ನೀರನ್ನು ಕುದಿಸಿ ಕುಡಿಯುವುದರಿಂದ ಆಗುವ ಉಪಯೋಗ

0
2082

ನೀರನ್ನು ಪ್ರತಿಯೊಬ್ಬರು ಕುಡಿಯುತ್ತಾರೆ. ಹೀಗೆ ನೀರು ಕುಡಿಯುವುದರಿಂದಹಲವಾರಿ ಲಾಭಗಳಿವೆ ಅದರಲ್ಲೂ ನೀರನ್ನು ಕುದಿಸಿ ಕುಡಿದರೆ ಮತ್ತಷ್ಟು ಒಳ್ಳೆಯದು. ಹೀಗೆ ಕುದಿಸಿದ ನೀರಿನಿಂದ ಹಲವಾರು ರೀತಿಯ ಆರೋಗ್ಯಕರ ಲಾಭಗಳಿವೆ. ಹೀಗೆ ಕುಡಿಸಿದ ನೀರನ್ನು ಕುಡಿಯುವುದರಿಂದ ನಿಮ್ಮ ಚಯಾಪಚಯ ಕ್ರಿಯೆಯು ಸುಮಾರು ಶೇ.24ರಷ್ಟು ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಆಹಾರವು ಬೇಗನೆ ಜೀರ್ಣವಾಗಿ, ಆಹಾರ ಸಮೀಕರಿಸಿ ತೂಕ ಕಳೆದು ಕೊಳ್ಳಲು ನೆರವಾಗುತ್ತದೆ.

ಸೂಚನೆ: ಬೆಳಿಗ್ಗೆ ಕುದಿಸಿದ ನೀರು ರಾತ್ರಿಗೆ ಹಾಗೂ ರಾತ್ರಿ ಕುದಿಸಿದ ನೀರು ಬೆಳಿಗ್ಗೆ ಉಪಯೋಗಿಸಿದರೆ ಅದು ಜೀರ್ಣಶಕ್ತಿಗೆ ತೊಂದರೆ ಮಾಡುವುದು. ಆದ್ದರಿಂದ ಬಿಸಿನೀರನ್ನು ಆದಷ್ಟು ತಾಜಾ ಇರುವಾಗಲೇ ಉಪಯೋಗಿಸಬೇಕು, ಕುದಿಸಿ ತಣ್ಣಗಾದ ನೀರನ್ನು ಪುನಃ ಕುದಿಸಿ ಕುಡಿಯಬಾರದು.

Also read: ತಾಮ್ರದ ಲೋಟದಲ್ಲಿ ನೀರು ಕುಡಿಯುವುದರಿಂದ ನಿಮಗೆ ಆಗುವ ಲಾಭಗಳು ತಿಳಿದ್ರೆ, ನೀವು ಯಾವಾಗಲು ಇದೇ ಲೋಟದಲ್ಲಿ ನೀರು ಸೇವನೆ ಮಾಡುತ್ತೀರಾ..!

1.ದೋಷ ಮತ್ತು ನೀರು :

ನೀರನ್ನು ಕಾಲುಭಾಗ ಆವಿಯಾಗುವರೆಗೆ ಕುದಿಸಿ ಉಳಿದ ಮುಕ್ಕಾಲು ಭಾಗದ ನೀರಿಗೆ ಪಾದಾಹೀನ ನೀರು ಎನ್ನುತ್ತಾರೆ.ಇದು ಪಿತ್ತರೋಗಗಳಲ್ಲಿ ಉಪಯುಕ್ತವಾಗಿದೆ.ಕುದಿಸಿ ಅರ್ಧದಷ್ಟು ಉಳಿಸಿದ ನೀರು ವಾತರೋಗಗಳನ್ನು ದೂರ ಮಾಡುವುದು.ನೀರಿನ ಮೂರು ಭಾಗದಷ್ಟು ಆವಿಯಾಗುವವರೆಗೆ ಕುದಿಸಿ ಉಳಿದ ಕಾಲುಭಾಗದ ನೀರಿಗೆ ಪಾದಾವಶೇಷ ಎನ್ನುವರು.ಈ ನೀರನ್ನು ಉಪಯೋಗಿಸುವುದರಿಂದ ಕಫ ಶಮನವಾಗುವುದು.

2.ಆರೋಗ್ಯ ಅಂಬು :

ನೀರಿನ ಮುಕ್ಕಾಲು ಭಾಗದಷ್ಟು ಆವಿಯಾಗುವವರೆಗೆ ಕುದಿಸಿ ಉಳಿದ ಕಾಲುಭಾಗದ ನೀರಿಗೆ ಪಾದಾವಶೇಷ ನೀರು ಅಥವಾ ಅಂಬು ಎನ್ನುವರು. ಈ ನೀರನ್ನು ಯಾವಾಗಲೂ ಪಥ್ಯದಂತೆ ಉಪಯೋಗಿಸಬಹುದು.ಇದು ಉಬ್ಬಸ,ಕೆಮ್ಮು ಬಹುದಿನದ ನೆಗಡಿ,ಊತ,ನೋವು,ಮೂಲ್ಯವಾಧಿ ರೋಗಗಳಲ್ಲಿ ಉತ್ತಮವಾಗಿದೆ.ಹಸಿವನ್ನು ಹೆಚ್ಚಿಸುವುದಲ್ಲದೆ ರಾತ್ರಿ ಹೊತ್ತು ಈ ನೀರನ್ನು ಕುಡಿಯುವುದರಿಂದ ಅಜೀರ್ಣ ಹತೋಟಿಗೆ ಬರುವುದು.

Also read: ದಿನಾಗ್ಲು ನಾವ್ ಹೇಳಿರೋ ರೀತಿಯಲ್ಲಿ ಬಿಸಿ ನೀರು ಸೇವಿಸುತ್ತಾ ಬನ್ನಿ, ನಿಮ್ಮ ಅನೇಕ ಅರೋಗ್ಯ ಸಮಸ್ಯೆಗಳಿಗೆ ಇದೊಂದೇ ರಾಮ ಬಾಣವಾಗುತ್ತೆ!!

3.ಉಷ್ಣೋದಕದ ಉಪಯೋಗ :

ಕುದಿಸಿದ ನೀರು ಕಂಠರೋಗಗಳಲ್ಲಿ ಹಿತವಾಗಿದೆ.ಹಸಿವನ್ನು ಹೆಚ್ಚಿಸಿ ಜೀರ್ಣಶಕ್ತಿಯನ್ನು ಉತ್ತಮಗೊಳಿಸುವುದು.ಕಫವಾತ ದೋಷಗಳಲ್ಲಿ,ಆಮವಾತ,ಆಮದೋಷ,ಕೆಮ್ಮು,ಮೂತ್ರವಿಕಾರಗಳಲ್ಲಿ ಬಹುದಿನದ ಅಲರ್ಜಿ ನೆಗಡಿ,ಹುಳಿತೇಗು,ಬಿಕ್ಕಳಿಕೆ,ಬಾಯಾರಿಕೆ,ಉಬ್ಬಸ,ಹೊಟ್ಟೆನೋವು ಮತ್ತು ಜ್ವರಕ್ಕೆ ಪಥ್ಯವಾಗಿದೆ.

4.ಋತುಗಳು ಮತ್ತು ಬಿಸಿನೀರು :

ಜೀರ್ಣಕ್ರಿಯೆಗೆ ಅನುಸಾರವಾಗಿ ಋತುಗಳಿಗೆ ಅನುಗುಣವಾಗಿಯೇ ಬಿಸಿನೀರನ್ನು ಕುಡಿಯಲು ಶಾಸ್ತ್ರದಲ್ಲಿ ಹೇಳಿದೆ.ಗೀಷ್ಮ ಮತ್ತು ಶರತ್ ಋತುಗಳಲ್ಲಿ ಪಾದಾವಶೇಷ ನೀರನ್ನು ಮತ್ತು ಉಳಿದ ಹೇಮಂತ,ಶಿಶಿರ ವಸಂತ ಮತ್ತು ವರ್ಷ ಋತುಗಳಲ್ಲಿ ಅರ್ಧಶೇಷ ನೀರನ್ನು ಉಪಯೋಗಿಸಬೇಕು.

Also read: ನಿತ್ಯ ಏಲಕ್ಕಿ ನೀರು ಕುಡಿದರೆ ದೇಹಕ್ಕೆ ಇಷ್ಟೆಲ್ಲ ಲಾಭವಾಗುತ್ತೆ ಎಂದು ತಿಳಿದರೆ, ಈಗಿನಿಂದಲೇ ಇದನ್ನು ಕುಡಿಯಲು ಶುರುಮಾಡ್ತೀರ…!

ಕೆಲವು ಲೋಹಾದಿಗಳನ್ನು ಕೆಂಪಗೆ ಕಾಯಿಸಿ ನೀರಲ್ಲಿ ಹಾಕಿ ನೀರು ತಂಪಾದ ನಂತರ ಕುಡಿಯುವುದು ಹಾಗೂ ಸೂರ್ಯಕಿರಣಗಳ ಶಾಖದಿಂದ ನೀರನ್ನು ಕಾಯಿಸಿ ಕುಡಿಯುವುದು. ನೀರಿನಲ್ಲಿ ಜೀರಿಗೆ ಹಾಕಿ ಕುದಿಸಿ ಕುಡಿಯುವುದು ಒಳ್ಳೆಯದಾಗಿದೆ. ಬಿಸಿ ನೀರೆಂದರೆ ಸುಮ್ಮನ್ನೆ ಬಿಸಿ ಮಾಡಿದ ನೀರಲ್ಲ. ಹದವಾಗಿ ಶಾಸ್ತ್ರೋಕ್ತವಾಗಿ ಕುದಿಸಿ ನಿರ್ದಿಷ್ಟ ಮಟ್ಟಕ್ಕೆ ಇಂಗಿಸಿದ ನೀರು ರೋಗ ನಿವಾರಕವಾಗಿದ್ದು ಉತ್ತಮ ಓಷಧವಾಗಿದೆ.