ಪ್ರವಾಹಕ್ಕೆ ನೀಡಿದ ರಜೆ ಸರಿದೂಗಿಸಿಕೊಳ್ಳಲು ದಸರಾ ರಜೆ ಕಡಿತಗೊಳಿಸಲು ಶಿಕ್ಷಣ ಇಲಾಖೆ ಚಿಂತನೆ; ಶನಿವಾರ, ಭಾನುವಾರವು ಶಾಲೆ??

0
122

ಕರ್ನಾಟಕದ ತುಂಬೆಲ್ಲ ಪ್ರವಾಹ ಮತ್ತು ಮಳೆಯಿಂದ ಶಾಲಾ ಕಾಲೇಜುಗಳಿಗೆ ಸರಣಿ ರಜೆ ನೀಡಲಾಗಿತ್ತು, ಏಕೆಂದರೆ ಮಳೆಯ ಸಂದರ್ಭದಲ್ಲಿ ಶಾಲಾ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ರಜೆ ನೀಡಿತ್ತು ಇದರಿಂದ ಮಕ್ಕಳ ಅಭ್ಯಾಸದಲ್ಲಿ ಹಿಂದೆ ಉಳಿದಿದೆ. ಅದಕ್ಕಾಗಿ ಶಾಲೆಗಳಿಗೆ ರಜೆ ನೀಡಿರುವುದರಿಂದ ಆ ದಿನಗಳ ಪಾಠಗಳನ್ನು ಮುಂದಿನ ರಜಾ ದಿನಗಳಲ್ಲಿ ಮತ್ತು ಶನಿವಾರ ಪೂರ್ತಿ ದಿನ ತರಗತಿಗಳನ್ನು ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಏಪ್ರಿಲ್ ನಲ್ಲಿ ನಿಗದಿಪಡಿಸಿದಂತೆ ತರಗತಿಗಳು ಮುಂದುವರಿಯಲಿವೆ ಎಂದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Also read: ನೆರೆ ಸಂತ್ರಸ್ತರಿಗೆ ಬೇಕಾಬಿಟ್ಟಿ ಹಣ ಕೊಡಲು ನೋಟ್​ ಪ್ರಿಂಟ್​ ಮಾಡಲ್ಲ ಎಂದ ಯಡಿಯೂರಪ್ಪ; ಹಾಗಾದ್ರೆ ಸಂತ್ರಸ್ತರಿಗೆ ಪರಿಹಾರ ಸಿಗುವುದು ನಿಜವಾ??

ದಸರಾ ರಜೆ ಕಡಿತ?

ಅಷ್ಟೇ ಅಲ್ಲದೆ ದಸರಾ ರಜೆ ಕಡಿತಗೊಳಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದ್ದು ಪ್ರವಾಹ ಪೀಡಿತ ಪ್ರದೇಶಗಳಲ್ಲಿರುವ ಮಕ್ಕಳು ಯಾವುದೇ ಕಾರಣದಿಂದಲೂ ಪಾಠದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ ಹೇಳಿದೆ. ಸದ್ಯ ಒಂದು ವಾರದಿಂದ ಶಾಲೆಗಳಿಗೆ ರಜೆ ನೀಡಲಾಗಿದೆ. ಇನ್ನೂ ನಿಖರವಾಗಿ ಯಾವಾಗ ಶಾಲೆಗಳು ಪುನಾರಂಭಗೊಳ್ಳಲಿವೆ ಎಂಬುದು ಖಾತ್ರಿಯಾಗಿಲ್ಲ. ಹೀಗಾಗಿ, ಶಾಲೆಗಳು ಆರಂಭವಾದ ನಂತರ ಪ್ರತಿ ಸರ್ಕಾರಿ ರಜೆಯನ್ನು ರದ್ದುಗೊಳಿಸಿ ಶಾಲೆಗಳನ್ನು ನಡೆಸಲಾಗುತ್ತದೆ.

ಸಂತ್ರಸ್ತ ಮಕ್ಕಳಿಗೆ ಎಲ್ಲಾ ಶಾಲೆಗಳಲ್ಲಿ ಪ್ರವೇಶ

Also read: ಕರ್ನಾಟಕದ ಪ್ರವಾಹಕ್ಕೆ ಮಿಡಿಯದ ಮೋದಿ ಸರ್ಕಾರ? ರಾಜ್ಯದ ತುಂಬೆಲ್ಲ ಸರ್ಕಾರ ವಿರುದ್ಧ ಜನರ ಆಕ್ರೋಶ..

ಇಲಾಖೆ ವಾರ್ಷಿಕ ವೇಳಾಪಟ್ಟಿಪ್ರಕಾರ ಸೆಪ್ಟೆಂಬರ್‌ 5ರಿಂದ 20ರ ವರೆಗೆ ದಸರಾ ರಜೆ ನೀಡಲಾಗಿದೆ. ಅಗತ್ಯವೆನಿಸಿದರೆ ರಜೆಯನ್ನು ಬಳಸಿಕೊಳ್ಳಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜೆ. ಜಗದೀಶ್‌ ಸ್ಪಷ್ಟಪಡಿಸಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿರುವ ಮಕ್ಕಳು ಯಾವುದೇ ಕಾರಣದಿಂದಲೂ ಪಾಠದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು. ಸದ್ಯ ರಾಜ್ಯದ ಯಾವುದೇ ಶಾಲೆಗಳಲ್ಲಿಯೂ ಪ್ರವೇಶ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಕೆ ಜಿ ಜಗದೀಶ್, ಪ್ರವಾಹ, ವಿಪತ್ತಿನ ಸಂದರ್ಭದಲ್ಲಿ ಶಾಲೆ ನಡೆಸುವ ಬಗ್ಗೆ ತೀರ್ಮಾನ ಪ್ರಮುಖ ವಿಷಯವಾಗುವುದಿಲ್ಲ. ಪ್ರವಾಹ ಹಿನ್ನಲೆಯಲ್ಲಿ ಮಾಡಲಾಗದ ತರಗತಿಗಳಿಗೆ ಪರಿಹಾರವಾಗಿ ಮುಂದಿನ ದಿನಗಳಲ್ಲಿ ಯಾವಾಗ ತರಗತಿ ನಡೆಸಬಹುದು ಎಂದು ತೀರ್ಮಾನ ಮಾಡಲು ವಲಯ ಶಿಕ್ಷಣಾಧಿಕಾರಿಗಳು ಮತ್ತು ಶಾಲಾ ಮುಖ್ಯೋಪಾಧ್ಯಾಯರುಗಳ ವಿವೇಚನೆಗೆ ಬಿಡಲಾಗಿದೆ. ಜಿಲ್ಲಾಡಳಿತದೊಂದಿಗೆ ಸಹಕರಿಸಿ ಕೆಲಸ ಮಾಡುವಂತೆ ಸೂಚಿಸಲಾಗಿದೆ ಎಂದರು.

ಶಾಲಾ ಕಟ್ಟಡಗಳ ತಪಾಸಣೆ;

Also read: ಪ್ರವಾಹ ಸಂತ್ರಸ್ತರು ಯಾವುದೇ ದಾಖಲೆಗಳಿಲ್ಲದೆ ಜೀವ ವಿಮೆ, ವಾಹನ ವಿಮೆ ಮತ್ತು ಗೃಹ ವಿಮೆಯ ಕ್ಲೇಮ್ ಮಾಡಿಕೊಳ್ಳಬಹುದು ಹೇಗೆ ಅಂತ ಇಲ್ಲಿದೆ ನೋಡಿ..

ತರಗತಿಗಳ ಸುರಕ್ಷತೆಗೆ ಆದ್ಯತೆ: ಪ್ರವಾಹ ಬಂದ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಶಾಲಾ ಕಟ್ಟಡಗಳು ಸುರಕ್ಷಿತವಾಗಿವೆಯೇ, ಅಲ್ಲಿ ತರಗತಿಗಳನ್ನು ನಡೆಸಬಹುದೇ ಎಂಬ ಬಗ್ಗೆ ಶಿಕ್ಷಣ ಇಲಾಖೆ ಗಮನಹರಿಸುತ್ತಿದೆ. ಇದಕ್ಕಾಗಿ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಗಳನ್ನು ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರ್ ಗಳಿಗೆ ಕೂಡ ತಪಾಸಣೆ ನಡೆಸುವಂತೆ ಹೇಳಲಾಗಿದೆ. ಮಳೆ ನೀರಿನಲ್ಲಿ ಮಕ್ಕಳು ಪುಸ್ತಕಗಳು ಮತ್ತು ಇನ್ನಿತರ ಅಧ್ಯಯನ ಸಾಮಗ್ರಿಗಳನ್ನು ಕಳೆದುಕೊಂಡಿದ್ದರೆ ಇದೇ 16ರೊಳಗೆ ವರದಿ ಸಲ್ಲಿಸುವಂತೆ ಶಿಕ್ಷಣ ಇಲಾಖೆ ಆಡಳಿತ ಇಲಾಖೆ ಉಪ ನಿರ್ದೇಶಕರಿಗೆ ಸೂಚನೆ ನೀಡಿದೆ. ಅದಕ್ಕಾಗಿ ಪಾಲಕರು ಶಿಕ್ಷಣ ಇಲಾಖೆಯ ನಿರ್ಧಾರಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದೆ.