ಅಂಬರೀಶ್ ಅಂತ್ಯಕ್ರಿಯೆ ಶಾಂತವಾಗಿ ನಡೆಯಲು ಕಾರಣ, ತೆರೆಯ ಹಿಂದೆ ಕೆಲಸ ಮಾಡಿದ ಡಿ.ಕೆ.ಶಿ. ಮತ್ತು ಸಿ.ಎಂ. ಕುಮಾರಸ್ವಾಮಿ, ಅವರ ಮುತುವರ್ಜಿಗೆ ಹಾಟ್ಸ್-ಆಫ್!!

0
486

ನಟ, ಮಾಜಿ ಸಚಿವ ಅಂಬರೀಶ್ ಅವರ ಅಂತ್ಯಕ್ರಿಯೆ ಸೋಮವಾರ ನಡೆಯಿತು. ಖುದ್ದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಸುಗಮವಾಗಿ ಎಲ್ಲಾ ಕಾರ್ಯಗಳು ನಡೆಯಿತು. ಅಭಿಮಾನಿಗಳ ಕೋರಿಕೆಯ ಮೇರೆಗೆ ಭಾನುವಾರ ಸಂಜೆ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಮಂಡ್ಯಕ್ಕೆ ತೆಗೆದುಕೊಂಡು ಹೋಗಿ ಸರ್ ಎಂ.ವಿ. ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆಯ ಮಾಡಲಾಗಿತ್ತು. ಇಂದು ಬೆಳಿಗ್ಗೆ 9 ಗಂಟೆ ವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ಅಂಬರೀಶ್ ಅವರ ಅಂತ್ಯಕ್ರಿಯೆಯನ್ನು ಶಾಂತವಾಗಿ ಯಾವುದೇ ಹಿಂಸಾಚಾರ ವಿಲ್ಲದೆ ಅಂತ್ಯಕ್ರಿಯೆಯನ್ನು ಮುಗಿಸಿದ ಶ್ರೇಯಸ್ಸು ಸರ್ಕಾರಕ್ಕೆ ಸೇರಿತ್ತೆ.

ಅಂಬಿ ಅಭಿಮಾನಿಗಳ ಮನಗೆದ್ದ ಎಚ್.ಡಿ.ಕೆ:

ಮುಖ್ಯಮಂತ್ರಿ ಕುಮಾರಸ್ವಾಮಿ ಅಂಬಿಯವರ ಅಭಿಮಾನಿಗಳ ಮನಗೆದ್ದಿದ್ದಾರೆ ಏಕೆಂದರೆ ಅವರು ಕೇಳಿದ ರೀತಿಯಲ್ಲಿ ಮಂಡ್ಯಕ್ಕೆ ಅಂಬಿಯವರ ದರ್ಶನಕ್ಕೆ ಅವಕಾಶ ನೀಡಿದ ಕುಮಾರಸ್ವಾಮಿಯವರು ರಿಯಲ್ ಹೀರೋ ಪಟ್ಟಕ್ಕೆ ಏರಿದ್ದಾರೆ. ಅದಕ್ಕೂ ಮೊದಲು ನಟ ಅಂಬರೀಶ್ ಅವರ ಸಾವಿನ ಸುದ್ದಿ ಹೊರಬೀಳುತ್ತಿದ್ದಂತೆಯೇ ಕುಮಾರಸ್ವಾಮಿಯವರು ತಕ್ಷಣವೇ ಆಸ್ಪತ್ರೆಯತ್ತ ದೌಡಾಯಿಸಿದ್ದರು. ಅಲ್ಲದೇ ಆಸ್ಪತ್ರೆಯ ಮುಂದೆ ಅದಾಗಲೇ ನೆರೆದಿದ್ದ ಅಭಿಮಾನಿಗಳಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದರು. ಅಭಿಮಾನಿಗಳು ಹೇಳಿದಂತೆ ಅಂಬಿ ಪಾರ್ಥಿವ ಶರೀರ ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡುವುದಾಗಿ ಘೋಷಣೆ ಮಾಡಿದ್ದರು. ಮರುದಿನ ಅಂದರೆ ಭಾನುವಾರ ಮಂಡ್ಯದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ್ರು.

ಸೇನಾ ಹೆಲಿಕಾಪ್ಟರ್ ಪಡೆಯಲು ಮನವಿ:

ಮಂಡ್ಯದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅಂಬಿಯ ಮೃತದೇಹವನ್ನು ರವಾನಿಸುವ ಕುರಿತಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಜೊತೆ ಮಾತುಕತೆ ನಡೆಸಿ, ಸೇನಾ ಹೆಲಿಕಾಪ್ಟರ್ ನೀಡುವಂತೆ ರಕ್ಷಣಾ ಸಚಿವೆಯಲ್ಲಿ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸೇನಾ ಹೆಲಿಕಾಪ್ಟರ್ ಮೂಲಕ ಅಂಬಿ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ಶಿಫ್ಟ್ ಮಾಡುವಲ್ಲಿ ಯಶಸ್ವಿಯಾದ್ರು. ಇಷ್ಟು ಮಾತ್ರವಲ್ಲದೇ ಅಂಬಿ ಪಾರ್ಥಿವ ಶರೀರದ ಜೊತೆ ಸೇನಾ ಹೆಲಿಕಾಪ್ಟರ್‍ನಲ್ಲಿ ಸಿಎಂ ಕೂಡ ತೆರಳಿದ್ದರು. ಅಲ್ಲಿಯೂ ಖುದ್ದು ನಿಂತು ವ್ಯವಸ್ಥೆ ಪರಿಶೀಲನೆ ನಡೆಸಿದ್ದರು. ಸಚಿವ ಪುಟ್ಟರಾಜು ಸೇರಿದಂತೆ ಹಲವರ ಉಸ್ತುವಾರಿಯ ಮುಖಾಂತರ ಮಂಡ್ಯದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು.

ಹಿಂದೆ ನಡೆದ ಘಟನೆಯಿಂದ ಎಚ್ಚರವಹಿಸಿದ ಸಿಎಂ:

ಡಾ. ರಾಜಕುಮಾರ್ ನಿಧನದ ವೇಳೆ ನಡೆದಿದ್ದ ಘಟನೆಗಳಿಂದ ಪಾಠ ಕಲಿತಿದ್ದ ಕುಮಾರಸ್ವಾಮಿ ಅವರು ಅಂಬಿ ಅಂತ್ಯಕ್ರಿಯೆ ವಿಧಿವಿಧಾನಗಳನ್ನು ಶಾಂತಿಭಂಗವಾಗದಂತೆ ಸಮರ್ಥವಾಗಿ, ದಕ್ಷವಾಗಿ ನಿಭಾಯಿಸಿದ್ದಾರೆ. ಅದರಲ್ಲಿ ಅದೇ ದಿನ ನಿಧನರಾದ ಸಚಿವ ಜಾಫರ್ ಷರೀಫ್ ಅವರ ಅಂತ್ಯಕ್ರಿಯೆ ಮಿಲ್ಲರ್ಸ್ ರಸ್ತೆಯಲ್ಲಿ ನಡೆಯಿತು ಈ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಅಲ್ಲಿಂದ ನೇರವಾಗಿ ಕಂಠೀರವ ಸ್ಟುಡಿಯೋಕ್ಕೆ ತೆರಳಿ

ಅಂಬರೀಶ್‌ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಅಂತ್ಯಕ್ರಿಯೆಗೆ ಆಗಮಿಸಿದ ರಾಜಕೀಯ ಧುರೀಣರು ಹಾಗೂ ಚಿತ್ರರಂಗದ ಗಣ್ಯರನ್ನು ಖುದ್ದು ಬರಮಾಡಿಕೊಂಡು ಮಾತನಾಡಿಸಿದರು. ಅಂತ್ಯಕ್ರಿಯೆ ಪೂರ್ಣಗೊಳ್ಳುವ ವರೆಗೂ ಸ್ಥಳದಲ್ಲಿಯೇ ಇದ್ದು ಕುಟುಂಬದವರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರ ಮಾಡಿದರು.

ಒಟ್ಟಾರೆಯಾಗಿ ಅಂಬಿಯವರ ಅಂತ್ಯಕ್ರಿಯೆನ್ನು ಶಾಂತವಾಗಿ ಯಾವುದೇ ಹಿಂಸಾಚಾರಕ್ಕೆ ಆಸ್ಪದ ಇಲ್ಲದಂತೆ ಅಂತ್ಯಸಂಸ್ಕಾರವನ್ನು ಅಚ್ಚುಕಟ್ಟಾಗಿ ನೆರವೇರಿಸಿದ ಗೌರವ ಕುಮಾರಸ್ವಾಮಿಯವರಿಗೆ ಸೇರಿದೆ.