ಸ್ಮಶಾನದಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ದುನಿಯಾ ವಿಜಿ

0
748

ಸ್ಮಶಾನದಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ದುನಿಯಾ ವಿಜಿ  

ಸ್ಯಾಂಡಲ್ ವುಡ್ನ ಕರಿಚಿರತೆ ನಟ ದುನಿಯಾ ವಿಜಯ್ ತಮ್ಮ 43 ನೇ ವರ್ಷದ ಹುಟ್ಟುಹಬ್ಬವನ್ನ ಇಂದು ಆಚರಿಸಿಕೊಂಡರು.

43ನೇ ವಸಂತಕ್ಕೆ ಕಾಲಿಟ್ಟಿರುವ ಈ ನಟ ಬನಶಂಕರಿಯ ಸ್ಮಶಾನದಲ್ಲಿ  ಗೆಳೆಯರು ಮತ್ತು ಪತ್ನಿಯ ಜೊತೆ ವಿಜಿ ಬರ್ತಡೇ ಆಚರಿಸಿಕೊಂಡರು. ಮಾಸ್ತಿಗುಡಿ ಚಿತ್ರೀಕರಣದ ಸಂದರ್ಭದಲ್ಲಿ ದುರಂತ ಸಾವು ಕಂಡ ಗೆಳೆಯರಾದ ಅನಿಲ್-ಉದಯ್ ಸಮಾಧಿಯ ಬಳಿಯೇ ಈ ಆಚರಣೆ ಮಾಡಿಕೊಂಡರು.

duniya viji

ಇತ್ತಿಚೇಗೆ ಮಾಸ್ತಿಗುಡಿ ದುರಂತದಲ್ಲಿ ತನ್ನ ಇಬ್ಬರು ಸ್ನೇನಿತರನ್ನು ಕಳೆದುಕೊಂಡ ವಿಜಯ್ ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದರು.

ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರು ಮತ್ತು  ಸಂಬಂಧಿಕರು ವಿಜಯ್ ರವರನ್ನು ದೂರಿದ್ದರು. ಆದರೆ ವಿಜಯ್ ಮಾತ್ರ ನಾನು ಬದುಕಿರುವವರೆಗು ಆ ಕುಟುಂಬಗಳಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದು ಹೇಳುವ ಮುಖಾಂತರ ಆ ದೇವರು ಅವರಿಗೆ ಶಕ್ತಿಯನ್ನು ಕೊಡಲಿ ಎನ್ನುವುದು ಅವರ ಅಭಿಮಾನಿಗಳ ಹಾರೈಕೆ.

ಈ ಬಾರಿ ಗೆಳೆಯರ ಅಗಲಿಕೆಯ ನೋವು ಹುಟ್ಟುಹಬ್ಬಕ್ಕೆ ಸಂತಸದ ಬದಲು ದುಃಖ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

duniya vijay