ಕೈತುಂಬಾ ಬರೋ ಸಂಬಳ ಬಿಟ್ಟು ಬಡ ರೋಗಿಗಳನ್ನು ಹುಡುಕಿಕೊಂಡು ಹೋಗಿ ಉಚಿತ ಚಿಕಿತ್ಸೆ ಕೊಡುತ್ತಿರುವ ಈ ವ್ಯೆದ್ಯರಿಗೆ ಯಾವ ಪ್ರಶಸ್ತಿ ಕೊಡಬೇಕು.?

0
1440

ಹಣಕ್ಕಾಗಿ ‘ಹೆಣಕ್ಕೂ’ ಚಿಕಿತ್ಸೆ ಕೊಡುವ ವ್ಯೆದ್ಯರೆ ಹೆಚ್ಚಿರುವಾಗ, ದೇಶದಲ್ಲಿ ಉಚಿತ ಚಿಕಿತ್ಸೆ ಎಲ್ಲರಿಗೂ ಸಿಗಲು ಸಾಧ್ಯವಿಲ್ಲ, ಏಕೆಂದರೆ ಮೊದಲು ಹಣ ನಂತರ ಅರೋಗ್ಯ ಎನ್ನುವುದು ಬೆಳೆದು ನಿಂತಿದೆ. ಆದರಿಂದ ಖಾಸಗಿ ಆಸ್ಪತ್ರೆಗಳು ನಾಯಿ ಕೊಡೆಯಂತೆ ಹುಟ್ಟಿಕೊಂಡಿವೆ. ಸರ್ಕಾರ ಏನೋ ಉಚಿತವಾಗಿ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆ ತೆರೆದಿದೆ. ಆದರೆ ಅವುಗಳ ಸ್ಥಿತಿ ಮತ್ತು ವ್ಯೆದ್ಯರ ವರ್ತನೆ ನೋಡಿದವರಿಗೆ ತಿಳಿಯುತ್ತೆ, ಏಕೆಂದರೆ ದಿನದಲ್ಲಿ ಒಂದು ತಾಸು ಸರ್ಕಾರಿ ಆಸ್ಪತ್ರೆಯಲ್ಲಿ ಡ್ಯೂಟಿ ಮಾಡಿ ಸ್ವಂತ ಉಳಿದ ಸಮಯವನ್ನು ಖಾಸಗಿ ಆಸ್ಪತ್ರೆಯಲ್ಲಿ ಮಾಡುವ ವ್ಯೆದ್ಯರು ಹೆಚ್ಚಿದ್ದು. ಬಡವರಿಗೆ ಚಿಕಿತ್ಸೆ ಸಿಗದಂತಾಗಿದೆ.

Also read: ಹಣ ಮೊದಲು ನಂತರ ಚಿಕಿತ್ಸೆ ಎನ್ನುವ ಕಾಲದಲ್ಲಿ 40 ವರ್ಷಗಳಿಂದ 2 ರೂ. ಚಿಕಿತ್ಸೆ ನೀಡಿ ಬಡವರ ಪ್ರಾಣ ಉಳಿಸುತ್ತಿರುವ ಈ ವ್ಯೆದ್ಯರಿಗೆ ಯಾವ ಪ್ರಶಸ್ತಿ ಕೊಡಬೇಕು??

ಇದೆಲ್ಲವೂ ಒಂದು ವಿಪರ್ಯಾಸವಾದ ಕಾಲದಲ್ಲಿ ಇಲ್ಲೊಬ್ಬ ವ್ಯೆದ್ಯರ ಸೇವೆ ನೋಡಿದರೆ ಮಾನವಿತೆಗೆ ಇದಕ್ಕಿಂತ ಉದಾಹರಣೆ ಬೇಕಾ? ಅನಿಸುತ್ತೆ. ಹೌದು ಬೆಂಗಳೂರಿನ ಗ್ಲೋಬಲ್ ಆಸ್ಪತ್ರೆಯಲ್ಲಿ ವ್ಯೆದ್ಯರಾಗಿದ್ದ ಡಾ.ಸುನಿಲ್ ಕುಮಾರ್ ಎನ್ನುವರು ಉಚಿತವಾಗಿ ಹಳ್ಳಿ ಹಳ್ಳಿಗೆ ಹೋಗಿ ಚಿಕಿತ್ಸೆ ನೀಡುತ್ತಿದ್ದಾರೆ. ಮೂಲತ: ವಿಜಯಪುರ ಜಿಲ್ಲೆಯ ಹೆಬ್ಬಿ ಗ್ರಾಮದವರಾದ ಡಾ.ಸುನಿಲ್ ಕುಮಾರ್. ಬೆಂಗಳೂರು ಹೊರವಲಯ ಸರ್ಜಾಪುರದಲ್ಲಿ ವಾಸಿಸುತ್ತಿದ್ದಾರೆ. ಇವರು 2010 ರಲ್ಲಿ ಬಿಜಿಎಸ್ ಆಸ್ಪತ್ರೆಯಲ್ಲಿ ಕೈತುಂಬಾ ಬರೋ ಸಂಬಳ ಬಿಟ್ಟು ಬಡ ರೋಗಿಗಳನ್ನು ಹುಡುಕಿಕೊಂಡು ಹೋಗಿ ಉಚಿತವಾಗಿ ಚಿಕಿತ್ಸೆ ಕೊಡುತ್ತಿದ್ದಾರೆ. ಕಳೆದ 8 ವರ್ಷಗಳಿಂದ ಮೊಬೈಲ್ ಡಾಕ್ಟರ್ ಎಂದೇ ಫೇಮಸ್ ಆಗಿದ್ದಾರೆ.

ಇವರ ಈ ಸೇವೆಯನ್ನು ಶುರುಮಾಡಲು ಹಲವು ಘಟನೆಗಳು ಕಾರಣವಾಗಿವೆ ಅಂತೆ, ಏಕೆಂದರೆ ಬಡತನದಿಂದ ಬಂದ ಸುನಿಲ್ ಅವರು ವ್ಯೆದ್ಯರಾಗಿ ಆಸ್ಪತ್ರೆಯಲ್ಲಿ ಇದ್ದಾಗ ಬರುವ ರೋಗಿಗಳನ್ನು ನೋಡಿ, ಇವರಿಗೆ ಹಳ್ಳಿಯಲ್ಲಿ ಸ್ವಲ್ಪ ಚಿಕಿತ್ಸೆ ಸಿಕ್ಕಿದ್ದರೆ ಇಷ್ಟೊಂದು ಹಣದ ಜೊತೆಗೆ ಅರೋಗ್ಯ ಹಾಳಾಗುತ್ತಿರಲಿಲ್ಲ, ಅದಕ್ಕಾಗಿ ಬಡ ಹಳ್ಳಿಗರಿಗೆ ಫ್ರೀ ಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಒಂದು ದಿನ ಮಹಿಳೆಯೊಬ್ಬಳು ದುಡ್ಡಿಲ್ಲದೇ ಕಣ್ಣೀರಿಡುತ್ತಿರುವುದು ನೋಡಿ. ಸುನಿಲ್ ಮರುಗಿದ್ದರು. ಮತ್ತೊಂದು ದಿನ ಅಪಘಾತದಲ್ಲಿ ಗಾಯಗೊಂಡು ನರಳ್ತಿದ್ದ ಯುವಕನನ್ನ ಅದೇ ದಾರಿಯಲ್ಲಿ ಹೋಗುತ್ತಿದ್ದ ಸುನಿಲ್ ರಕ್ಷಿಸಿದ್ದರು. ಪ್ರಾಥಮಿಕ ಚಿಕಿತ್ಸೆ ನೀಡಿ ಪ್ರಾಣ ಉಳಿಸಿದ್ದರು. ಅದೇ ದಿನ ಮೊಬೈಲ್ ಡಾಕ್ಟರ್ ಆಗಲು ತೀರ್ಮಾನಿಸಿ, ಕೆಲಸಕ್ಕೆ ರಾಜೀನಾಮೆ ಕೊಟ್ಟು ವೈದ್ಯ ಸೇವೆಯನ್ನು ಬಡವರಿಗೆ ಮೀಸಲಿಟ್ಟರು.

Also read: ಹಾರ್ಟ್ ಆಪರೇಷನ್ ಆದರೂ, ಕಿಡ್ನಿ ಟ್ರಾನ್ಸ್ ಪ್ಲಾಂಟೇಷನ್ ಆದರೂ,…ಇಲ್ಲಿ ಎಲ್ಲಾ ಉಚಿತ…!

ಸಧ್ಯ ಮಾತೃಸಿರಿ ಫೌಂಡೇಶನ್ ಎಂಬ ಎನ್‍ಜಿಓ ಹುಟ್ಟು ಹಾಕಿ, ಸ್ನೇಹಿತರ ನೆರವು ಪಡೆದು ತಮ್ಮ ಕಾರಿನಲ್ಲಿ ಸುಸಜ್ಜಿತ ಕ್ಲಿನಿಕ್ ತರಹ ಮಾರ್ಪಾಡು ಮಾಡಿದ್ದಾರೆ. ಸಾವಿರಾರು ಜನರಿಗೆ ಉಚಿತ ಆರೋಗ್ಯ ಸೇವೆಯನ್ನ ನೀಡುತ್ತಿದ್ದಾರೆ. ಗೆಳೆಯ ವೈದ್ಯರ ನೆರವಿನಿಂದ 700ಕ್ಕೂ ಹೆಚ್ಚು ಅಧಿಕ ಮೆಡಿಕಲ್ ಕ್ಯಾಂಪ್ ಮಾಡಿದ್ದಾರೆ. ಇದೆಲ್ಲದಕ್ಕೂ ಬೇಕಾದ ಹಣಕ್ಕೆ ಸಂಜೆ ಸಣ್ಣ ಆಸ್ಪತ್ರೆ ನಡೆಸುತ್ತಾರೆ.ಅದರಲ್ಲಿ ಬಂದ ಹಣದಿಂದ ಜೀವನ ಮಾಡುತ್ತಿದ್ದು, ಮತ್ತು ಹುಟ್ಟೂರಲ್ಲಿ ಪೋಷಕರು ಕೃಷಿ ಮಾಡ್ತಿದ್ದು, ಅಲ್ಲಿ ಬರೋ ಆದಾಯ, ತಾವು ನಡೆಸೋ ಕ್ಲಿನಿಕ್‍ನಿಂದ ಬರುವ ಆದಾಯವನ್ನು ಡಾ. ಸುನಿಲ್ ಬಳಸಿ ಉಚಿತ ಚಿಕಿತ್ಸೆ ನೀಡುತ್ತಿದ್ದು, ಮೊಬೈಲ್ ಡಾಕ್ಟರ್ ಎಂದೇ ಹೆಸರು ಪಡೆದು ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಾರೆ. ಇಂತಹ ವ್ಯೆದ್ಯರು 100 ರಲ್ಲಿ ಒಬ್ಬರಿದ್ದರೂ ಬಡವರಿಗೆ ಸರಿಯಾದ ಚಿಕಿತ್ಸೆ ಸಿಗುತ್ತೆ ಎನ್ನುವುದು ಜನರ ಅಭಿಪ್ರಾಯ.

Also read: ಡಾ. ರಾಜಕುಮಾರ್ ರವರ ವೈದ್ಯರಾಗಿದ್ದ ಡಾ.ರಮಣರಾವ್ ದಿನಕ್ಕೆ ಸಾವಿರಾರು ಜನರಿಗೆ ಉಚಿತ ಚಿಕಿತ್ಸೆ ಕೊಟ್ಟು ಬಡವರ ಪಾಲಿಗೆ ದೇವರಂತಾಗಿದ್ದರೆ..