ಸಂಜೆ ಸ್ನ್ಯಾಕ್ಸ್‌ಗೆ ಆಲೂ ಕಟ್ಲೇಟ್‌. ಬಲು ಸುಲಭದ ಸ್ನ್ಯಾಕ್ ರೆಸಿಪಿ..ಇಂದೇ ಟ್ರೈ ಮಾಡಿ ಸವಿಯಿರಿ…!!

0
1675

ಬೇಕಾಗುವ ಸಾಮಾಗ್ರಿಗಳು

3 ಬೇಯಿಸಿದ ಆಲೂಗಡ್ಡೆ
ರುಚಿಗೆ ತಕ್ಕ ಉಪ್ಪು
ಗರಂ ಮಸಾಲ ಪುಡಿ
ಅರ್ಧ ಚಮಚ ಗರಂ ಮಸಾಲ
ಅರ್ಧ ಚಮಚ ಕೆಂಪು ಮೆಣಸಿನ ಪುಡಿ
ಸ್ವಲ್ಪ ಕೊತ್ತಂಬರಿ ಸೊಪ್ಪು
ಸ್ವಲ್ಪ ನಿಂಬೆ ರಸ
ಸ್ವಲ್ಪ ಬ್ರೆಡ್‌ನ ಚೂರು
ಸ್ವಲ್ಪ ತುರಿದ ಕ್ಯಾರೆಟ್
ಸ್ವಲ್ಪ ಶುಂಠಿ ಪೇಸ್ಟ್
ಚಾಟ್‌ ಮಸಾಲ
2 ಚಮಚ ಮೈದಾ
ಕಾರ್ನ್ ಹಿಟ್ಟು
ಎಣ್ಣೆ

ಮಾಡುವ ವಿಧಾನ:

೧. ಆಲೂಗಡ್ಡೆಯನ್ನು ಮ್ಯಾಶ್ ಮಾಡಿ, ಅದರಲ್ಲಿ ಉಪ್ಪು, ಗರಂ ಮಸಾಲ ಪುಡಿ, ಅರ್ಧ ಚಮಚ ಗರಂ ಮಸಾಲ, ಅರ್ಧ ಚಮಚ ಕೆಂಪು ಮೆಣಸಿನ ಪುಡಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ನಿಂಬೆ ರಸ, ಸ್ವಲ್ಪ ತುರಿದ ಕ್ಯಾರೆಟ್, ಸ್ವಲ್ಪ ಶುಂಠಿ ಪೇಸ್ಟ್, ಚಾಟ್‌ ಮಸಾಲ ಸಾಮಾಗ್ರಿಗಳನ್ನು ಎಲ್ಲ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ.

೨. ಕಲಸಿಟ್ಟ ಹಿಟ್ಟನ್ನು ಕಟ್ಲೇಟ್‌ಗೆ ನಿಮಗೆ ಬೇಕಾದ ಆಕಾರದಲ್ಲಿ ತಟ್ಟಿ.

೩. ಒಂದು ಸಣ್ಣ ಪಾತ್ರೆಯಲ್ಲಿ ಕಾರ್ನ್ ಹಿಟ್ಟು ಮತ್ತು ಮೈದಾ ಮತ್ತು ಸ್ವಲ್ಪ ಕರಿಮೆಣಸಿನ ಪುಡಿಗೆ ಸ್ವಲ್ಪ ನೀರನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ.

೪. ತಟ್ಟಿದ ಕಟ್ಲೇಟ್ ಅನ್ನು ಕಾರ್ನ್ ಹಿಟ್ಟಿನ ಮಿಕ್ಸ್ ನಲ್ಲಿ ಎದ್ದಿ ನಂತರ ಬ್ರೆಡ್‌ನ ಚೂರುಗಳಲ್ಲಿ ಹೊರಳಾಡಿಸಿ. (ಈ ವಿಧಾನವನ್ನು ನಿಮಗೆ ಬೇಕಾದರೆ ಹಾಕಬಹುದು ಇಲ್ಲವಾದಲ್ಲಿ ಹಾಗೆ ಆಲೂ ಕಟ್ಲೇಟ್‌ ಅನ್ನು ಎಣ್ಣೆಗೆ ಹಾಕಿ ಕರೆಯಬಹುದು)

೫. ಕಾಯಿದ ಎಣ್ಣೆಗೆ ಹಾಕಿ ಎರಡು ಕಡೆ ಫ್ರೈ ಮಾಡಿದರೆ ಅವಲಕ್ಕಿ ಕಟ್ಲೇಟ್‌ ರೆಡಿ.