ಮುಂದಿನ ವರ್ಷದ ಜುಲೈನಿಂದ ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನ ನೋಂದಣಿ ಪತ್ರಗಳು ದೇಶದಾದ್ಯಂತ ಏಕರೂಪತೆ ಪಡೆದುಕೊಳ್ಳಲಿವೆ..

0
715

ಕೇಂದ್ರ ಸರ್ಕಾರ 2019ರ ಜುಲೈನಿಂದ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದೇ ವಿನ್ಯಾಸ, ಬಣ್ಣದ ಡಿಎಲ್ ಕಾರ್ಡ್ ವಿತರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಮುಂದಿನ ಜುಲೈನಿಂದ ದೇಶಾದ್ಯಂತ ಏಕರೂಪದ ಡ್ರೈವಿಂಗ್ ಲೈಸೆನ್ಸ್‌‌ (DL) ಮತ್ತು ವಾಹನ ನೋಂದಣಿ ಸರ್ಟಿಫಿಕೇಟ್‌ಗಳು ನೀಡಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಚಿಂತನೆ ನಡೆಸಿದ್ದು, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿತರಿಸುವ ಡಿಎಲ್ ಹಾಗೂ ಆರ್‌ಸಿಗಳ ಬಣ್ಣ, ವಿನ್ಯಾಸ ಮತ್ತು ಭದ್ರತಾ ವೈಶಿಷ್ಟ್ಯಗಳು ಒಂದೇ ರೀತಿಯಾಗಿ ಇರಲಿವೆ.

Also read: ಇನ್ಮೇಲೆ ನಿಮ್ಮ ಹಳೆಯ ವಾಹನಗಳು ರಸ್ತೆಗಿಳಿಯುವಂತಿಲ್ಲ?? ಈ ನಿಯಮ ಕರ್ನಾಟಕದ ತುಂಬೆಲ್ಲ ಜಾರಿಗೆ…

ಈ ಸಂಬಂಧ ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ. ಸಾರಿಗೆ ಸಿಬ್ಬಂದಿಗೆ ಹಲವು ಆಯ್ಕೆಗಳು ಸಿಗಲಿವೆ. ಅವರು ಕೈಯಲ್ಲಿ ಹಿಡಿದುಕೊಳ್ಳಬಹುದಾದ ಸಣ್ಣ ಸಾಧನದಲ್ಲಿ ಡಿಎಲ್ ಅಥವಾ ಆರ್‌ಸಿ ಸಂಖ್ಯೆಗಳನ್ನು ನಮೂದಿಸಿ, ಕ್ಯೂಆರ್‌ಕೋಡ್ ಸ್ಕ್ಯಾನ್ ಮಾಡಿ ಅಥವಾ ಆ ಸಾಧನದಲ್ಲಿ ಕಾರ್ಡ್ ತೂರಿಸುವ ಮೂಲಕ ಅದರ ವಿವರಗಳನ್ನು ಪರಿಶೀಲಿಸಬಹುದು. ಕಾರ್ಡ್‌ಅನ್ನು ಸಾಧನದ ಸಮೀಪದ ಇರಿಸಿದ ಕೂಡಲೇ ಎನ್‌ಎಫ್‌ಸಿ ಸೌಲಭ್ಯವು ಅದರ ವಿವರಗಳನ್ನು ಪತ್ತೆ ಮಾಡಲು ನೆರವಾಗುತ್ತದೆ.
ಸ್ಮಾರ್ಟ್ ಕಾರ್ಡ್‌ಗಳಲ್ಲಿ ಡಿಎಲ್ ಮತ್ತು ಆರ್‌ಸಿಗಳಲ್ಲಿ ಮೈಕ್ರೋಚಿಪ್‌ಗಳನ್ನು ಅಳವಡಿಸಲಿದ್ದು, ಕ್ಯೂ ಆರ್ ಕೋಡ್‌ ಗಳನ್ನೂ ಈ ಕಾರ್ಡ್ ಗಳು ಹೊಂದಿರುತ್ತವೆ. ಅವುಗಳಲ್ಲಿ ಎನ್‌ಎಫ್‌ಸಿ(ನಿಯರ್ ಫೀಲ್ಡ್ ಕಮ್ಯುನಿಕೇಶನ್) ವೈಶಿಷ್ಟ್ಯವನ್ನೂ ಅಳವಡಿಸಲಾಗುತ್ತಿದ್ದು ಮೆಟ್ರೋ ಮತ್ತು ಎಟಿಎಂ ಕಾರ್ಡ್ ಗಳ ರೀತಿಯಲ್ಲಿ ಬಳಸಬಹುದಾಗಿದೆ. ಇದರಿಂದ ಟ್ರಾಫಿಕ್ ಪೊಲೀಸರು ವಿಶೇಷ ಸಾಧನಗಳ ಮೂಲಕ ಈ ಕಾರ್ಡ್‌ಳನ್ನು ಸ್ಕ್ಯಾನ್ ಮಾಡಿ ಎಲ್ಲ ವಿವರ ಪಡೆಯಬಹುದು.

Also read: ಹೃದಯವಿದ್ರಾವಕ ಘಟನೆ, ರಕ್ಷಣೆ ನೀಡಬೇಕಿದ್ದವನೇ ನ್ಯಾಯಾಧೀಶರ ಪತ್ನಿ, ಪುತ್ರನನ್ನು ಗುಂಡಿಟ್ಟು ಕೊಂದ ಘಟನೆ ದೇಶದಲ್ಲಿ ತಲ್ಲಣ ಮೂಡಿಸಿದೆ!!

ಮೊದಲೇ ಪಡೆದ DL ನವೀಕರಣ ಹೇಗೆ?

ಜುಲೈನಿಂದ ಯಾವುದೇ ನವೀಕರಣ ಅಥವಾ ಮರುನೋಂದಣಿಗೆ ಹೋದರೆ ಸಾರಿಗೆ ಅಧಿಕಾರಿಗಳು ಹೊಸ ಡಿಎಲ್ ಮತ್ತು ಆರ್‌ಸಿಗಳನ್ನು ವಿತರಿಸಿ ಹಳೆಯದನ್ನು ಬದಲಿಸುತ್ತಾರೆ. ಹಾಗೆಯೇ ದೇಶದಾದ್ಯಂತ ಪ್ರತಿನಿತ್ಯ 32,000 ಡಿಎಲ್‌ಗಳನ್ನು ವಿತರಿಸಲಾಗುತ್ತಿದೆ. ಮತ್ತು ನಿತ್ಯವೂ ಸುಮಾರು 43,000 ವಾಹನಗಳನ್ನು ನೋಂದಣಿ ಅಥವಾ ಮರುನೋಂದಣಿ ಮಾಡಲಾಗುತ್ತಿದೆ.
ಇನ್ನೊಂದು ವಿಶೇಷ ಅಂದರೆ. ನೂತನ ಡಿಎಲ್‌ನಲ್ಲಿ ಅಂಗಾಂಗ ದಾನ ಕುರಿತ ಚಾಲಕನ ಘೋಷಣೆ ಮತ್ತು ದೈಹಿಕ ವಿಕಲಚೇತನ ಅಥವಾ ಅಂಗವಿಕಲರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನವನ್ನು ಚಲಾಯಿಸುತ್ತಿರುವ ಬಗ್ಗೆ ಉಲ್ಲೇಖಗಳು ಇರಲಿವೆ ಎಂದು ತಿಳಿದುಬಂದಿದೆ.

Also read: ಸಂಸದ್ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಮೋದಿ ಸರ್ಕಾರದ ಮಂತ್ರಿಗಳ ಗ್ರಾಮಗಳ ಸ್ಥಿತಿ ಸಂಪೂರ್ಣ ಹಾಳಾಗಿವೆ..
ನಿರ್ದಿಷ್ಟ ವಾಹನದ ಅಥವಾ ಚಾಲಕನ ವಿವರ ಹೊಂದಿರುವ ಯುಆರ್‌ಎಲ್‌ಗೆ ನೇರ ಸಂಪರ್ಕಿಸುವುದರಿಂದ ವಾಹನ ಮತ್ತು ಸಾರಥಿ ಡೇಟಾಬೇಸ್‌ಗಳಿಂದ ಕ್ಷಿಪ್ರವಾಗಿ ವಿವರ ಪಡೆಯಬಹುದು ಎಂದು ಸಾರಿಗೆ ಸಚಿವಾಲಯ ಸ್ಪಷ್ಟಪಡಿಸಿದೆ. ವಾಹನವು ಮಾಲಿನ್ಯ ನಿಯಂತ್ರಣ ತಪಾಸಣೆಗೆ ನಿಯಮಿತವಾಗಿ ಒಳಪಡಿಸಲು ನೆರವಾಗುವಂತೆ ಎಮಿಷನ್ ನಿಯಮಗಳನ್ನು ಆರ್‌ಸಿಯಲ್ಲಿ ನಿರ್ದಿಷ್ಟವಾಗಿ ನಮೂದಿಸಲಾಗುತ್ತದೆ. ಪ್ರಸ್ತುತ ಎಮಿಷನ್ ಟೆಸ್ಟ್ ಮಾಡಿಸುವಾಗ ಅದರ ಮಾಲೀಕರಿಂದ ವಿವರಗಳನ್ನು ಪಡೆದುಕೊಳ್ಳಲಾಗುತ್ತಿದೆ.
ಈ ಎಲ್ಲ ಬದಲಾವಣೆಗಳಿಗಾಗಿ ಒಂದು ಡಿಎಲ್ ಅಥವಾ ಆರ್‌ಸಿಗೆ ಹೆಚ್ಚುವರಿಯಾಗಿ ತಗುಲುವ ವೆಚ್ಚ 15-20 ರೂ. ಮಾತ್ರ. ನಿರ್ದಿಷ್ಟ ಸಮಯದ ಅವಧಿಯೊಳಗೆ ಎಲ್ಲ ರಾಜ್ಯಗಳೂ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.