ಡ್ರೈ ಫ್ರೂಟ್ಸ್ ತೀನ್ನೋದ್ರಿಂದ ನಿಮ್ಮ ಅರೋಗ್ಯ ಹೇಗೆ ವೃದ್ಧಿಯಾಗುತ್ತದೆ..!!

0
3465

ಹಣ್ಣುಗಳೆಂದರೆ ಯಾರಿಗೆ ಇಷ್ಟವಿಲ್ಲ?

ಕುರುಕಲು ತಿಂಡಿಯಂತೆ ತಿನ್ನಬಹುದಾದ ಹಣ್ಣುಗಳು ಪೌಷ್ಟಿಕಾಂಶಭರಿತವಾಗಿರುತ್ತವೆ. ಒಣಗಿದ ಹಣ್ಣುಗಳೂ ಸಹ ಮಾಮೂಲಿ ಹಣ್ಣಿನಷ್ಟೇ ಪೋಷಕಾಂಶಗಳನ್ನು ಹೊಂದಿರುತ್ತವೆ. ವಿಶೇಷವಾದ ಕ್ರಮದಿಂದ ಒಣಗಿಸಿ ಇದರ ನೀರಿನಾಂಶವನ್ನು ತೆಗೆದಿರುವುದರಿಂದ ಗಾತ್ರ ಕುಗ್ಗಿರುತ್ತದೆ. ಆದರೆ ಪೌಷ್ಟಿಕಾಂಶ ಹಾಗೇ ಇರುತ್ತವೆ. ಸಿಹಿ ಪದಾರ್ಥಗಳಲ್ಲಿ ಇವುಗಳ ಬಳಕೆ ಜಾಸ್ತಿ. ಒಣಹಣ್ಣುಗಳನ್ನು ಪ್ರತ್ಯೇಕವಾಗೂ ತಿನ್ನಬಹುದು.

%e0%b2%a1%e0%b3%8d%e0%b2%b0%e0%b3%88-6-658x383

Also read: ಅಬ್ಬಾ !! ಲವಂಗದ ಕಣ ಕಣದಲ್ಲೂ ಆರೋಗ್ಯದ ಶಕ್ತಿ

ಚೆರ್ರಿ, ಬೆರ್ರಿ ಮುಂತಾದವುಗಳನ್ನು ಬೇಕರಿ, ಐಸ್‍ಕ್ರೀಮ್ ಮುಂತಾದವುಗಳಲ್ಲಿ ಹೆಚ್ಚು ಬಳಸುತ್ತಾರೆ. ನಿತ್ಯ ಒಣಹಣ್ಣುಗಳನ್ನು ತಿನ್ನುವುದರಿಂದ ಕಾಯಿಲೆಗಳಿಂದ ರಕ್ಷಣೆ ದೊರೆಯುತ್ತದೆ. ಇವುಗಳಲ್ಲಿ ಹೇರಳವಾದ ಪೋಷಕಾಂಶಗಳಿರುತ್ತವೆ. ಹೃದಯದ ಕಾಯಿಲೆಗಳನ್ನು ದೂರಮಾಡುವ ಶಕ್ತಿ ಒಣಹಣ್ಣುಗಳಿಗಿದೆ. ಖರ್ಜೂರ, ದ್ರಾಕ್ಷಿ, ಪ್ಲಮ್ ಮುಂತಾದ ಹಣ್ಣುಗಳಲ್ಲಿ ಕಬ್ಬಿಣಾಂಶ ಹೇರಳವಾಗಿದ್ದು ರಕ್ತಹೀನತೆಯಿಂದ ಕಾಪಾಡಿ ದೇಹಕ್ಕೆ ಅಧಿಕ ಶಕ್ತಿ ನೀಡುತ್ತವೆ. ಬಾದಾಮಿಯಲ್ಲಿ ಅಧಿಕ ಕಾಪರ್ ಇದ್ದು ಶಕ್ತಿ ಹಾಗೂ ಹೊಸ ರಕ್ತಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಜೊತೆಗೆ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ.

dry_fruits_1

Also read: ದೇಹದ ಸುಗಮ ರಕ್ತ ಸಂಚಾರಕ್ಕೆ ಮನೆಮದ್ದು

ಒಣಹಣ್ಣಗಳಲ್ಲಿ ಅಗತ್ಯ ಪ್ರಮಾಣದ ಕೊಬ್ಬು, ವಿಟಮಿನ್-ಬಿ, ಪಾಸ್ಪರಸ್, ಕಾಪರ್, ಕಬ್ಬಿಣಾಂಶವಿದ್ದು ದೇಹದ ಕಾರ್ಯನಿರ್ವಹಣೆಗೆ ಅಗತ್ಯ ಚೈತನ್ಯ ನೀಡುತ್ತವೆ. ಒಣದ್ರಾಕ್ಷಿಯಲ್ಲಿರುವ ಕ್ಯಾಲ್ಸಿಯಂ, ವಿಟಮಿನ್ ಮೂಳೆಗಳ ರಚನೆಗೆ ಸಹಾಯ ಮಾಡಿ ನಿಶ್ಶಕ್ತಿಯನ್ನು ತಡೆಗಟ್ಟುತ್ತವೆ. ಗೋಡಂಬಿಯು ಆರೋಗ್ಯಕರ ಸ್ನಾಯು ಹಾಗೂ ಒಸಡುಗಳಿಗೆ ಅವಶ್ಯಕ. ವಾಲ್ನಟ್‍ನಲ್ಲಿರುವ ಒಮೇಗಾ-3 ಫ್ಯಾಟಿ ಆಸಿಡ್ ಮೆದುಳಿನ ಬೆಳವಣಿಗೆಗೆ ಅತ್ಯಾವಶ್ಯಕ.ಖರ್ಜೂರದಲ್ಲಿರುವ ಪೋಷಕಾಂಶ, ವಿಟಮನ್, ಖನಿಜಾಂಶ ಸಹಜ ಬೆಳವಣಿಗೆಗೆ ಅಗತ್ಯವಾಗಿದೆ. ನಿತ್ಯ ಖರ್ಜೂರ ಸೇವಿಸುವುದರಿಂದ ಚಯಾಪಚಯ ಕ್ರಿಯೆ ಉತ್ತಮವಾಗಿರುತ್ತದೆ.

almonds

Also read: ನಿಮ್ಮ ಮೂತ್ರಪಿಂಡವನ್ನು ನೀವೇ ಶುದ್ಧೀಕರಿಸಿಕೊಳ್ಳಿ, ರಕ್ಷಿಸಿ.

ನಿತ್ಯ ಒಂದೆರಡು ಖರ್ಜೂರ ಸೇವಿಸುವುದು ಒಳ್ಳೆಯದು. ಬಾದಾಮಿಯಲ್ಲಿ ವಿಟಮಿನ್ ಎ, ಮೆಗ್ನಿಸಿಯಂ, ಪೊಟ್ಯಾಷಿಯಂ ಹೇರಳವಾಗಿದ್ದು ರಕ್ತದೊತ್ತಡ, ರಕ್ತಪರಿಚಲನೆಯನ್ನು ಉತ್ತಮಪಡಿಸುತ್ತದೆ. ಹೃದಯದ ಆರೋಗ್ಯ ಕಾಪಾಡುತ್ತದೆ. ದೇಹಕ್ಕೆ ಅಗತ್ಯವಾದ ಅಲ್ಪಪ್ರಮಾಣದ ಕಾಪರ್ ಮತ್ತು ಮ್ಯಾಂಗನೀಸ್ ಕೂಡ ಇದರಲ್ಲಿದ್ದು, ಆರೋಗ್ಯಕರ ಅಂಶಗಳು ಶರೀರಕ್ಕೆ ದೊರೆಯುತ್ತವೆ. ಶರೀರವನ್ನು ಒಳಹೊರಗಿಂದ ಗಟ್ಟಿಗೊಳಿಸುವುದಷ್ಟೇ ಅಲ್ಲದೆ, ಈ ಒಣಹಣ್ಣುಗಳು ಸೌಂದರ್ಯರಕ್ಷಣೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತವೆ. ತ್ವಚೆಯ ಅಂದ, ಹೊಳಪನ್ನೂ ಕಾಪಾಡಿ ವಯಸ್ಸಾಗುವುದನ್ನು ಮುಂದೂಡುತ್ತದೆ.

ಒಣಹಣ್ಣುಗಳನ್ನು ತಿನ್ನುವುದರಿಂದ ಬಾಯಿಗೆ ರುಚಿ, ದೇಹಕ್ಕೆ ಶಕ್ತಿ, ಚರ್ಮಕ್ಕೆ ಅಂದ ದೊರೆಯುತ್ತದೆ. ಮರೆಯದೆ ಒಣಹಣ್ಣುಗಳನ್ನು ತಿನ್ನಿ.