ಡಾ.ರಾಜ್ ಅವರ ಗಾಜನೂರು ಆಸ್ತಿ ಸಮಾನವಾಗಿ ಹಂಚಿಕೊಂಡ ಮಕ್ಕಳು

0
1504

ಚಾಮರಾಜನಗರ: ವರನಟ ಡಾ.ರಾಜ್ ಕುಮಾರ್ ಗಾಜನೂರಿನಲ್ಲಿ ಮಾಡಿದ್ದ ಆಸ್ತಿಯನ್ನು ಅವರ ಮಕ್ಕಳೆ ಲ್ಲರೂ ಸಮಾನವಾಗಿ ಹಂಚಿಕೊಂಡಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗಾಜನೂರಿನ ತಾಳವಾಡಿ ಸಬ್ ರಿಜಿಸ್ರ್ಟಾರ್ ಕಚೇರಿಗೆ ಮಂಗಳವಾರ ಡಾ.ರಾಜ್ ಅವರ ಪತ್ನಿ ಪಾರ್ವತಮ್ಮ, ಮೂವರು ಗಂಡು ಮಕ್ಕ ಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅಲ್ಲದೇ ಪುತ್ರಿಯರಾದ ಲಕ್ಷ್ಮಿ ಮತ್ತು ಪೂರ್ಣಿಮಾ ಸೇರಿದಂತೆ ಕುಟುಂಬದ ಸದಸ್ಯರೆಲ್ಲರೂ ಹಾಜರಾಗಿ ಅಧಿಕೃತವಾಗಿ ಆಸ್ತಿಯನ್ನು ಹಂಚಿಕೊಂಡರು.

dr-rajkumar-birthday-19

ರಾಜ್ ಕುಮಾರ್ ಗಾಜನೂರಿನಲ್ಲಿ 50 ಎಕರೆ ಜಮೀನು, ಹೊಸದಾಗಿ ಕಟ್ಟಿಸಿದ ಮನೆ ಹಂಚಿಕೆಯಾಗಿದ್ದು, ಜಮೀನಿ ನಲ್ಲಿ ಹಲವಾರು ಬೆಳೆ ಬೆಳೆಯಲಾಗುತ್ತಿದೆ. ಈ ಆಸ್ತಿ ಯನ್ನು ಮುಂದೇನು ಮಾಡುವುದು ಎಂಬ ಬಗ್ಗೆ ಕುಟುಂಬ ಯಾವುದೇ ಹೇಳಿಕೆ ನೀಡಿಲ್ಲ.

ರಾಘಣ್ಣ ಸ್ಪಷ್ಟನೆ

time-to-remember-late-dr-rajkumar_136663377023

ಆದರೆ ಟೀವಿ ಮಾಧ್ಯಮಗಳ ಊಹಾತ್ಮಕ ವರದಿ ಹೊನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ ರಾಘವೇಂದ್ರ ರಾಜ್ ಕುಮಾರ್, ಪಿತ್ರಾರ್ಜಿತ ಆಸ್ತಿ ಹಂಚಿಕೊಂಡು ಬದುಕಬೇಕಾದ ದುಸ್ಥಿತಿ ರಾಜ್ ಕುಮಾರ್ ಮಕ್ಕಳಿಗೆ ಬಂದಿಲ್ಲ. ಆಸ್ತಿ ಹಂಚಿಕೆ ಕುರಿತು ನಿರ್ಧಾರ ತಾಯಿ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.