ಮಸಾಲಾ, ಸೆಟ್, ಈರುಳ್ಳಿ ದೋಸೆ ಸಾಮಾನ್ಯವಾಗಿ ನೀವು ತಿಂದಿರುತ್ತೀರಿ…ಆದರೆ ಮೆಂತ್ಯೆ ಸೊಪ್ಪಿನ ದೋಸೆ ರುಚಿನೇ ಬೇರೆ…!!

0
910

ಮೆಂತ್ಯೆ ಇದರಲ್ಲಿನ ಪೋಷಕಾಂಶ, ವಿಟಮಿನ್ ಸಿ, ಪೊಟಾಶಿಯಂ, ಲೈಸಿನ್ ಇನ್ನಿತರ ಅಂಶಗಳು ಇದರ ಗುಣಕ್ಕೆ ಸಾಕ್ಷಿ. ಇದರಿಂದಾಗುವ ಉಪಯೋಗ ತಿಳಿಯಲು ಹೋದರೆ ಅಕ್ಷಯ ಪಾತ್ರೆ.ಇದನ್ನು ದಿನನಿತ್ಯ ಬಳಸಿದರೆ ಉತ್ತಮ ಆರೋಗ್ಯ ಗ್ಯಾರಂಟಿ. ಅದರಲ್ಲೂ ಮೆಂತ್ಯ ಸೊಪ್ಪಿನ ದೋಸೆ ತಯಾರಿಸಿ ಹಬೆಯಲ್ಲಿ ಬೇಯಿಸಿದ ಮೆಂತ್ಯದ ಸೊಪ್ಪಿನ ಪಲ್ಯದೊ೦ದಿಗೆ ತಿನ್ನುವುದರಿ೦ದ ಅ೦ಗಾ೦ಗಗಳ ನೋವು ನಿವಾರಣೆಯಾಗುವುದು.

Also read: ತಿನ್ನಲು ತುಂಬಾ ರುಚಿಕರವಾದ ಹಾಗೂ ಸುಲಭವಾಗಿ ಮಾಡಬಹುದಾದ ಟೊಮೆಟೊ ದೋಸೆ ಮಾಡುವ ವಿಧಾನ..!!

ಬೇಕಾಗುವ ಸಾಮಗ್ರಿಗಳು:

  • ಮೆಂತ್ಯ ಸೊಪ್ಪು,
  • ದೋಸೆ ಅಕ್ಕಿ-1 ಕಪ್,
  • ಉದ್ದಿನ ಬೇಳೆ-ಕಾಲು ಕಪ್,
  • ಉಪ್ಪು-ಚಿಟಿಕೆ,
  • ಸಕ್ಕರೆ-1 ಚಮಚ,
  • ಎಣ್ಣೆ-ದೋಸೆ ಹುಯ್ಯಲು

ಮಾಡುವ ವಿಧಾನ:

ಮೊದಲು ಅಕ್ಕಿ ಮತ್ತು ಉದ್ದನ್ನು ಬೇರೆ ಬೇರೆಯಾಗಿ ನೆನೆಹಾಕಿಕೊಳ್ಳಿ. 5 ಗಂಟೆಗಳ ನಂತರ ನೆನೆಹಾಕಿದ ಅಕ್ಕಿ ಮತ್ತು ಉದ್ದು ಸೇರಿಸಿ ಅದಕ್ಕೆ ಸಣ್ಣಗೆ ಹೆಚ್ಚಿದ ಮೆಂತ್ಯ ಸೊಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಇದನ್ನು ಒಂದು ರಾತ್ರಿ ಹಾಗೆಯೇ ಬಿಡಿ.

ಮರುದಿನ ಬೆಳಿಗ್ಗೆ ಚೆನ್ನಾಗಿ ಹುದುಗು ಬಂದಿರುತ್ತದೆ. ಹುದುಗು ಬಂದ ದೋಸೆ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸಕ್ಕರೆ ಸೇರಿಸಿ ತವಾ ಬಿಸಿ ಮಾಡಿ ದೋಸೆ ಹುಯ್ಯಿರಿ.

ದೋಸೆ ಬೆಂದ ತಕ್ಷಣ ಎರಡೂ ಕಡೆ ಮಗುಚಿ ಗರಿ ಗರಿಯಾಗಿ ತೆಗೆದರೆ ಮೆಂತ್ಯೆ ಸೊಪ್ಪಿನ ದೋಸೆ ಸವಿಯಲು ಸಿದ್ಧ.

ಈ ದೋಸೆಯನ್ನು ತೆಂಗಿನ ಕಾಯಿ ಚಟ್ನಿಯೊಂದಿಗೆ ಸವಿದರೆ ರುಚಿ ಇಮ್ಮಡಿಸುತ್ತದೆ. ಇದರ ಬಣ್ಣ ಹಸಿರಾಗಿರುವುದರಿಂದ ಮಕ್ಕಳಿಗೂ ಬಹಳ ಇಷ್ಟ.