ಸಿಗರೇಟ್-ಗೆ ಒಳ್ಳೆ ಪರ್ಯಾಯ ಎಂದು ಹೇಳುತ್ತಿರುವ `ಈ’ ಸಿಗರೇಟ್-ನಿಂದ ಸಾವು ಇನ್ನೂ ಬೇಗ ಬರುತ್ತಾ??

0
1040

ತಂಬಾಕು, ಮಧ್ಯಪಾನ ಹೆಚ್ಚಿನ ಪ್ರಮಾಣದಲ್ಲಿ ಯುವಕರನ್ನು ಸೆಳೆಯುತ್ತಿದ್ದು ಇದು ಯುವಜನತೆಯ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಆದರೆ, ಇತ್ತೀಚೆಗೆ ಯುವ ಪೀಳಿಗೆ ‘ಇ-ಸಿಗರೇಟ್’ಗೆ ದಾಸರಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಾಂಪ್ರದಾಯಿಕ ತಂಬಾಕು ಸೇವನೆಗಿಂತ ಇ-ಸಿಗರೇಟು ಸೇವನೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಇ-ಸಿಗರೇಟ್ ಮೂಲಕ ತಂಬಾಕು ಮಾರುಕಟ್ಟೆಯನ್ನು ಹೆಚ್ಚಿಸಲಾಗುತ್ತಿದೆ ವಿನಃ ಕಡಿಮೆ ಮಾಡುತ್ತಿಲ್ಲ ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವರದಿಯಲ್ಲಿ ಉಲ್ಲೇಖಿಸಿದೆ.

ಇ-ಸಿಗರೇಟ್ ಸೇವನೆ ಮಾಡುವ ಹೆಚ್ಚಿನ ಜನ ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿದ್ದಾರೆ. ಇ-ಸಿಗರೇಟ್ ಸೇವನೆ ಕ್ಯಾನ್ಸರ್‍ಗೆ ಮಾರಕವಾಗಿದೆಎನ್ನುತ್ತಾರೆ ವೈದ್ಯರು. ಏನಿದು ಇ-ಸಿಗರೇಟ್ ?ಸಾಮಾನ್ಯ ಸಿಗರೇಟ್ ಸೇವನೆ ತ್ಯಜಿಸಲು ಆರಂಭವಾಗಿದ್ದೇ ಇ-ಸಿಗರೇಟ್. ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವರಿ ಸಿಸ್ಟಮ್(ಇ-ಸಿಗರೇಟ್)ಬ್ಯಾಟರಿ ಚಾಲಿತವಾಗಿಯೂ ಉಪಯೋಗಿಸಬಹುದು. ಇದರಲ್ಲಿ ನಿಕೋಟಿನ್ ನಂತಹ ಅನೇಕ ರಾಸಾಯನಿಕಗಳು ಇರುತ್ತವೆ. ಐನ್ನೂರು ರೂ.ಗಳಿಂದ ಹಿಡಿದು 30 ಸಾವಿರ ರೂ. ಮೌಲ್ಯದ ‘ಇ-ಸಿಗರೇಟ್’ಗಳು ಅಂತರ್ಜಾಲ ದಲ್ಲಿ ಲಭ್ಯವಿದೆ.

ಇ-ಸಿಗರೇಟ್‍ಗಳು ಸಾಮಾನ್ಯ ಸಿಗರೇಟ್ ಗಿಂತ 36 ಪಟ್ಟು ಹಾನಿಕಾರಕವಾಗಿದೆ. ಇದು ಪ್ಲಾಸ್ಟಿಕ್ ಲೋಹದ ಡಿವೈಜ್‍ಗಳಾಗಿದ್ದು, ಇವು ಸಿಗರೇಟನ್ನೇ ಹೋಲುವ ಆಕಾರಗಳಾಗಿದೆ. ಗಾಂಜಾ, ಹಶಿಶ್, ಲಿಸರ್ಜಿಕ್ ದ್ರವ, ಮತ್ತು ಡೈಥಲಮೈಡ್ ನಂತಹ ಮಾದಕ ಪದಾರ್ಥಗಳು ಇ-ಸಿಗರೇಟ್ ಗಳಲ್ಲಿದ್ದು ಇದನ್ನು ಸೇವಿಸುವ ಯುವಕರು ಹೆಚ್ಚು ಉದ್ರೇಕಕ್ಕೆ ಒಳಾಗುಗುತ್ತಾರೆ. ಆನ್ ಲೈನ್‍ಗಳಲ್ಲಿ ಎಗ್ಗಿಲ್ಲದೆ ಮಾರಾಟಇ-ಸಿಗರೇಟ್ ಸೇವನೆ ಮಾಡುವಾಗ ಹೊಗೆ ಬಂದರೂ ಸಹ ಭಸ್ಮ ಬರುವುದಿಲ್ಲ. ಈ ಕಾರಣಕ್ಕಾಗಿ ಕಾಲೇಜು ವಿದ್ಯಾರ್ಥಿಗಳು ಇ-ಸಿಗರೇಟ್ ಸೇವನೆಗೆ ಹೆಚ್ಚು ಒಲವು ತೋರುತ್ತಾರೆ. ಬೆಂಗಳೂರು, ಮೈಸೂರು, ಉಡುಪಿಯಲ್ಲಿ ಹೆಚ್ಚಾಗಿ ಇ-ಸಿಗರೇಟ್ ಬಳಸಲಾಗುತ್ತಿದೆ ಎಂಬುದು ವೈದ್ಯಕೀಯ ವರದಿಯಿಂದ ತಿಳಿದು ಬಂದಿದೆ. ಈಗಾಗಲೇ ವಿದೇಶಗಳಲ್ಲಿ ಇ-ಸಿಗರೇಟ್ ಸೇವನೆಯ ದುಷ್ಪರಿಣಾಮಗಳು ಬೆಳಕಿಗೆ ಬರುತ್ತಿದ್ದು, ಭಾರತ ಮತ್ತು ಕರ್ನಾಟಕಕ್ಕೂ ಇದರ ಜಾಲ ವಿಸ್ತರಿಸುತ್ತಿರುವುದು ವಿಷಾದಕರ.

ಫ್ಲಿಪ್‍ಕಾರ್ಟ್, ಅಮೆಜಾನ್, ಇ-ಬೈ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಆನ್‍ಲೈನ್ ಕಂಪನಿಗಳು ಇ-ಸಿಗರೇಟನ್ನು ಎಗ್ಗಿಲ್ಲದೆ ಮಾರಾಟ ಮಾಡುತ್ತಿವೆ. ಆನ್ ಲೈನ್ ಮೂಲಕ ಯುವಕರ ಕೈಗೆ ಸುಲಭವಾಗಿ ಸಿಗುತ್ತವೆ. ರಾಜ್ಯ ಸರ್ಕಾರದ ಆದೇಶದ ಬಗ್ಗೆ ಕೆಲ ಆನ್‍ಲೈನ್ ಕಂಪನಿಗಳಿಗೆ ಮಾಹಿತಿ ಇಲ್ಲದಿರುವ ಕಾರಣ ಆರೋಗ್ಯ ಇಲಾಖೆಯು ಅವರನ್ನು ಸಂಪರ್ಕಿಸಿ ಇ-ಸಿಗರೇಟಿನ ನಿಷೇಧದ ಬಗ್ಗೆ ತಿಳಿಹೇಳಬೇಕಾದ ಪರಿಸ್ಥಿತಿ ಎದುರಾಗಿದೆ.