ಅದ್ದೂರಿ ಖ್ಯಾತಿಯ ಸ್ಟಾರ್ ಧ್ರುವ ಸರ್ಜಾ ಮಣಿಪಾಲ್ ಆಸ್ಪತ್ರೆಗೆ ದಾಖಲು

0
1081

 

ಧ್ರುವ ಸರ್ಜಾ ತಮ್ಮ ಅಪ್‌ ಕಮಿಂಗ್ ಚಿತ್ರ ‘ಭರ್ಜರಿ’ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು. ಸಂಪೂರ್ಣ ರೈನ್ ಎಫೆಕ್ಟ್ ಶೂಟಿಂಗ್‌ನಲ್ಲಿ ಭಾಗವಹಿಸಿದ್ದ ಧ್ರುವ ಸರ್ಜಾಗೆ ವಿಪರೀತ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಧ್ರುವ ಸರ್ಜಾ ಚಿಕಿತ್ಸೆ ಪಡೆಯುತ್ತಿದ್ದು, ಅವರ ಕುಟುಂಬ ಮತ್ತು ಗೆಳೆಯರು ಅವರೊಟ್ಟಿಗಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.  ವೈರಲ್ ಫೀವರ್ ನಿಂದ ಬಳಲುತ್ತಿರುವ ನಟ ಧ್ರುವ ಸರ್ಜಾ ರವರನ್ನ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಳೆದ ಎರಡು ದಿನಗಳಿಂದ ಐ.ಸಿ.ಯುನಲ್ಲಿ ಧ್ರುವ ಸರ್ಜಾ ಟ್ರೀಟ್ಮೆಂಟ್ ಪಡೆಯುತ್ತಿದ್ದಾರೆ.

”ಕಳೆದ 7-8 ದಿನಗಳಿಂದ ‘ಭರ್ಜರಿ’ ಚಿತ್ರದ ಫೈಟ್ಸ್ ಹಾಗೂ ಸಾಂಗ್ ಶೂಟಿಂಗ್ ನಡೆಯುತ್ತಿತ್ತು. ಚಿತ್ರೀಕರಣದ ಸಲುವಾಗಿ ಬೆಳಗ್ಗಿನಿಂದ ಸಂಜೆವರೆಗೂ ಧ್ರುವ ಸರ್ಜಾ ಅರಿಶಿನದ ನೀರಿನಲ್ಲಿ ನೆಂದಿದ್ರು. 7-8 ದಿನ ಹೀಗೇ ಅರಿಶಿನದ ನೀರಿನಲ್ಲಿ ಇದ್ದಿದ್ರಿಂದ ಜ್ವರ ಶುರು ಆಯ್ತು” ಅಂತ ‘ಫಿಲ್ಮಿಬೀಟ್ ಕನ್ನಡ’ಗೆ ಧ್ರುವ ಸರ್ಜಾ ಕುಟುಂಬಸ್ಥರು ತಿಳಿಸಿದ್ದಾರೆ.

”ಜ್ವರ ಇದ್ದರೂ ಶೂಟಿಂಗ್ ಮಾಡಿದರು. ಭಾನುವಾರ ಜ್ವರ ಜಾಸ್ತಿ ಆಗ್ಹೋಯ್ತು. ಸೋಮವಾರ ಬೆಳಗ್ಗೆ ಅಡ್ಮಿಟ್ ಮಾಡಿದ್ವಿ. ನಾಳೆ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ” ಎನ್ನುತ್ತಾರೆ ಧ್ರುವ ಸರ್ಜಾ ಕುಟುಂಬಸ್ಥರು.

”ಇನ್ನೊಂದು ವಾರ ಕಂಪ್ಲೀಟ್ ಬೆಡ್ ರೆಸ್ಟ್ ತೆಗೆದುಕೊಳ್ಳಬೇಕು” ಅಂತ ಮಣಿಪಾಲ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

”ಕನಕಪುರದ ರಾವುಗೊಡ್ಲು ಹಳ್ಳಿಯಲ್ಲಿ ಇರುವ ಆಂಜಿನೇಯ ದೇವಸ್ಥಾನದಲ್ಲಿ ಸೆಟ್ ಹಾಕಿದ್ವಿ. ಅಲ್ಲಿ ಫೈಟ್ ಶೂಟಿಂಗ್ ಮಾಡ್ತಿದ್ವಿ. ಚಿತ್ರೀಕರಣ ಆಗುವಾಗ ಮಳೆ ಕೂಡ ಬಂತು. ಹೀಗಾಗಿ ಇನ್ಫೆಕ್ಷನ್ ಆಗಿದೆ. ಈಗ ಹುಷಾರಾಗಿದ್ದಾರೆ” ಅಂತ ‘ಫಿಲ್ಮಿಬೀಟ್ ಕನ್ನಡ’ಗೆ ‘ಭರ್ಜರಿ’ ಚಿತ್ರದ ನಿರ್ದೇಶಕ ಚೇತನ್ ತಿಳಿಸಿದ್ದಾರೆ.