ನಿನ್ನೆ ವಾಹನ ಸವಾರರಿಗೆ ಹಾಕಿದ ಭಾರಿ ದಂಡಕ್ಕೆ ಹೆದರಿ ತಪ್ಪಿಸಿಕೊಳ್ಳಲು ಬೈಕ್ ಸವಾರರು ಮಾಡಿದ ‘ದೇಸೀ ಉಪಾಯ’ಕ್ಕೆ ಪೋಲಿಸರೇ ಬೆರಗಾದ ವಿಡಿಯೋ ವೈರಲ್.!

0
1282

ವಾಹನ ಸವಾರರಿಗೆ ಹೇರಲಾದ ದಂಡವನ್ನು ಕಂಡು ಇಡಿ ದೇಶದ ಜನರು ಬೆಚ್ಚಿಬಿದ್ದಿದರು ಇದಕ್ಕೆ ಏನಾದರು ಉಪಾಯ ಮಾಡಬೇಕು ಎನ್ನುವ ಯೋಚನೆಯಲ್ಲಿದ್ದ ಚಾಲಕಿ ಚಾಲಕರು ತಮ್ಮದೇ ಆದ ಒಂದು ದೇಶಿಯ ಉಪಾಯವನ್ನು ಮಾಡಿದ್ದು ಇದನ್ನು ಕಂಡು ಪೊಲೀಸರೆ ಬೆರಗಾಗಿ ಹೋಗಿದ್ದಾರೆ. ಏಕೆಂದರೆ ತಮ್ಮ ಎದುರಿಗೇನೆ ವಾಹನ ಚಾಲಕರು ತಪ್ಪಿಸಿಕೊಂಡು ಹೋಗುತ್ತಿದ್ದರೆ ಪೊಲೀಸರಿಗೆ ಅವರನ್ನು ಹಿಡಿಯಲು ಯಾವುದೇ ಅಧಿಕಾರವಿಲ್ಲದೆ ಸುಮ್ನನಾದ ಘಟನೆ ನಡೆದಿದೆ. ಏಕೆಂದರೆ ವಾಹನ ಮೌಲ್ಯಕ್ಕಿಂತ ಹೆಚ್ಚಿನ ದಂಡವನ್ನು ಕಟ್ಟುವುದು ಎಲ್ಲರಿಗೂ ಹೊರೆಯಾದ ಹಿನ್ನೆಲೆಯಲ್ಲಿ ಯಾರೋ ಒಬ್ಬರು ಮಾಡಿದ ಉಪಾಯವು ನೂರಾರು ಜನರು ಮಾಡಿ ಪೊಲೀಸರಿಗೆ ಟಾಂಗ್ ಕೊಟ್ಟ ವಿಡಿಯೋ ಇಲ್ಲಿದೆ ನೋಡಿ.

ಪೋಲಿಸರಿಂದ ತಪ್ಪಿಸಲು ದೇಶಿ ಉಪಾಯ?

ಹೌದು ದೇಶಾದ್ಯಂತ ಜಾರಿಯಾಗಿರುವ ನೂತನ ಸಂಚಾರಿ ನಿಯಮಗಳಿಂದಾಗಿ ದುಬಾರಿ ದಂಡಕ್ಕೆ ಜನ ಕಂಗಾಲಾಗಿದ್ದಾರೆಯಾದರೂ, ಅತ್ತ ದುಬಾರಿ ದಂಡ ತಪ್ಪಿಸಿಕೊಳ್ಳಲು ಅಲ್ಲಿನ ಬೈಕ್ ಸವಾರರು ಮಾಡಿರುವ ದೇಸೀ ಉಪಾಯಕ್ಕೆ ಟ್ರಾಫಿಕ್ ಪೊಲೀಸರೇ ಬೇಸ್ತು ಬಿದ್ದಿದ್ದಾರೆ. ನೂತನ ಸಂಚಾರಿ ನಿಯಮಗಳ ಅನ್ವಯ ಹೆಲ್ಮೆಟ್ ಇಲ್ಲದೆ ಗಾಡಿ ಚಲಾಯಿಸುವುದು, ಅಗತ್ಯ ದಾಖಲೆಗಳಲ್ಲಿದೇ ಇರುವುದು ಕೂಡ ಅಪರಾಧ. ಇಂತಹ ಪ್ರಕರಣಗಳಲ್ಲಿಗೆ ಟ್ರಾಫಿಕ್ ಪೊಲೀಸರು ದುಬಾರಿ ದಂಡ ವಿಧಿಸುತ್ತಿದ್ದಾರೆ. ಈ ಹಿಂದೆ 500 ರೂ ದಂಡ ವಿಧಿಸುತ್ತಿದ್ದ ಪ್ರಕರಣಗಳಿಗೆ ಇದೀಗ ಕನಿಷ್ಛ 2 ಸಾವಿರ ದಿಂದ 5 ಸಾವಿರ ರೂ. ದಂಡವನ್ನು ಹೇರಲಾಗುತ್ತಿದೆ. ಅದರಂತೆ ನಿನ್ನೆ ಬೈಕ್-ಗೆ 34 ಸಾವಿರ ಆಟೋಕ್ಕೆ 45 ಸಾವಿರ ಭಾರಿ ಮೊತ್ತದ ದಂಡ ವಸೂಲಾಗಿ ಸುದ್ದಿಯಾಗಿತ್ತು.

ಆದರೆ ಇಂತಹ ದುಬಾರಿ ದಂಡದ ಸುದ್ದಿಗಳ ನಡುವೆಯೇ ಬೈಕ್ ಸವಾರರು ಮಾಡಿರುವ ದೇಸೀ ಉಪಾಯಕ್ಕೆ ಪೊಲೀಸರೇ ಬೇಸ್ತು ಬಿದ್ದಿದ್ದಾರೆ. ಜನರು ಮಾಡಿದ ವಿಡಿಯೋವೊಂದನ್ನು ಗುರುಗ್ರಾಮದ ಐಪಿಎಸ್ ಅಧಿಕಾರಿ ಪಂಕಜ್ ನೈನ್ ಅವರು ಶೇರ್ ಮಾಡಿಕೊಂಡಿದ್ದು, ನೋಡುಗರಿಗೆ ನಗುತ್ತರುತ್ತಿದೆ. ರಸ್ತೆಯಲ್ಲಿ ಸಂಚಾರಿ ಪೊಲೀಸರು ಬೈಕ್ ಗಳನ್ನು ನಿಲ್ಲಿಸಿ ಪರಿಶೀಲನೆ ನಡೆಸುತ್ತಿದ್ದರೆ, ಅತ್ತ ಹಿಂದೆ ಪೊಲೀಸರ ಇರುವಿಕೆ ಕಂಡ ಬೈಕ್ ಸವಾರರು ಬೈಕ್ ನಿಂದ ಇಳಿದು ಬೈಕ್ ಅನ್ನು ಪೊಲೀಸರ ಮುಂದೆಯೇ ತಳ್ಳಿ ಕೊಂಡು ಹೋಗುತ್ತಿದ್ದಾರೆ. ಇದು ಒಬ್ಬರು ಮಾಡಿದ ಉಪಯವಲ್ಲ ಸುಮಾರು ನೂರಕ್ಕೂ ಹೆಚ್ಚು ಸವಾರರು ಹೀಗೆ ಮಾಡಿದ್ದಾರೆ.

ಹೀಗೆ ಬೈಕ್ ತಳ್ಳಿಕೊಂಡು ಹೋಗುತ್ತಿದ್ದರೆ. ಬೈಕ್ ಅಲ್ಲಿ ಪೆಟ್ರೋಲ್ ಖಾಲಿಯೋ ಅಥವಾ ಬೈಕ್ ಏನಾದರು ಆಗಿದೆಯೋ ಎಂದುಕೊಳ್ಳಬಹುದು. ಆದರೆ ಆ ರಸ್ತೆಯಲ್ಲಿ ಬರುತ್ತಿದ್ದ ಎಲ್ಲ ಬೈಕ್ ಸವಾರರೂ ಬೈಕ್ ಗಳನ್ನು ತಳ್ಳಿಕೊಂಡು ಬರುತ್ತಿದ್ದಾರೆ. ಸಂಚಾರಿ ನಿಯಮದ ಪ್ರಕಾರ ಹೆಲ್ಮೆಟ್ ಇಲ್ಲದೆ ಬೈಕ್ ಸವಾರಿ ಮಾಡುವುದು ಅಪರಾಧ. ಆದರೆ ಹೆಲ್ಮೆಟ್ ಇಲ್ಲದೇ ಬೈಕ್ ತಳ್ಳುವುದು ಅಪರಾಧವಲ್ಲ. ಇದೇ ಕಾರಣಕ್ಕೆ ಬೈಕ್ ಸವಾರರು ಸಾಮೂಹಿಕವಾಗಿ ಬೈಕ್ ಗಳನ್ನು ತಳ್ಳಿಕೊಂಡು ಬರುತ್ತಿದ್ದಾರೆ. ಇದೊಂದು ದೇಶಿ ಉಪಯವಾಗಿದ್ದು ಇದಕ್ಕೂ ಸರ್ಕಾರ ಕಾನೂನು ತರುತ್ತದೆ ಎಂದು ಹಲವು ಬರೆದುಕೊಂಡಿದ್ದಾರೆ.