ಕಪ್ಪುಹಣದ ಮಾಹಿತಿ ನೀಡಲು ಹೊಸ ಇ ಮೇಲ್ ವಿಳಾಸ

0
972

 

ನವದೆಹಲಿ: ನೋಟು ರದ್ದತಿ ಬಳಿಕ ಕಾಳಧನಿಕರ ಭೇಟೆಗೆ ಹತ್ತು ಹಲವು ಕ್ರಮ ಕೈಗೊಂಡಿರುವ ಸರ್ಕಾರ ಕಪ್ಪುಹಣದ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಹೊಸ ಇ ಮೇಲ್ ವಿಳಾಸ blackmoneyinfo@incometax.gov.in ತೆರೆದಿದೆ.

ಕಾಳಧನ ಹೊಂದಿರುವವರ ಮಾಹಿತಿಯನ್ನು ಸರ್ಕಾರಕ್ಕೆ ನೀಡುವುದು ಇನ್ಮುಂದೆ ಸುಲಭ! ನಿಮ್ಮ ಸುತ್ತಮುತ್ತ ಯಾರಾದರೂ ಕಪ್ಪುಹಣ ಹೊಂದಿದ್ದಾರೆನ್ನುವ ಮಾಹಿತಿ ಸಿಕ್ಕರೆ ಒಂದು ಮೇಲ್ ಮಾಡಿದರೆ ಸಾಕು ತೆರಿಗೆ ಅಧಿಕಾರಿಗಳನ್ನು ತಲುಪಿ ಬಿಡುತ್ತದೆ. ಇದಕ್ಕಾಗಿಯೇ ಸರ್ಕಾರ ಈ ಮೇಲ್ ಐಡಿಯನ್ನು ಕ್ರಿಯೇಟ್ ಮಾಡಿದ್ದು ನೀವಿದಕ್ಕೆ ಮಾಹಿತಿಯನ್ನು ಕಳುಹಿಸಬಹುದು.

ತೆರಿಗೆ ಅಧಿಕಾರಿಗಳಿಗೆ ಕಾಳಧನಿಕರ ಬಗ್ಗೆ ಮಾಹಿತಿ ನೀಡುವುದಕ್ಕಾಗಿ ಸಾರ್ವಜನಿಕರಿಗಾಗಿ ನೂತನ ಮೇಲ್ ಐಡಿಯನ್ನು ಮಾಡಲಾಗಿದೆ ಎಂದು ಆದಾಯ ಇಲಾಖೆ ಕಾರ್ಯದರ್ಶಿ ಹಸ್ಮುಖ್ ಅದಿಯಾ ಹೇಳಿದ್ದಾರೆ.

blackmoneyinfo@incometax.gov.in ಈ ವಿಳಾಸಕ್ಕೆ ಮೇಲ್ ಮಾಡಿದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನಾ ಅಡಿಯಲ್ಲಿ ಇದನ್ನು ಘೋಷಿಸಲಾಗಿದೆ.

ಕಪ್ಪು ಹಣ ಹೊಂದಿದವರ ಬಗ್ಗೆ ಸಾರ್ವಜನಿಕರು ಮೇಲ್ ವಿಳಾಸಕ್ಕೆ ಮಾಹಿತಿ ನೀಡಬಹುದು ಎಂದು ಕಂದಾಯ ಕಾರ್ಯದರ್ಶಿ ಹಸ್ಮುಖ್ ಆಧ್ಯ ಅವರು ಹೇಳಿದ್ದಾರೆ.

ಸಾರ್ವಜನಿಕರು ಸರ್ಕಾರ ತೆರೆದಿರುವ ಹೊಸ ಇ ಮೇಲ್ ವಿಳಾಸ: blackmoneyinfo@incometax.gov.inಗೆ ಕಾಳಧನಿಕರ ಬಗ್ಗೆ ಮಾಹಿತಿ ನೀಡಬಹುದು. ಮಾಹಿತಿ ನೀಡಿದವರ ಹೆಸರು ಹಾಗೂ ಮಾಹಿತಿಯನ್ನು ಬಹಿರಂಗ ಪಡಿಸದೆ ಗೌಪ್ಯವಾಗಿ ಇರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.