಾಡುವ ಉದ್ದೇಶದಿಂದ ಕುಡಿದು ವಾಹನ ಓಡಿಸುತ್ತಾರೆ ಇದರಿಂದ ಅಮಾಯಕರು ಹೆಚ್ಚು ಬಲಿಯಾಗುತ್ತಿದ್ದು ಇದರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿ ಇಂತಹ ಪ್ರಕರಣಗಳನ್ನು ಹತ್ತೋಟಗೆ ತರಲು ಕೇಂದ್ರ ಸಾರಿಗೆ ಇಲಾಖೆಯು ವಿಕೇಂಡ್‌ಗಳಲ್ಲಿ ಹೆಚ್ಚಾಗಿ ದಾಖಲಾಗುವ ಕುಡಿದು ಚಾಲನೆ ಪ್ರಕರಣಗಳನ್ನು ತಗ್ಗಿಸಲು ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೆ ಮಾಡಲಾಗುತ್ತಿದೆ. ಇದು ಮುಂಬರುವ ದಿನಗಳಲ್ಲಿ ಜಾರಿಗೆ ಬರುವ ಸಾಧ್ಯತೆಗಳಿದ್ದು, ಈ ಬಗ್ಗೆ ಹೊಸ ಕಾನೂನು ರಚನೆಯ ಅವಶ್ಯಕತೆಯಿದೆ. ಇದರಿಂದ ಮುಂದಿನ ಕೆಲವೇ ದಿನಗಳಲ್ಲಿ ಜಾರಿಗೆ ಬರುವುದು ಖಚಿತವಾಗಿದೆ. ಈ ನಿಯಮಗಳಂತೆ ಇನ್ಮುಂದೆ ಕುಡಿದು ವಾಹನ ಓಡಿಸಿ ಅಮಾಯಕ ಜನರ ಪ್ರಾಣವನ್ನು ಬಲಿ ತೆಗೆದೊಕೊಳ್ಳುವ ಮುನ್ನ ಎಚ್ಚರವಾಗಿರುವುದು ಒಳ್ಳೆದಾಗಿದೆ.

ಕುಡಿದು ವಾಹನ ಓಡಿಸಿದರೆ ಮಾನ ಹರಾಜ್;

ನೀವು ಕುಡಿದು ವಾಹನ ಓಡಿಸಿದರೆ ದೊಡ್ಡ ಮೊತ್ತದ ದಂಡವನ್ನು ಕಕ್ಕುವ ಮೂಲಕ ನಿಮ್ಮ ಸಾಹಸವನ್ನು ಕುಟುಂಬಕ್ಕೆ ಮತ್ತು ಉದ್ಯೋಗ ಮಾಡುವ ಯಾವುದೇ ಆಫೀಸ್, ಸಂಸ್ಥೆಗಳಿಗೆ ಮಾಹಿತಿ ನೀಡಿ ನಿಮಗೆ ಬುದ್ದಿಹೆಳಲು ತಿಳಿಸಲಾಗುತ್ತೆ, ಇದಕ್ಕಾದರೂ ಹೆದರಿ ಡ್ರಂಕ್ ಅಂಡ್ ಡ್ರೈವ್‌ ಮಾಡುವುದನ್ನು ಬಿಡುತ್ತಾರೆ ಎನ್ನುವುದು ಕೇಂದ್ರ ಸಾರಿಗೆ ಇಲಾಖೆಗಳ ಉದ್ದೇಶವಾಗಿದೆ. ಈ ನಿಯಮವನ್ನು ಸದ್ಯ ಪುಣೆಯಲ್ಲಿ ಪ್ರಾಯೋಗಿಕ ಜಾರಿಗೆ ಮಾಡಿದ್ದು ಇದರಿಂದ 50 ರಷ್ಟು ಪ್ರಕರಣಗಳು ಕಡಿಮೆಯಾಗಿವೆ. ಆದಕಾರಣ ಈ ಹೊಸ ನಿಯಮಗಳನ್ನು ದೇಶದ ಪ್ರಮುಖ ನಗರಗಳಲ್ಲೂ ಜಾರಿ ಮಾಡುವ ಬಗ್ಗೆ ಕೇಂದ್ರ ಸಾರಿಗೆ ಇಲಾಖೆ ಚಿಂತನೆ ನಡೆಸಿದೆ.

Also read: ಎಚ್ಚರಿಕೆ! ಅಪ್ರಾಪ್ತ ವಯಸ್ಕರು ಕುಡಿದು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಪೋಷಕರು ಜೈಲುಪಾಲು