ಸಾಮಾನ್ಯರಿಗೊಂದು ಕಾನೂನು, ಜನಪ್ರತಿನಿಧಿಗಳಿಗೊಂದು ರೂಲ್ಸ್??ಹೈವೇ ಪಕ್ಕದ ರೆಸ್ಟೋರೆಂಟ್ ನಲ್ಲಿ ಅಕ್ರಮ ಮದ್ಯ ಮಾರಾಟ..!

0
497

ಕಾನೂನು ಎಲ್ಲರಿಗೂ ಒಂದೇ.. ಆದರೆ ಅಧಲಕಾರದಲ್ಲಿರುವವರು ಮಾತ್ರ ಕಾನೂನನ್ನು ಪದೇ ಪದೇ ಮಿಸ್ ಯೂಸ್ ಮಾಡ್ಕೋತಾರೆ. ಹೈವೇ ಪಕ್ಕದಲ್ಲಿ ಮದ್ಯ ಮಾರುವಂತಿಲ್ಲ ಎಂದು ಕೋರ್ಟ್ ಆದೇಶಿಸಿ ಹಲವು ತಿಂಗಳುಗಳೇ ಕಳೆದಿದೆ. ಆದರೂ ಯಾವ ರೂಲ್ಸ್ ವೀ ಡೋಂಟ್ ಕೇರ್ ಅಂತಾರೆ ಜನಪ್ರತಿನಿಧಿಗಳು. ಬೆಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿರುವ ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಮಾಲೀಕತ್ವದ ಎಲ್.ಕೆ ರಾಯಲ್ ಗಾರ್ಡೇನಿಯ ರೆಸ್ಟೋರೆಂಟ್ನಲ್ಲಿ ಅಕ್ರಮವಾಗಿ ಮದ್ಯ ಪೂರೈಕೆಯಾಗ್ತಿದೆ.

ರೆಸ್ಟೋರೆಂಟ್ ಉದ್ಘಾಟನೆಯಾಗಿ ತಿಂಗಳು ಕೂಡಾ ಕಳೆದಿಲ್ಲ. ಎಲ್.ಕೆ ರಾಯಲ್ ಗಾರ್ಡೇನಿಯ ರೆಸ್ಟೋರೆಂಟ್ ಹುಣಸಮಾರನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿದೆ. ರೆಸ್ಟೋರೆಂಟ್ ನಡೆಸೋದಕ್ಕೆ ಸುಬ್ಬಾರೆಡ್ಡಿ ಗ್ರಾಮ ಪಂಚಾಯ್ತಿಯಿಂದ ಅನುಮತಿಯನ್ನೂ ಪಡೆದಿಲ್ಲ. ಹೀಗಿದೇರೂ ರಾಜಾರೋಷವಾಗಿ ರೂಲ್ಸ್ ಬ್ರೇಕ್ ಮಾಡಿ ಅಕ್ರಮವಾಗಿ ಡ್ರಿಂಕ್ಸ್ ಸಪ್ಲೈ ಮಾಡ್ತಿದ್ದಾರೆ.

ಈ ಬಗ್ಗೆ ಅಬಕಾರಿ ಅಧಿಕಾರಿಗಳಿಗೆ ಸ್ಥಳೀಯರು ದೂರು ನೀಡಲು ಮುಂದಾಗಿದ್ದಾರೆ. ಲೈಸೆನ್ಸ್ ಪಡೆಯದ ಬಗ್ಗೆ ಈಗಾಗ್ಲೇ ಗ್ರಾಮ ಪಂಚಾಯ್ತಿಗೂ ದೂರು ನೀಡಿದ್ದಾರೆ. ಈ ಸಂಬಂಧ ಗ್ರಾಮ ಪಂಚಾಯ್ತಿ ಕ್ರಮ ಕೈಗೊಳ್ಳೋ ಭರವಸೆಯನ್ನೂ ಸಹ ನೀಡಿದೆ.