ಕಿವಿಯೊಳಗೆ ಕೀಟಗಳು ಹೋದರೆ ಪ್ರಾಣಕ್ಕೆ ಕುತ್ತು ಬರಬಹುದು, ಇದರಿಂದ ಪಾರಾಗಲು ಇಲ್ಲಿವೆ ನೋಡಿ ಸುಲಭೋಪಾಯಗಳು!!

0
3984

ಕೆಲವು ದಿನಗಳ ಹಿಂದೆ ಬೆಂಗಳೂರಿನ ಮಹಿಳೆಯ ಕಿವಿಯೊಳಗಿಂದ ಜೇಡವೊಂದು ನಿಧಾನವಾಗಿ ಹೊರ ಬರುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಹರಿದಾಡುತ್ತಿತ್ತು. ಇದು ಎಲ್ಲರಿಗೂ ಇದು ಗೊತ್ತುರುವ ವಿಷಯ. ಅದೆಷ್ಟೋ ಜನ ಈ ವಿಡಿಯೋ ನೋಡಿ ಹಾಗೆ ಅಯ್ಯೋ ಎಂತ ವಿಚಿತ್ರ ಅಂತ ಅಂದುಕೊಂಡು ಸುಮ್ಮನಾದವರು ಉಂಟು. ಆದರೆ ಯಷ್ಟೋ ಜನ ಇಂತಹ ಪರಿಸ್ಥಿತಿಗೆ ಸಿಲುಕುವುದ ಸಹಜ. ಹಾಗಾದರೆ ಬನ್ನಿ ಕಿವಿಗೆ ಕೀಟ ಹೊಕ್ಕಿದಾಗ ಮೊದಲಿಗೆ ಏನು ಮಾಡಬೇಕೆಂದು ನಾವು ಹೇಳುತ್ತೇವೆ.

ಮೊದಲಿಗೆ, ಕೆಲವೊಮ್ಮೆ ಕೀಟ ಹೊಕ್ಕಿದಾಗ ತುರಿಕೆ ತಾಳಲಾರದೇ ಕಡ್ಡಿಯನ್ನು ಕಿವಿಯೊಳಗೆ ಹಾಕುತ್ತೇವೆ. ಇದು ತಪ್ಪು ಹೀಗೆ ಕಿವಿಯೊಳಗೆ ಹೀಗೆ ಕಡ್ಡಿ, ಬೆಂಕಿಕಡ್ಡಿ, ಹೇರ್‌ ಪಿನ್‌ ಮೊದಲಾದ ಯಾವುದನ್ನೂ ಕಿವಿಯೊಳಗೆ ಹಾಕಬಾರದು. ಏಕೆಂದರೆ ಕಿವಿಯೊಳಗಿರುವ ಕೀಟಕ್ಕೆ ಈ ಕಡ್ಡಿ ಚುಚ್ಚಿದರೆ ಅದು ತನ್ನ ಪ್ರಾಣ ಉಳಿಸಿಕೊಳ್ಳಲು ಕೈಕಾಲುಗಳನ್ನು ಆಡಿಸಿ ಕಿವಿಯ ಸೂಕ್ಷ್ಮ ಅಂಗಗಳ ಮೇಲೆ ಒತ್ತಬಹುದು ಅಥವಾ ಕಚ್ಚಬಹುದು. ಇದರಿಂದ ಕಿವಿಯ ಹಲವು ಸಮಸ್ಸೆಗಳು ಉಂಟಾಗಬಹುದು. ಹಾಗಾಗಿ ಕೀಟ ಹೊಕ್ಕಿರುವ ಕಿವಿಯೊಳಗೆ ಏನನ್ನೂ ತೂರಿಸಬಾರದು.

ಕೆಲವೊಮ್ಮೆ ಕೀಟದ ಮೀಸೆಯ ತುದಿ ಕಿವಿಯ ಹೊರಗೆ ಇಣುಕುತ್ತಿರುವಂತೆ ಕಾಣುತ್ತದೆ. ಇದನ್ನು ತೆಗೆಯಲು ಪ್ರಯತ್ನಿಸಿದಾಗ ಕೀಟ ಒಳಗಿನ ಭಾಗಗಳಿಗೆ ಕಚ್ಚಬಹುದು. ಆದ್ದರಿಂದ ಈ ಬಗ್ಗೆ ಕೂಡ ಜಾಗ್ರತೆ ವಹಿಸಬೇಕು.

ಕಿವಿಯೊಳಗೆ ಕೀಟ ಹೊಕ್ಕಿದ ಅಂತ ಗೊತ್ತಾದ ತಕ್ಷಣ ಹತ್ತಿ ಇಂದ ಆಲ್ಕೋಹಾಲ್‌ನಲ್ಲಿ ಮುಳುಗಿಸಿ ಕಿವಿಯೊಳಗೆ ಎರಡು ಹನಿ ಹಾಕಬೇಕು. ಆಲ್ಕೋಹಾಲ್‌ ಕಿವಿಯೊಳಗೆ ಹೋಗುತ್ತಿದ್ದಂತೆಯೇ ಕೀಟ ಅಲ್ಲಿಂದ ಹೊರಬರುತ್ತದೆ. ಕೆಲವೊಮ್ಮೆ ಆಲ್ಕೋಹಾಲ್‌ ಇಲ್ಲವಾದಲ್ಲಿ ಕೆಲವು ತೊಟ್ಟು ಆಲಿವ್‌ ಎಣ್ಣೆಯನ್ನು ಕಿವಿಯೊಳಗೆ ಎರಡು ಹನಿ ಬೀಳುವಂತೆ ಹಾಕಬೇಕು. ಈ ಎಣ್ಣೆಯನ್ನು ಕೊಂಚ ಬಿಸಿ ಮಾಡಿ ಬಿಡಬೇಕು. ಎಣ್ಣೆಯಿಂದ ಕಿವಿಯ ತೂತು ಮುಚ್ಚಿದರೆ ಕೀಟಕ್ಕೆ ಉಸಿರಾಡಲು ಸಾಧ್ಯವಾಗದೇ ಎಣ್ಣೆಯೊಂದಿಗೇ ಹೊರಬರುತ್ತದೆ.

ಗಮನಿಸಿ: ಒಂದು ವೇಳೆ ಕಿವಿಯಲ್ಲಿ ನೋವು, ಸೋಂಕು, ಕಿವಿ ಸೋರುವುದು ಅಥವಾ ಇತರ ಯಾವುದಾದರೂ ತೊಂದರೆ ಇದ್ದರೆ ಕಿವಿಗೆ ಎಣ್ಣೆ ಹಾಕಬಾರದು. ತಕ್ಷಣ ವೈದ್ಯರನ್ನು ಭೇಟಿ ಮಾಡಿ…