ಡ್ರೈವಿಂಗ್ ಲೈಸೆನ್ಸ್ ಪಡೆಯುವವರಿಗೆ ಸಿಹಿಸುದ್ದಿ; ವಾಹನಗಳ ಚಾಲಕರಿಗೆ ಕನಿಷ್ಠ ವಿದ್ಯಾರ್ಹತೆ ನಿಯಮವನ್ನು ಕೈ ಬಿಟ್ಟ ಕೇಂದ್ರ ಸರ್ಕಾರ..

0
1628

ವಾಹನ ಚಲನಾ ಪರವಾನಿಗೆ ಪತ್ರ (ಡ್ರೈವಿಂಗ್ ಲೈಸೆನ್ಸ್) ಪಡೆಯಲು ಕೇಂದ್ರ ಸರ್ಕಾರ ಈ ಹಿಂದೆ ಕನಿಷ್ಠ ವಿದ್ಯಾರ್ಹತೆ ಕಡ್ಡಾಯಗೊಳಿಸಿ ಹೊಸದಾಗಿ ಡ್ರೈವಿಂಗ್ ಲೈಸೆನ್ಸ್ ಪಡೆಯುವರಿಗೆ ತಲೆನೋವು ತಂದಿತ್ತು, ಕೇಂದ್ರ ಸರ್ಕಾರದ ಈ ನಿಯಮ ಒಂದು ಹಂತದಲ್ಲಿ ಒಳ್ಳೆಯದೆ ಆದರು ಇದರ ಪರಿಣಾಮ ಚಾಲಕರ ಕೊರತೆಯನ್ನು ತಂದಿತ್ತು, ಇದರಿಂದ ಹಲವು ಚಾಲಕರಿಗೆ 5 ರಿಂದ 10 ವರ್ಷದ ಅನುಭವ ಇದ್ದರು ಕೂಡ ಡ್ರೈವಿಂಗ್ ಮಾಡಲು ಅವಕಾಶಗಳು ಸಿಗುತ್ತಿರಲ್ಲಿಲ್ಲ, ಏಕೆಂದರೆ ಲೈಸೆನ್ಸ್ ಪಡೆಯಲು ಬೇಕಾದ 8 ಮತ್ತು 10 ನೇ ತರಗತಿಯ ವಿದ್ಯಾರ್ಹತೆ ಇರದ ಕಾರಣ ಸಾವಿರಾರು ಚಾಲಕರು ತಮ್ಮ ವೃತ್ತಿಯನ್ನೇ ಬಿಟ್ಟು ಬೇರೆ ದಾರಿ ನೋಡಿಕೊಂಡಿದರು. ಇದೆಲ್ಲ ತೊಂದರೆಯನ್ನು ಆಲಿಸಿದ ಕೇಂದ್ರ ಸರ್ಕಾರ ಕನಿಷ್ಟ ವಿದ್ಯಾರ್ಹತೆಯನ್ನು ಸಡಿಲಿಕೆ ಮಾಡಿ, ಚಾಲಕ ವೃತ್ತಿ ಮಾಡುವರಿಗೆ ಸಂತಸ ತಂದಿದೆ.

Also read: ಪ್ಲಾಸ್ಟಿಕ್ ಮಾಲಿನ್ಯದಿಂದಾಗಿ ಎಂಥ ಪರಿಸ್ಥಿತಿ ಬಂದಿದೆ ಅಂದ್ರೆ, ಒಂದು ವಾರಕ್ಕೆ ಒಂದು ಕ್ರೆಡಿಟ್-ನಲ್ಲಿ ಇರುವಷ್ಟು ಪ್ಲಾಸ್ಟಿಕ್ ನಮ್ಮ ದೇಹ ಸೇರುತ್ತಿದೆ ಅಂತೆ!!

ಏನಿದು ಹೊಸ ನಿಯಮ?

ಟ್ರಕ್ ಹಾಗೂ ಬಸ್ ಗಳಂತಹ ಭಾರೀ ವಾಹನಗಳ ಚಾಲಕರಿಗೆ ಕನಿಷ್ಠ ವಿದ್ಯಾರ್ಹತೆ ನಿಯಮವನ್ನು ಸಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಯಾವುದೇ ವಾಹನ ಚಾಲನೆ ಪರವಾನಿಗೆ ಪಡೆಯಲು ಕನಿಷ್ಠ 8 ನೇ ತರಗತಿ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆದಿರಬೇಕೆಂಬ ನಿಯಮ ಇದೆ. ಈ ನಿಯಮವನ್ನು ಕೇಂದ್ರ ಸಾರಿಗೆ ಸಚಿವಾಲಯ ರದ್ದು ಮಾಡಿದೆ. 8 ನೇ ತರಗತಿ ಪಾಸ್ ಆಗಿರಬೇಕೆಂಬ ನಿಯಮ ಡ್ರೈವರ್ ಗಳಿಗೆ ಒಂದು ರೀತಿಯಲ್ಲಿ ತೊಡಕಾಗಿದೆ. ಡ್ರೈವಿಂಗ್ ಲೈಸೆನ್ಸ್ ನೀಡುವುದಕ್ಕೂ ಮೊದಲು ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಸಂಚಾರ ನಿಯಮದ ಬಗ್ಗೆ ಅಭ್ಯರ್ಥಿಗಳು ಮಾಹಿತಿ ಹೊಂದಿದ್ದಾರೆ ಎಂದು ಮನವರಿಕೆಯಾದರೆ ಮಾತ್ರ ಪರವಾನಗಿ ನೀಡಲಾಗುತ್ತದೆ. ಹೀಗಾಗಿ ವಿದ್ಯಾರ್ಹತೆಗಿಂತ ಮುಖ್ಯವಾಗಿ ವಾಹನದ ಬಗ್ಗೆ, ಟ್ರಾಫಿಕ್ ನಿಯಮದ ಬಗ್ಗೆ ಮಾಹಿತಿ ಹೊಂದಿರಬೇಕಾಗುತ್ತದೆ ಎಂದು ಸಾರಿಗೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೀಗ ಕೇಂದ್ರ ಸರ್ಕಾರ ಚಾಲನಾ ಪರವಾನಗಿ ನವೀಕರಣಕ್ಕೆ ತೊಡಗಿರುವ ಕನಿಷ್ಠ ವಿದ್ಯಾರ್ಹತೆ ಷರತ್ತನ್ನು ಸಡಿಲಿಸಲು ನಿರ್ಧರಿಸಿದೆ.

Also read: ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಈ ಕುರಿತು ಮಾಹಿತಿ ನೀಡಿದ ಸಾರಿಗೆ ಸಚಿವಾಲಯ, ಶಿಕ್ಷಣವಿಲ್ಲದ ಡ್ರೈವರ್-ಗಳಿಂದಲೇ ರಸ್ತೆ ಅಪಘಾತ ಹೆಚ್ಚುತ್ತಿವೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ಪುರಾವೆ ಇಲ್ಲ. 8ನೇ ತರಗತಿ ಪಾಸ್ ಆಗಿರಬೇಕೆಂಬ ನಿಯಮ ಡ್ರೈವರ್-ಗಳಿಗೆ ಒಂದು ರೀತಿಯ ತೊಡಕಾಗಿತ್ತು. ಈಗ ನಿಯಮವನ್ನು ತಿದ್ದುಪಡಿ ಮಾಡಿದ್ದು, ತೊಡಕಾಗಿದ್ದ ಲೈಸೆನ್ಸ್ ನೀಡುವುದಕ್ಕೂ ಮೊದಲು ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಇದರಿಂದ ಡ್ರೈವರ್-ಗಳಿಗೆ ಅವಕಾಶ ಮಾಡಿಕೊಡಲಾಗುತ್ತೆ. ವಿದ್ಯಾರ್ಹತೆಗಿಂತ ಮುಖ್ಯವಾಗಿ ವಾಹನದ ಬಗ್ಗೆ, ಟ್ರಾಫಿಕ್ ನಿಯಮದ ಬಗ್ಗೆ ಮಾಹಿತಿ ಹೊಂದಿರಬೇಕಾಗುತ್ತದೆ ಎಂದು ಸಾರಿಗೆ ಸಚಿವಾಲಯದ ತಿಳಿಸಿದೆ.

10 ಲಕ್ಷ ಚಾಲಕರ ಕೊರತೆ?

Also read: ಭಾರತದಲ್ಲಿ ಸಲಿಂಗಕಾಮ ಅಪರಾಧವಲ್ಲ ಎಂಬ ಸುಪ್ರೀಂ ಕೋರ್ಟ್​ ತೀರ್ಪಿನ ಬಳಿಕ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಭಾರೀ ಬೇಡಿಕೆ..

ವಿದ್ಯಾರ್ಹತೆ ಮಿತಿ ತೆಗೆದು ಹಾಕಲು ಪ್ರಮುಖ ಕಾರಣ. 2016ರಲ್ಲಿ ನಡೆಸಿದ್ದ ಸಮೀಕ್ಷೆ ಪ್ರಕಾರ ದೇಶದಲ್ಲಿ 2.20 ಕೋಟಿ ಚಾಲಕರಿದ್ದಾರೆ. ಆದರೆ ಇನ್ನೂ 10 ಲಕ್ಷಕ್ಕೂ ಹೆಚ್ಚಿನ ನುರಿತ ಚಾಲಕರ ಅವಶ್ಯಕತೆಯಿದೆ. ಅದರಲ್ಲಿ ಕರ್ನಾಟಕದಲ್ಲಿಯೇ 50 ಸಾವಿರಕ್ಕೂ ಹೆಚ್ಚಿನ ಚಾಲಕರು ಬೇಕಾಗಿದ್ದಾರೆ. ಚಾಲನಾ ಪರವಾನಗಿ ಪಡೆಯಲು 8ನೇ ತರಗತಿ ವ್ಯಾಸಂಗ ಮಾಡಿರಬೇಕೆಂಬ ನಿಯಮದಿಂದಾಗಿ ನುರಿತ ಚಾಲಕರ ಸಮಸ್ಯೆ ಉಂಟಾಗುತ್ತಿತ್ತು. ನಿಯಮವನ್ನು ಸಡಿಲ ಗೊಳಿಸಲಾಗುತ್ತಿದ್ದು, ಸಮಸ್ಯೆ ನಿವಾರಣೆಯಾಗಲಿದೆ. ಅಷ್ಟೇ ಅಲ್ಲದೆ ರಾಜ್ಯದಲ್ಲಿ 10 ಲಕ್ಷ ಚಾಲಕರಿಗೆ ಅನುಕೂಲವಾಗಲಿದೆ. ಎಂದು ಬೆಂಗಳೂರು ಪ್ರವಾಸಿ ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷರು ಹೇಳಿದ್ದಾರೆ.