ಗೋವಾಕ್ಕೆ ಮಜಾ ಉಡಾಯಿಸಲು ಹೋಗುವವರಿಗೆ ಬಿಗ್ ಶಾಕ್; ಇನ್ಮುಂದೆ ಬೀಚ್-ನಲ್ಲಿ ಎಣ್ಣೆ ಕುಡಿದರೆ ಬಾರಿದಂಡ..

0
641

ಮೋಜು ಮಸ್ತಿಗೆ ಗೋವಾ ಮಸ್ತ್ ಹಾಗಂತ ಸಸ್ತಾದಲ್ಲಿ ಸಿಗುವ ಎಣ್ಣೆಯನ್ನು ಬೀಚ್ ನಲ್ಲಿ ಕುಡಿದರೆ ಬಿಳ್ಳಲಿದೆ ಬಾರಿ ದಂಡ ಜೊತೆಗೆ ಗೋಸಾ. ಹೌದು ಜೀವನದಲ್ಲಿ ಒಂದು ಸಾರಿಯಾದರು ಗೋವಾ ಹೋಗಲೇಬೇಕು ಮಜಾ ಮಾಡಲೇಬೇಕು ಅನ್ನೋದು ಎಲ್ಲರ ತವಕ. ಅದರಲ್ಲಿ ಗೋವಾ ಅಂದರೆ ಮೊದಲು ನೆನಪಿಗೆ ಬರುವುದು ಅಲ್ಲಿನ ಮದ್ಯಗಳು. ಏಕೆಂದರೆ ಬೇರೊಂದು ಸ್ಥಳಗಳಿಗೆ ಹೋಲಿಕೆ ಮಾಡಿದರೆ ಗೋವಾ ಮದ್ಯ ಬಾರಿ ಕಡಿಮೆ ಬೆಲೆಗೆ ಸಿಗುತ್ತದೆ ಅದಕ್ಕಾಗಿಯೇ ಗೋವಾವನ್ನು ಮದ್ಯ ಪ್ರಿಯರ ತವರು ಎಂದು ಕರೆಯುತ್ತಾರೆ.

ಹಾಗೆಯೇ ಗೋವಾ ಪ್ರವಾಸಕ್ಕೆ ಮದ್ಯ ಕುಡಿಯಲೆಂದೇ ದೇಶದ ಮೂಲೆ ಮೂಲೆಯಿಂದ ಬರುವ ಜನರು ಮದ್ಯ ಕುಡಿಯುವ ಚಟವನ್ನು ಮುಗಿಸಿಕೊಂಡು ಬರುತ್ತಾರೆ. ಇಷ್ಟೊಂದು ಸಸ್ತಾದಲ್ಲಿ ದೊರೆಯಿವ ಮದ್ಯದ ನಾಡಿಗೆ ಒಂದು ಸಾರಿ ಹೋದರೆ ಮತ್ತೆ ಮತ್ತೆ ಹೋಗಬೇಕು ಅನ್ಸುತ್ತೆ ಏಕೆಂದರೆ ಸಮುದ್ರದ ದಡದಲ್ಲಿ ಎಣ್ಣೆ ಕುಡಿಯೋದು ಬಹುತೇಕರಿಗೆ ಇಷ್ಟ ಹಾಗಾಗಿ ಪ್ರವಾಸಿಗರು ಇಲ್ಲಿ ಸಮುದ್ರದ ದಡದಲ್ಲಿ ಕೂತು ಮದ್ಯಪಾನ ಕುಡಿಯುತ್ತಾರೆ,ಆದರೆ ಇನ್ಮುಂದೆ ಅಂತಹ ಮಜಾ ಮಾಡುವಂತಿಲ್ಲ.

ಏನಿದು ಸುದ್ದಿ?

ಹೌದು ಗೋವಾದ ಕಡಲ ತೀರಗಳು ಹಾಗೂ ಪ್ರವಾಸಿ ತಾಣಗಳಲ್ಲಿ ಇನ್ನುಮುಂದೆ ಮದ್ಯಪಾನ ಮಾಡಿದರೆ 2,000 ರೂ ದಂಡ ವಿಧಿಸಲಾಗುತ್ತದೆ! ಅಲ್ಲದೇ ಬೀಚ್‌ಗಳಲ್ಲಿ ಅಡುಗೆ ಮಾಡುವುದನ್ನೂ ನಿಷೇಧಿಸಲಾಗಿದೆ. ಒಂದು ವೇಳೆ ಈ ನಿಯಮವನ್ನು ಉಲಂಘಿಸಿ ಮದ್ಯಪಾನ ಮಾಡಿದರೆ 2,000 ರೂ. ದಂಡ ವಿಧಿಸಲಾಗುತ್ತದೆ! ಅಷ್ಟೇಅಲ್ಲದೆ ಬೀಚ್‌ಗಳಲ್ಲಿ ಅಡುಗೆ ಮಾಡುವುದನ್ನು ನಿಷೇಧಿಸಲಾಗಿದೆ. ಈ ನಿಮಯವನ್ನು ಪಾಲಿಸದೆ ಇದ್ದರೆ ಅಷ್ಟೇ ದಂಡವನ್ನು ತೆರೆಯಬೇಕಾಗುತ್ತೆ. ಈ ಕುರಿತು ಗೋವಾ ಸಚಿವ ಸಂಪುಟವು ಗುರುವಾರ ಅನುಮೋದನೆ ನೀಡಿರುವ ವ್ಯಾಪಾರಿ ತೆರಿಗೆ ಕಾಯ್ದೆ ತಿದ್ದುಪಡಿಯಲ್ಲಿ ಈ ಪ್ರಸ್ತಾವಗಳು ಸೇರಿವೆ.

ಏನಿದು ಹೊಸ ನಿಯಮ?

ರಾಜ್ಯದ ಪರಿಸರವಾದಿಗಳ ಒತ್ತಡಕ್ಕೆ ಮಣಿದಿರುವ ಸರಕಾರ ಇಂತಹ ಕಠಿಣ ಕ್ರಮಕ್ಕೆ ಮುಂದಾಗಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಪ್ರವಾಸೋದ್ಯಮ ಸಚಿವ ಮನೋಹರ ಅಜಗಾಂವಕರ ಅವರು, ”ದೊಡ್ಡ ಗುಂಪುಗಳಲ್ಲಿ ಬರುವ ಪ್ರವಾಸಿಗರು ಕಾನೂನು ಉಲ್ಲಂಘಿಸಿದರೆ 10,000 ರೂ. ದಂಡ ವಿಧಿಸಲಾಗುವುದು. ಅದೇ ತಪ್ಪಿನ ಪುನರಾವರ್ತನೆ ಮಾಡಿದರೆ ಜೈಲು ಶಿಕ್ಷೆ ವಿಧಿಸಲೂ ಅವಕಾಶವಿದೆ. ಕಡಲ ತೀರ ಹಾಗೂ ಪ್ರವಾಸಿ ತಾಣಗಳಲ್ಲಿ ಮದ್ಯಪಾನ ಮಾಡುವುದು, ಬಾಟಲಿ ಒಯ್ಯುವುದು ಹಾಗೂ ಬೀಚ್‌ಗಳು ಸೇರಿದಂತೆ ತೆರೆದ ಸ್ಥಳದಲ್ಲಿ ಅಡುಗೆ ಮಾಡುವುದನ್ನೂ ನಿಷೇಧಿಸಲಾಗಿದೆ. ಹಾಗೆ ಮಾಡಿದರೆ 2,000 ರೂ. ದಂಡ ವಿಧಿಸಲಾಗುವುದು,” ಎಂದು ತಿಳಿಸಿದರು.

ಈ ನಿಯಮದ ಉದ್ದೇಶ?

ಪ್ರವಾಸಕ್ಕೆಂದು ಬರುವ ಜನರು ಪರಿಸರದ ಮೇಲೆ ಮತ್ತು ಸ್ಥಳೀಯ ಪ್ರದೇಶ ಮೇಲೆ ಖಾಳಜಿ ಇಲ್ಲದೆ ಬೇಕಾಬಿಟ್ಟಿಯಾಗಿ ವಸ್ತುಗಳನ್ನು ಮತ್ತು ಬಾಟಲಿಗಳನ್ನು ಚೆಲ್ಲಿ ಅಲ್ಲಿನ ವಾತಾವರಣ ಹಾಳು ಮಾಡುತ್ತಿದ್ದಾರೆ, ಈ ವಿಷಯವಾಗಿ ಹಲವು ಸಂಶೋಧನೆಗಳು ನಡೆದು ಅಲ್ಲಿ ಆಗುವ ಕೆಟ್ಟ ಪರಿಣಾಮಗಳ ಕುರಿತು ವರದಿ ನೀಡಿದ್ದು ಈ ನಿಮಯ ಜಾರಿಮಾಡಲು ಸಾಕ್ಷಿಯಾಗಿದೆ. ಈ ವಿಷಯವಾಗಿ ಈ ಹಿಂದೆ ಹಲವು ಕಾವಲುಗಾರರನ್ನು ನೇಮಿಸಿದ್ದು ಅವರ ಕಣ್ಣು ತಪ್ಪಿಸಿ ಪ್ರವಾಸಿಗರು ಮಲಿನ ಮಾಡುತ್ತಿದ್ದಾರೆ ಎಂದು ಪರಿಸರ ವಾದಿಗಳು ಅಲ್ಲಿನ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಅದನ್ನು ಪರಿಗಣಿಸಿದ ಸಚಿವ ಸಂಪುಟವು ಈ ನಿರ್ಧಾರ ಮಾಡಿದೆ. ಈ ಕುರಿತು ಇನ್ಮುಂದೆ ಗೋವಾಕ್ಕೆ ತೆರಳುವ ಪ್ರವಾಸಿಗರು ಎಚ್ಚತ್ತುಕೊಂಡು ಗೋವಾಕ್ಕೆ ತೆರಳಬೇಕು.

Also read: ಭಾರತದ ಸ್ವರ್ಗ ಎಂದೇ ಖ್ಯಾತಿ ಹೊಂದಿರುವ ಗೋವಾದ ಪ್ರಮುಖ ಟೂರಿಸ್ಟ್ ಸ್ಥಳಗಳ ಬಗ್ಗೆ ನಿಮಗೆಷ್ಟು ಗೊತ್ತು?