ಧ್ರುವ ಸರ್ಜಾ 30 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ, ಯಾಕೆ ಅಂತ ತಿಳಿದರೆ ಅಚ್ಚರಿ ಖಂಡಿತ ಪಡ್ತೀರ…!!

0
597

ಪೊಗರು ಚಿತ್ರದಲ್ಲಿ ನಟಿಸುತ್ತಿರುವ ಸ್ಯಾಂಡಲ್‍ವುಡ್‍ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ದೇಹದ ತೂಕವನ್ನು 30 ಕೆ.ಜಿ ಕಡಿಮೆ ಮಾಡಿಕೊಂಡಿದ್ದಾರೆ. ಅದೂ ಕೂಡ ಕೇವಲ 15 ನಿಮಿಷದ ಪಾತ್ರಕ್ಕಾಗಿ 30ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಈ ಹಿಂದೆ ಪೊಗರು ಸಿನಿಮಾದಲ್ಲಿ 12ರ ಹರೆಯದ ಹುಡುಗನಾಗಿ ಧ್ರುವ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಹಾಗಾಗಿ ಧ್ರುವ ಸರ್ಜಾ ಪಾತ್ರದ ಬಗ್ಗೆ ಎಲ್ಲರಿಗೂ ಕುತೂಹಲ ಮೂಡಿದ್ದು ಸಹಜ. ಧ್ರುವ ಸರ್ಜಾ ತಮ್ಮ ತೂಕವನ್ನು ಇಳಿಸಿಕೊಂಡಿರೋದು ಕೇವಲ 15 ನಿಮಿಷಕ್ಕಾಗಿ ಎನ್ನುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ನಂದ ಕಿಶೋರ್‌ ನಿರ್ದೇಶನದ ಚಿತ್ರ ಪೊಗರು ಚಿತ್ರದಲ್ಲಿ ಧ್ರುವ ಸರ್ಜಾ ಬೇರೆ ಬೇರೆ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಒಂದು ಶಾಲಾ ಬಾಲಕನ ಗೆಟಪ್‌. ಧ್ರುವ ಸರ್ಜಾ ಮೊದಲಿನಿಂದ ಬಾಡಿ ಬಿಲ್ಡ್‌ ಮಾಡೋದರ ಕಡೆ ಹೆಚ್ಚು ಗಮನ ಕೊಟ್ಟಿದ್ದ ಧ್ರುವ, ಅಭಿಮಾನಿಗಳಿಗೆ ಸ್ಫೂರ್ತಿಯಾಗಿದ್ದಾರೆ. ಈಗ ಕಬ್ಬಿಣದಂತೆ ಪಳಗಿಸಿದ ದೇಹವನ್ನು ಕರಗಿಸಿ ಶಾಲಾ ಬಾಲಕನಾಗುವ ಹಾರ್ಡ್‌ ರಿಸ್ಕ್‌ ತೆಗೆದುಕೊಂಡು ಗುರುತು ಸಿಗದ ರೀತಿಯಲ್ಲಿ ತಮ್ಮನ್ನು ತಾವು ಬದಲಾಯಿಸಿಕೊಂಡಿದ್ದಾರೆ.

ಧ್ರುವ ಸರ್ಜಾ ಮತ್ತು ನಿರ್ದೇಶಕ ನಂದ ಕಿಶೋರ್‌ ಒಂದಾದ ಮೇಲೆ ಒಂದರಂತೆ ಯಶಸ್ವೀ ಚಿತ್ರಗಳನ್ನು ನೀಡುತ್ತಾ ಬಂದಿದ್ದಾರೆ. ಧ್ರುವ ಸರ್ಜಾ ಅಭಿನಯದ ಅದ್ದೂರಿ, ಬಹದ್ದೂರ್‌ ಮತ್ತು ಭರ್ಜರಿ ಚಿತ್ರಗಳು ಹಿಟ್‌ ಆಗಿದ್ದು, ಹ್ಯಾಟ್ರಿಕ್‌ ಆ್ಯಕ್ಷನ್‌ ಹೀರೊ ಎನಿಸಿಕೊಂಡಿದ್ದಾರೆ. ನಂದ ಕಿಶೋರ್‌ ವಿಕ್ಟರಿ, ಅಧ್ಯಕ್ಷ, ರನ್ನ ಚಿತ್ರಗಳನ್ನು ನಿರ್ದೇಶಿಸಿ ಯಶಸ್ಸನ್ನು ಕಂಡವರು. ಈಗ ಇಬ್ಬರ ಕಾಂಬಿನೇಷನ್‌ನ ಪೊಗರು ಹೇಗೆ ಜನರನ್ನು ಆಕರ್ಷಿಸಲಿದೆ ಎಂಬ ಕುತೂಹಲ ಮೂಡಿದೆ.