ಭಾರತದಲ್ಲಿ ಭಾರಿ ಭೂಕಂಪನ ಸಂಭವಿಸಲಿದ್ಯ? ನಿಜವಾಗುತ್ತಾ ತಜ್ಞರ ಊಹೆ?

0
931

ಭಾರತದಲ್ಲಿ ಮತ್ತೆ ಭೂಕಂಪ ಸಂಭವಿಸಲಿದೆ ಎಂದು ಭೂಕಂಪಶಾಸ್ತ್ರ ತಜ್ಞರು ಎಚ್ಚರಿಸಿದ್ದಾರೆ. ಪ್ರತಿಬಾರಿಯೂ ಭೂಕಂಪ ಸಂಭವಿಸಿದಾಗ ಅಪಾರ ಸಾವು ನೋವು ಸಂಭವಿಸುತ್ತದೆ. ಈ ಬಾರಿಯ ಸಂಭವಿಸಲಿರುವ ಭೂಕಂಪ ಇನ್ನು ಹೆಚ್ಚು ಹಾನಿ ಮಾಡಲಿದೆಯಂತೆ ಯಾಕೆ ಹಾಗೆ ಅಂತೀರಾ ಮುಂದೆ ಓದಿ.

ಸಾಮನ್ಯವಾಗಿ ಸಿಎಸ್ಮೋ ಸ್ಕೇಲ್-ನಿಂದ ಭೂಕಂಪವನ್ನು ಅಳೆಯಲಾಗುತ್ತದೆ, ಮ್ಯಗ್ನಿಟ್ಯೂಡ್ 5 , 6 , 7 ಹೇಗೆ ಇವನ್ನು ವಿಂಗಡಿಸಲಾಗುತ್ತದೆ. ಸಿಎಸ್ಮೋ ಸ್ಕೇಲ್ ಪ್ರಕಾರ ಭೂಕಂಪ ಯಾವಾಗಲು 7 ಕ್ಕಿಂತ ಕಡಿಮೆ ಇರುತ್ತದೆ. ಮ್ಯಗ್ನಿಟ್ಯೂಡ್ 6 ರ ಭೂಕಂಪ ಮ್ಯಗ್ನಿಟ್ಯೂಡ್ 5 ಕ್ಕಿಂತ 30 ಪಟ್ಟು ಹೆಚ್ಚು ಶಕ್ತಿಶಾಲಿಯಾಗಿರುತ್ತದೆ ಮತ್ತು ಮ್ಯಗ್ನಿಟ್ಯೂಡ್ 7 ರ ಭೂಕಂಪ, ಮ್ಯಗ್ನಿಟ್ಯೂಡ್ 5 ಕ್ಕಿಂತ 900 ಪಟ್ಟು ಹೆಚ್ಚು ಶಕ್ತಿಶಾಲಿಯಾಗಿರುತ್ತದೆ ಹಾಗು ಮ್ಯಗ್ನಿಟ್ಯೂಡ್ 8.6 ರ ಭೂಕಂಪ 2 ನೇ ವಿಶ್ವಯುದ್ಧದಲ್ಲಿ ಬಳಸಿದ 10000 ಅಣು ಬಾಂಬ್-ನಷ್ಟು ಶಕ್ತಿಶಾಲಿಯಾಗಿರುತ್ತದೆಯೆಂತೆ. ಈಗ ಭೂಕಂಪಶಾಸ್ತ್ರ ತಜ್ಞರು ಹೇಳಿಕೆಯ ಪ್ರಕಾರ ಮ್ಯಗ್ನಿಟ್ಯೂಡ್ 8 ರ ಭೂಕಂಪ ಭಾರತದ್ದಲಾಗುವುದಂತೆ ಈ ರೀತಿಯ ಭೂಕಂಪ ಹಿಂದೆಂದೂ ಭಾರತದಲ್ಲಿ ನಡೆದಿಲ್ಲವಂತೆ.

 

ಸಾಮನ್ಯವಾಗಿ ಆಣೆಕಟ್ಟು ಮತ್ತು ಇದೆ ತರಹದ ಭೂಮಿಯ ಮೇಲೆ ಒತ್ತಡ ವಿರುವ ಮತ್ತು ಸ್ಥಳಗಳಲ್ಲಿ ಹಾಗು ಪ್ರಾಕೃತಿಕವಾಗಿ ಭೂಕಂಪದ ಸಕ್ರಿಯ ವಲಯಗಳು ಎಂದು ಗುರುತಿಸಲಾಗಿದೆ ಅಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಭಾರತದಲ್ಲಿ ಇದಕ್ಕೂ ಮೊದಲು ಜನವರಿ 26, 2001 ಗುಜುರಾತ್ನಲ್ಲಿ ನಡೆದ ಭೂಕಂಪ ಸಾವಿರಾರು ಜನರನ್ನು ಬಲಿತೆಗೆದುಕೊಂಡಿತ್ತು. ಡಿಸೆಂಬರ್ 26, 2004 ರಲ್ಲಿ ನಡೆದ ಭೂಕಂಪ ಹಾಗು ಸುನಾಮಿನಿಂದ 15000 ಜನ ಸಾವನ್ನಪಿದ್ದರು. ಜಗತ್ತಿನಲ್ಲಿ ಭಾರತ ಮಾತ್ರವಲ್ಲದೆ ಜಪಾನ್, ಮೆಕ್ಸಿಕೋ, ಟರ್ಕಿ, ಈಕ್ವೆಡಾರ್, ಪಾಕಿಸ್ತಾನ, ಚೀನಾ, ಫಿಲಿಪಿಯನ್ಸ್, ಎಲ್-ಸಾಲ್ವಡಾರ್, ಇಂಡೋನೇಷ್ಯಾ ದೇಶಗಳಲ್ಲಿ ಹೆಚ್ಚಾಗಿ ಭೂಕಂಪ ಸಂಭವಿಸುತ್ತದೆ.

 

ಸರ್ಕಾರ ಈ ನಿಟ್ಟಿನಲ್ಲಿ ಕೂಡಲೆ ಯೋಚಿಸಿ ಭೂಕಂಪ ಸಂಭಾವ್ಯ ಹೆಚ್ಚಿರುವ ಸ್ಥಳಗಳನ್ನು ಗುರುತಿಸಿ ಅಲ್ಲಿಂದ ಜನರನ್ನು ಬೇರೆ ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಿ, ಭವಿಷ್ಯದಲ್ಲಿ ಭೂಕಂಪ ಸಂಭವಿಸಿದರು ಯಾವುದೇ ಹಾನಿಯಾಗದಿರುವಂತ ಹಾಗು ವಿಶ್ವದೆಲ್ಲೆಡೆ ಮಂಚೂಣಿಯಲ್ಲಿರುವಂತ “ಭೂಕಂಪ ನಿರೋಧಕ ಕಟ್ಟಡ” ಗಳನ್ನು ನಿರ್ಮಿಸುವತ್ತ ಗಮನಹರಿಸಿದರೆ, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಂಡಂತಾಗುತ್ತದೆ.


ಒಟ್ಟಿನಲ್ಲಿ ವಿಕೋಪ ಸಂಭವಿಸಿದ ಮೇಲೆ ಪರಿಹಾರ ಕಾರ್ಯ ಮಾಡುವ ಬದಲಾಗಿ, ಈಗಲೇ ಎಚ್ಚರ ವಹಿಸುವುದು ಒಳ್ಳೆಯದು ಎಂಬುದೇ ನಮ್ಮ ಆಶಯ…!