ಸಿಲಿಕಾನ್ ಸಿಟಿಯ ಡ್ರಗ್ಸ್ ಮಾಫಿಯಾ: ಕೊರಿಯರ್ ಮತ್ತು ಆನ್ʼಲೈನ್ ಡೆಲಿವರಿ ಬಾಯ್ʼಗಳೇ ಪೆಡ್ಲಿಂಗ್ ಜಾಲದ ಸೇತುವೆ

0
127

ದೇಶದ ಗಮನ ಸೆಳೆದಿರುವ ಡ್ರಗ್ಸ್ ಪೆಡ್ಲಿಂಗ್ ಜಾಲದ ಲಿಂಕ್ ಗಳ ಬಗ್ಗೆ ಹಲವು ಕುತೂಹಲಕರ ಮಾಹಿತಿಗಳನು ಬೆಂಗಳೂರು ಪೊಲೀಸರು ಹೊರ ಹಾಕುತ್ತಿದ್ದಾರೆ.

ಈಗ ನಗರದಲ್ಲಿ ಸರಬರಾಜಾಗುತ್ತಿರುವ ಹೆಚ್ಚಿನ ಪ್ರಮಾಣದ ಮಾದಕವಸ್ತುಗಳು ಮೊಬೈಲ್ app ಸೇವೆ ಆಧಾರಿತ ಡೆಲಿವರಿ ನೀಡುವ ಡೆಲಿವರಿ ಬಾಯ್ಸ್ , ಕೊರಿಯರ್ ಹುಡುಗರ ಮೂಲಕ ವ್ಯಸನಿಗಳ ಕೈ ಸೇರುತ್ತಿವೆ ಎಂಬ ಆಘಾತಕಾರಿ ಮಾಹಿತಿಯನ್ನು ಹೊರಗೆವಿದ್ದಾರೆ. ಪೋಲೀಸರ ಹೇಳಿಕೆಯೀಗ ಡೆಲಿವರಿ ಬಾಯ್ಸ್ ಆಗಿ ಜೀವನ ನಡೆಸುತ್ತಿದ್ದ ಅದೆಷ್ಟೋ ಅಮಾಯಕ ಹೊತ್ತಿನ ತುತ್ತಿನ ಚೀಲ ತುಂಬಿಸುವ ಕಾಯಕಕ್ಕೂ ಬರೆ ಎಳೆಯುವಂತಾಗಿದೆ. ಯಾರೋ ಒಂದಷ್ಟು ಮಂದಿ ಮಾಡುವ ತಪ್ಪಿಗೆ ಮತ್ತೊಂದಷ್ಟುಮಂದಿ ತಲೆದಂಡ ಕೊಡುವ ಸನ್ನಿವೇಶ ನಿರ್ಮಾಣವಾಗಿದೆ.

ಸಿಲಿಕಾನ್ ಸಿಟಿ ಪೊಲೀಸರು ತಮ್ಮ ಮಾತಿಗೆ ಇಂಜು ನೀಡುವಂತೆ ನಿನ್ನೆ ಹಲಸೂರು ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಆರೋಪಿಗಳನ್ನು ಸೆರೆಹಿಡಿದು ಅವರನ್ನು ವಿಚಾರಣೆಗೊಳಪಡಿಸಿದಾಗ ಅವರಿಂದ ಈ ಮಾಹಿತ ಇಹೊರ ಬಿದ್ದಿದೆ. ಸೆರೆ ಸಿಕ್ಕ ಇಬ್ಬರೂ ಡೆಲಿವರಿ ಬಾಯ್ ಗಳೆನ್ನುವುದು ದುರಂತದ ವಿಚಾರ.

ಮಾದಕ ವ್ಯಸನಿಗಳು ನೀಡುವ ಹೆಚ್ಚುವರಿ 500, 1000ರೂ ಗಳ ಆಸೆಗೆ ವಸ್ತುಗಳ ಸರಬರಾಜಿನ ಜೊತೆಗೆ ಡ್ರಗ್ಸ್ ಗಳನ್ನೂ ಅವರಿಗೆ ತಲುಪಿಸುತ್ತಿದ್ದಾಗಿ ಬಂಧಿತರು ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ.

ಡ್ರಗ್ಸ್ ಪೆಡ್ಲಿಂಗ್ ಜಾಲವು ತನ್ನ ಗ್ರಾಹಕರಿಗೆ ವಸ್ತುಗಳನ್ನು ಪೂರೈಸಲು ವಿವಿಧ ಬಗೆಯ ಅಪ್ಲಿಕೇಷನ್ ಬಳಸುತ್ತಿದ್ದಾರೆ ಎಂದು ಕೇಂದ್ರ ಅಪರಾಧ ಶಾಖೆಯ ವಿರೋಧಿ ಮಾದಕವಸ್ತು ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕೊರೋನಾ ಅವಧಿಯಲ್ಲೇ ನಗರದಲ್ಲಿ ಹೆಚಿನ ಪ್ರಮಾಣದಲ್ಲಿ ಮಾದಕ ವಸ್ತುಗಳ ಮಾರಾಟವಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಇದರ ಜೊತೆಗೆ ಮತ್ತೊಂದು ಆತಂಕದ ವಿಚಾರವನ್ನೂ ಪೊಲೀಸರು ಹೇಳಿದ್ದು ಮಾರಾಟಗಾರರಾಗಿ ಕಾಣಿಸಿಕೊಳ್ಳುತ್ತಿರುವರಲ್ಲಿ ಬಹುತೇಕರು ವಿಧ್ಯಾರ್ಥಿಗಳೇ ಆಗಿದ್ದಾರೆ.

ಹುಡುಗರಾಗಿರುವ ಕಾರಣ ಅವರ ಬಗ್ಗೆ ಅನುಮಾನ ಕಡಿಮೆಯಾಗುವುದನ್ನೇ ಬಂಡವಾಳವಾಗಿಸಕೊಂಡ ಹುಡುಗರು ವಸ್ತುಗಳ ಡೆಲಿವರಿ ವೇಳೆ ತಮ್ಮ ಸರಂಜಾಮ ಡಬ್ಬಿಯ ಕೆಳಭಾಗ, ಸಾಕ್ಸ್, ಕಾಲರ್, ಸೇರಿದಂತೆ ಇತರ ಕೆಲ ಗೌಪ್ಯ ಜಾಗಗಳಲ್ಲಿ ಈ ವಸ್ತುಗಳನ್ನಿಟ್ಟುಕೊಂಡು ಸಬಂದಪಟ್ಟವರಿಗೆ ತಲುಪಿಸುವ ಕೆಲಸ ನಿರ್ವಹಿಸಿದ್ದರು ಎಂದು ಹೇಳಿದ್ದಾರೆ.

ಇದರಲ್ಲಿರೋ ಟ್ವಿಸ್ಟ್ ಏನಪ್ಪಾ ಅಂದ್ರೆ ಡೆಲಿವರಿ ಮಾಡುವ ಹುಡುಗರಲ್ಲಿ ಅನೇಕರಿಗೆ ತಾವು ಕೊಂಡು ಹೋಗುವ ಡ್ರಗ್ಸ್ ಸಂಬಂದಿತ ವಸ್ತುಗಳ ಬಗೆಗಾಗಲಿ, ಅದರ ಮೂಲದ ಬಗೆಗಾಗಲಿ ಮಾಹಿತಿ ಇರುವುದೇ ಇಲ್ಲವಂತೆ, ಕೇವಲ ಇಂತಹ ವಸ್ತುವನ್ನು ತಲುಪಿಸಿದ್ರೆ ಹೆಚ್ಚುವರಿ ಹಣ ಸಿಗುತ್ತದೆ ಎನ್ನುವ ಮಾಹತಿಯನ್ನ ಅವರಿಗೆ ನೀಡಿ ಜೋಪಾನವಾಗಿ ಅವನ್ನು ತಲುಪಿಸುವಂತೆ ಏಜೆಂಟರುಗಳು ನೋಡಿಕೊ‍ಳ್ಳುತ್ತಾರೆ ಎನ್ನುವುದು ಪೊಲೀಸರು ಮಾಹಿತಿ.