ಪೋಲೀಸರ ಎದುರೇ ಎಸ್ಐ ಟೋಪಿ ಸಮೇತ ಕೋಬ್ರಾ ಬೈಕ್ ಎಗರಿಸಿದ ಮಹಾ ಕಿಲಾಡಿ..!

0
488

ಹಾಸನದ ಕುಡುಕನೊಬ್ಬನ ಅವತಾರ ನೋಡಿದ್ರೆ ಶಾಕ್ ಅಗ್ತೀರ ಈ ವಿಡಿಯೋ ನೋಡಿ.

ಭಾನುವಾರ ರಾತ್ರಿ ಹಾಸನದ ಸಂತೆಪೇಟೆಯಲ್ಲಿ ಎಸ್ಐ ಟೋಪಿ ಸಮೇತ ಕೋಬ್ರಾ ಬೈಕ್ ಎಗರಿಸಿದ ಕುಡುಕನೊಬ್ಬ ಒಂದು ಕಿಲೋಮೀಟರ ವರೆಗೆ ನಗರವನ್ನು ಸುತ್ತು ಹಾಕಿದ ವಿಡಿಯೋ ಯೌಟ್ಯೂಬ್ ನಲ್ಲಿ ಹರಿದಾಡುತ್ತಿದೆ. ಈ ವೀಡಿಯೊವನ್ನು ಸುದ್ದಿ ಸಂಸ್ಥೆಯ ANI ಪೋಸ್ಟ್ ಮಾಡಿದೆ.

ಸಿನಿಮೀಯ ರೀತಿಯಲ್ಲಿ ಯುವಕನನ್ನು ಚೇಸ್ ಮಾಡಿ. ಪೊಲೀಸ್ ಟೋಪಿ ಧರಿಸಿ ಕೋಬ್ರಾ ಬೈಕ್ ಓಡಿಸುತ್ತಿರುವುದನ್ನು ಗಮನಿಸಿದ ಸಂಚಾರ ಪೊಲೀಸರು ಇಲ್ಲಿನ ಗಾಂಧಿ ಬಜಾರ್ ವೃತ್ತದಲ್ಲಿ ಸ್ಥಳೀಯರ ನೆರವಿನೊಂದಿಗೆ ಆ ಯುವಕನನ್ನು ಹಿಡಿದಿದ್ದಾರೆ. ಕುಡಿದ ಮತ್ತಿನಲ್ಲಿ ಆ ಯುವಕ ಹಾಗೆ ಮಾಡಿದ್ದಾನೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಕುಡಿದ ಅಮಲಿನಲ್ಲಿ ಯುವಕನೊಬ್ಬ ಪೊಲೀಸರ ಟೋಪಿ ಸಮೇತ ಕೋಬ್ರಾ ಬೈಕ್ ಅನ್ನು ಅಪಹರಿಸಿ ಹಾಸನದ ರೋಡಿನ ಮೇಲೆ ನಗುನಗುತ್ತಾ “ಸೂಪರ್ಸ್ಟಾರ್ ರಜನಿಕಾಂತ್!” ಅಂತ ಹೇಳುತ್ತಾ ಒಂದು ಕಿಲೋಮೀಟರ್ ಬೈಕ್ ಅನ್ನು ಓಡಿಸಿದ್ದಾನೆ. ಗಾಂಧಿ ಬಜಾರ್ ವೃತ್ತದ ಸಿಗ್ನಲ್ ಬಳಿ ಸ್ಥಳೀಯರೊಬ್ಬರು ಅವನ ಗಡಿಗೆ ತಮ್ಮ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ ಪೊಲೀಸರಿಗೆ ಯುವಕನನ್ನು ಹಿಡಿಯಲು ಸಹಾಯ ಮಾಡಿದ್ದಾರೆ.