ಊಟದ ನಡುವೆ ಏಕೆ ನೀರು ಕುಡಿಯಬಾರದು ಎನ್ನುವ ಪ್ರಶ್ನೆಗೆ ಇಲ್ಲಿದೆ ನೋಡಿ, ಸರಿಯಾದ ಕಾರಣ..

0
1033

ಊಟದ ನಡುವೆ ನೀರು ಕುಡಿಯಿವ ಅಭ್ಯಾಸದಿಂದ ಹಲವು ಅರೋಗ್ಯ ಸಂಬಂಧಿ ಅಪಾಯಗಳಿವೆ ಎಂದು ಹಲವು ಅಧ್ಯಯನಗಳು ತಿಳಿಸಿವೆ, ಆದರು ಕೆಲವರು ಊಟದ ನಡುವೆ ನೀರು, ಸ್ನಾಕ್ಸ್ ನಡುವೆ ಕೂಕ್, ಮದ್ಯ ಸೇವನೆ ಮಾಡುತ್ತಾರೆ. ಊಟದೊಂದಿಗೆ ಯಾವುದೇ ಪಾನೀಯ ಕುಡಿದರೆ ಅದು ಜೀರ್ಣಕ್ರಿಯೆ ಹೆಚ್ಚಿಸುತ್ತದೆ ಎಂದು ಕೆಲವರೆಂದರೆ, ಹಾಗೆ ಮಾಡುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದು ಮತ್ತೆ ಕೆಲವರ ನಂಬಿಕೆಯಾಗಿದೆ. ಊಟಕ್ಕೆ 30 ನಿಮಿಷಗಳ ಮೊದಲು ಅಥವಾ 30 ನಿಮಿಷಗಳ ನಂತರ ಒಂದೆರಡು ಗ್ಲಾಸ್ ನೀರನ್ನು ಸೇವಿಸುವುದು ಒಳ್ಳೆಯದು ಎಂದು ಅಧ್ಯಯನಗಳು ತೋರಿಸಿವೆ. ಆದರೆ ಊಟದ ಮಧ್ಯೆ ನೀರು ಕುಡಿಯುವುದು ಒಳ್ಳೆಯದೇ ಕೆಟ್ಟದ್ದೇ ಎನ್ನುವುದು ಪ್ರಶ್ನೆಯಾದರೆ ಆದರೆ ಈ ಅಭ್ಯಾಸವು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಅದು ಹೇಗೆ ಅಂತ ಇಲ್ಲಿದೆ ನೋಡಿ.

Also read: ನೀವು ಊಟವಾದ ನಂತರ ಈ ತಪ್ಪುಗಳನ್ನು ಮಾಡುತ್ತಿದರೆ ಕೂಡಲೇ ಇವುಗಳನ್ನು ತಪ್ಪಿಸಿ; ಈ ಅಭ್ಯಾಸಗಳು ಆರೋಗ್ಯಕ್ಕೆ ಮಾರಕವಾಗಿವೆ..

1. ಜೀರ್ಣಕ್ರಿಯೆಗೆ ತೊಂದರೆ:

ಊಟದ ಮಧ್ಯೆ ನೀರಿನ ಸೇವನೆಯು ಬಾಯಿಯಲ್ಲಿಯ ಜೊಲ್ಲಿನ ಪ್ರಮಾಣವನ್ನು ಕಡಿಮೆಗೊಳಿಸುವುದರಿಂದ ಆರಂಭಿಸಿ ಜೀರ್ಣ ಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಜೊಲ್ಲು ಕಡಿಮೆಯಾದಾಗ ಅದು ನಿಮ್ಮ ಜಠರಕ್ಕೆ ದುರ್ಬಲ ಸಂಕೇತಗಳನ್ನು ರವಾನಿಸುತ್ತದೆ ಮತ್ತು ಗ್ಯಾಸ್ಟ್ರಿಕ್ ಆಮ್ಲಗಳು ಹಾಗೂ ಕಿಣ್ವಗಳ ಬಿಡುಗಡೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ. ಹೀಗಾಗಿ ಊಟದ ಮಧ್ಯೆ ನೀರನ್ನು ಗುಟುಕರಿಸಿದ ಕ್ಷಣದಿಂದಲೇ ಆಹಾರದ ಹೀರುವಿಕೆ ಮತ್ತು ವಿಭಜನೆಗೆ ಅಡಚಣೆಯಾಗುತ್ತದೆ.

2. ಲಾಲಾರಸದ ಪ್ರಮಾಣವನ್ನು ಕಡಿಮೆ ಮಾಡುತ್ತದೆ

ನಿಮ್ಮ ಬಾಯಿಯಲ್ಲಿ ಉತ್ಪತ್ತಿಯಾಗುವ ಲಾಲಾರಸವು ನಿಮ್ಮ ಜೀರ್ಣ ಕ್ರಿಯೆಯ ಮೊದಲ ಹಂತವಾಗಿರುತ್ತದೆ. ಇದು ಆಹಾರವನ್ನು ವಿಘಟಿಸುವ ಕಿಣ್ವಗಳನ್ನಷ್ಟೇ ಹೊಂದಿರುವುದಿಲ್ಲ, ಜೊತೆಗೆ ಜಠರವು ಸಹ ಜೀರ್ಣ ಕ್ರಿಯೆಗೆ ಸಹಕರಿಸುವ ಕಿಣ್ವಗಳನ್ನು ಬಿಡುಗಡೆ ಮಾಡಲು ನೆರವಾಗುತ್ತದೆ. ನೀವು ಆಹಾರವನ್ನು ಸೇವಿಸುವಾಗ ನೀರನ್ನು ಕುಡಿದರೆ, ಅದು ನಿಮ್ಮ ಲಾಲಾರಸವನ್ನು ಕರಗಿಸಿ ಬಿಡುತ್ತದೆ.

3. ಪೋಷಕಾಂಶಗಳ ಹೀರುವಿಕೆಯ ಮೇಲೆ ಪರಿಣಾಮ:

ಊಟದ ಮಧ್ಯೆ ನೀರು ಸೇವಿಸುವುದರಿಂದ ಸೋಂಕುಕಾರಕಗಳ ವಿರುದ್ಧ ಹೋರಾಟದಲ್ಲಿ ಪ್ರಮುಖ ಪಾತ್ರ ಹೊಂದಿರುವ ಗ್ಯಾಸ್ಟ್ರಿಕ್ ರಸಗಳು ದುರ್ಬಲಗೊಳ್ಳುತ್ತವೆ. ಮತ್ತು ಆಹಾರವು ಸೂಕ್ತವಾಗಿ ವಿಭಜನೆಗೊಳ್ಳಲೂ ತಡೆಯಾಗುತ್ತದೆ. ಜಠರದಲ್ಲಿ ಜೀರ್ಣ ಕಿಣ್ವಗಳು ದುರ್ಬಲಗೊಂಡಾಗ ಆಹಾರವು ದೀರ್ಘಕಾಲ ಅಲ್ಲಿಯೇ ಉಳಿದುಕೊಳ್ಳುತ್ತದೆ. ಅದು ನಿಧಾನವಾಗಿ ಸಣ್ಣಕರುಳಿನ ಮೂಲಕ ಸಾಗಬಹುದು ಮತ್ತು ಕೆಲವೇ ಪೋಷಕಾಂಶಗಳು ಹೀರಲ್ಪಡುತ್ತವೆ.

4. ಆಸಿಡಿಟಿ ಸಮಸ್ಯೆ ತರುತ್ತದೆ:

ಒಂದು ವೇಳೆ ನೀವು ನಿಯಮಿತವಾಗಿ ಆಸಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದರೆ, ಅದಕ್ಕೆ ಆಹಾರ ಸೇವಿಸುವ ನಡುವೆ ನೀರನ್ನು ಸೇವಿಸುವುದು ಕಾರಣವಾಗಿದೆ. ಏಕೆಂದರೆ ನಮ್ಮ ಜಠರವು ತಾನು ಸ್ಯಾಚುರೇಟೆಡ್ ಆಗುವವರೆಗು ನೀರನ್ನು ಹೀರಿಕೊಳ್ಳುತ್ತದೆ. ಇದಾದ ನಂತರ ಜಠರದಲ್ಲಿರುವ ನೀರು ಗ್ಯಾಸ್ಟ್ರಿಕ್ ದ್ರವಗಳನ್ನು ಕರಗಿಸಲು ಆರಂಭಿಸುತ್ತದೆ. ಆ ಮಿಶ್ರಣವು ಸಾಮಾನ್ಯವಾಗಿ ಇರಬೇಕಾದ ಪ್ರಮಾಣಕ್ಕಿಂತ ಸ್ವಲ್ಪ ಗಡುಸಾಗಿರುತ್ತದೆ. ಇದರಿಂದ ಜೀರ್ಣ ಕ್ರಿಯೆ ಏರುಪೇರಾಗಿ ಆಸಿಡ್ ರಿಫ್ಲಕ್ಸ್ ಮತ್ತು ಎದೆ ಉರಿ ಸಮಸ್ಯೆ ಕಂಡು ಬರುತ್ತದೆ.

5. ದೇಹತೂಕ ಹೆಚ್ಚುತ್ತದೆ

ಊಟದ ಮಧ್ಯೆ ನೀರು ಸೇವಿಸುವುದರಿಂದ ಶರೀರದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದ ದೇಹತೂಕ ಹೆಚ್ಚಲು ಕಾರಣವಾಗುತ್ತದೆ, ನಮ್ಮ ಶರೀರಕ್ಕೆ ಆಹಾರವನ್ನು ಸರಿಯಾಗಿ ಜೀರ್ಣಿಸಲು ಸಾಧ್ಯವಾಗದಿದ್ದಾಗ ಅದು ಕೊಬ್ಬಿಗೆ ಪರಿವರ್ತನೆಗೊಳ್ಳುತ್ತದೆ ಮತ್ತು ಶರೀರದಲ್ಲಿ ಸಂಗ್ರಹವಾಗುತ್ತದೆ. ಅದು ಕೊಬ್ಬಿಗೆ ಪರಿವರ್ತನೆಗೊಂಡು ದೇಹತೂಕವನ್ನು ಹೆಚ್ಚಿಸುತ್ತದೆ.

ಇದಕ್ಕೆ ಉಪಾಯಗಳು ಏನು?

1. ಒಂದೇ ಸಲಕ್ಕೆ ಆಹಾರವನ್ನು ನುಂಗಬೇಡಿ.
2. ಕಡಿಮೆ ಉಪ್ಪು ಹಾಕಿದ ಊಟವನ್ನು ಸೇವಿಸಿ.
3. ಊಟಕ್ಕೆ 30 ನಿಮಿಷ ಮೊದಲು ನೀರನ್ನು ಸೇವಿಸಿ.
4. ಅತಿಯಾದ ಸಿಹಿ ತೇಜಿಸಿ.

Also read: ನೆಲದ ಮೇಲೆ ಕುಳಿತೇ ಏಕೆ ಊಟ ಮಾಡಬೇಕು? ಇದರ ಹಿಂದಿರುವ ವೈಜ್ಞಾನಿಕ ಸತ್ಯ ಇಲ್ಲಿದೆ ನೋಡಿ..