ಸಿಗರೆಟ್ ಪ್ರಿಯರೆ ನೀವೂ ಚಹಾ ಜೊತೆಗೆ ಧೂಮಪಾನ ಮಾಡುತ್ತೀರಾ? ಹಾಗಾದ್ರೆ ದೊಡ್ಡ ಗಂಡಾತರ ಎದುರಿಸಬೇಕಾಗುತ್ತೆ ಹೇಗೆ ಅಂತ ಈ ಮಾಹಿತಿ ನೋಡಿ..

0
338

ಕಾಲಮಾನ ಬದಲಾದಂತೆ ಜನರ ಹವ್ಯಾಸಗಳು ಕೂಡ ಬದಲಾಗುತ್ತಿವೆ. ಅದರಲ್ಲಿ ಕುಡಿತ, ಸಿಗರೆಟ್ ಅಂತಹ ಚಟಗಳಿಗೆ ಯುವಪಿಳಿಗೆ ಮಾರಕವಾಗುತ್ತಿದ್ದು, ಅದರಲ್ಲಿ ಸಿಗರೇಟ್ ಹೊಡಿಯುವುದು ಬರಿ ಚಟವಲ್ಲದೆ ಫ್ಯಾಷನ್ ಕೂಡ ಆಗಿದೆ. ಇನ್ನೂ ಸಿಗರೇಟ್ ಸೇದುವುದರಲ್ಲಿ ಹಲವು ವಿಧಗಳಿಗೆ ಅದರಲ್ಲಿ ಕೆಲವರಿಗೆ ಬರಿ ಸಿಗರೆಟ್ ಇದ್ರೆ ಸಾಕು ಇನ್ನೂ ಬಹುತೇಕರಿಗೆ ಬತ್ತಿಯ ಜೊತೆಗೆ ಚಾ ಬೇಕೇಬೇಕು. ಚಹಾ ಇದ್ರೆ ಏನು ಬೇಡವೇ ಬೇಡ ಎನ್ನುವ ರೀತಿ ಮಾರುಹೋಗಿದ್ದಾರೆ. ಆದರೆ ಸಂಶೋಧನೆಯೊಂದು ಹೊರ ಬಂದಿದು. ಚಾ ಜೊತೆಗೆ ಸಿಗರೆಟ್ ಸೇದಿದ್ದರೆ ಆದಷ್ಟು ಬೇಗನ ಸಾವು ಪಕ್ಕಾ ಎನ್ನುವ ಮಾಹಿತಿ ಲಭ್ಯವಾಗಿದೆ.

Also read: ಪ್ರತಿ ದಿನ ಸಿಹಿ ತಿನ್ನೋದು, ಸಿಗರೇಟ್ ಸೇದೋದು ಮತ್ತು ಧೂಮಪಾನ ಮಾಡೋದಕ್ಕಿಂತ ಅಪಾಯ!!

ಹೌದು ತಂಬಾಕು ಸೇವನೆಯನ್ನು ಮೊದಲಿಗೆ ತಮಾಷೆಗೆ ಅಂತ ಫ್ರೆಂಡ್ಸ್ ಜೊತೆ ಸೇರಿ ಪ್ರಾರಂಭಿಸುತ್ತಾರೆ, ಆದರೆ ತಮಾಷೆಗೆ ಪ್ರಾರಂಭವಾದ ತಂಬಾಕು ಸೇವನೆ ಚಟವಾಗಿ ಕ್ಯಾನ್ಸರ್, ಉಸಿರಾಟದ ತೊಂದರೆಗಳಿಗೆ ಆಹ್ವಾನ ನೀಡುತ್ತದೆ. ಆದರೆ ಸಿಗರೆಟ್ ಜೊತೆಗೆ ಒಂದು ಕಪ್ ಚಹಾ ಇದ್ದರೆ ಸ್ವರ್ಗಕ್ಕೆ ಮೂರೇ ಗೇಣು ಎಂಬುವುದು ಸಿಗರೆಟ್ ಪ್ರಿಯರ ಮಾತು, ಪ್ರತಿಯೊಂದು ಸಿಗರೆಟ್ ಪ್ಯಾಕ್ ಮೇಲೆ ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಬರೆದಿರುತ್ತದೆ. ಇದು ಎಲ್ಲರಿಗೂ ತಿಳಿದಿರುವ ವಿಷಯ ಕೂಡ ಹೌದು. ಮತ್ತು ಯಾವುದೇ ತಂಬಾಕು ಸೇವನೆಯಿಂದ ಕ್ಯಾನ್ಸರ್ ಕೂಡ ಬರುತ್ತದೆ ಎನ್ನುವುದು ಜಾಹಿರಾತುಗಳು ಮತ್ತು ಗುಟುಕಾ, ತಂಬಾಕು, ಸಿಗರೇಟ್​, ಬೀಡಿ ಪ್ಯಾಕ್​ಗಳ ಮೇಲೆ ದೊಡ್ಡದಾಗಿ ತೋರಿಸಲಾಗುತ್ತದೆ. ಆದರು ಬಿಡದೆ ಕೆಟ್ಟ ಹವ್ಯಾಸಗಳನ್ನು ರೂಡಿಸಿಕೊಂಡು ಜೀವನದ ಅರ್ಧದಲ್ಲಿ ಸಾಯಿತ್ತಾರೆ.

Also read: ಧೂಮಪಾನದಿಂದ ಉಂಟಾಗುವ ಹಾನಿಯನ್ನು ತಪ್ಪಿಸುವ ಸುಲಭ ಸರಳ ಉಪಾಯಗಳು.

ಸಂಶೋಧನೆ ಹೇಳುವ ಪ್ರಕಾರ ಆಗುವ ಹಾನಿ ಅಷ್ಟಿಷ್ಟಲ್ಲ. ಏಕೆಂದರೆ ಧೂಮಪಾನದಿಂದ ಕ್ಯಾನ್ಸರ್​ ಬರುವುದೇನು ನಿಜ. ಅದರಲ್ಲೂ ಚಹಾದೊಂದಿಗೆ ಸಿಗರೇಟ್, ಬೀಡಿ ಸೇವನೆಯ ಅಭ್ಯಾಸ ನೀವು ಬೆಳೆಸಿಕೊಂಡಿದ್ದರೆ ನೀವು ಗಂಟಲು ಮತ್ತು ಹೊಟ್ಟೆ ಎರಡಕ್ಕೂ ರೋಗವನ್ನು ತಂದು ಕೊಳ್ಳುತ್ತಿರ. ಹೇಗೆಂದರೆ ಸಿಗರೆಟ್ ಜೊತೆಗೆ ಚಾ ಕುಡಿಯುವ ಅಭ್ಯಾಸದಿಂದ ಎಸ್ಸೊಫೆಗಲ್ ಎಂಬ ಕ್ಯಾನ್ಸರ್ ಬಹುಬೇಗನೆ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಧಮ್ ಹಾಗೂ ಟೀ ಕಾಂಬಿನೇಷನ್ ಎಸ್ಸೊಫೆಗಲ್ ಕ್ಯಾನ್ಸರ್​ನ ಅಪಾಯವನ್ನು ಐದು ಪಟ್ಟು ಹೆಚ್ಚಿಸುತ್ತದೆ ಎಂದು ಅದ್ಯಯನ ಒಂದು ತಿಳಿಸಿದೆ.

Also read: ನಿಮ್ಮ ಬಾಯಿಯ ದುರ್ಗಂಧವನ್ನು ಹೋಗಲಾಡಿಸುವುದಕ್ಕೆ ಸುಲಭ ಪರಿಹಾರಗಳು!!

ಅಷ್ಟೇ ಅಲ್ಲದೆ ಇದರಿಂದ ಹೊಟ್ಟೆ ಹಾಗೂ ಗಂಟಲಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಒಂದು ಬಾರಿ ಈ ಕ್ಯಾನ್ಸರ್​ ಕಾಣಿಸಿಕೊಂಡರೆ ಬದುಕುಳಿಯುವ ಸಾಧ್ಯತೆ ಕೂಡ ಕಡಿಮೆ. ಗರಂ ಚಹಾ ಹಾಗೂ ಧೂಮಪಾನ ಸೇವನೆಯಿಂದ ಟ್ಯೂಮರ್​ನಂತಹ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತದೆ ಎಂದು ಸಂಶೋಧಕರು. ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ತಂಬಾಕಿನಲ್ಲಿ ಸೈನೈಡ್, ಬೆಂಜೈನ್, ಫಾರ್ಮಲ್ ಡೀಹೈಡ್, ಮೆಥಾನಾಲ್, ಆಸಿಟಿಲಿನೆ, ಅಮೋನಿಯಂ ರಾಸಾಯನಿಕಗಳಿರುತ್ತವೆ. ಅವುಗಳಲ್ಲಿದೆ ಧೂಮಪಾನದಲ್ಲಿ ಥಾರ್, ವಿಷಕಾರಕ ಅನಿಲಗಳು ದೇಹವನ್ನು ಸೇರಿ, ನಮ್ಮ ದೇಹದಲ್ಲಿ ಸಂಗ್ರಹವಾಗುತ್ತಾ ಹೋಗುತ್ತದೆ. ಇದರಿಂದ ದೇಹದಲ್ಲಿ ವಿಷಕಾರಕ ರಾಸಾಯನಿಕಗಳ ಪ್ರಮಾಣ ಹೆಚ್ಚಾಗಿ ಕ್ಯಾನ್ಸರ್, ಹೃದಯದಲ್ಲಿ ತೂತು ಇವುಗಳು ಉಂಟಾಗಿ ತುಂಬಾ ನೋವು ಅನುಭವಿಸಿ ಸಾಯಬೇಕಾದ ಪರಿಸ್ಥಿತಿ ಉಂಟಾಗುವುದು. ಎಂದು ಸಂಶೋಧನೆ ತಿಳಿಸಿದೆ.