ದಿನಕ್ಕೊಂದು ಬಾಳೆಹಣ್ಣು ಸೇವಿಸುವುದರಿಂದಾಗುವ 10 ಲಾಭಗಳು.

0
2086

Kannada News | Health tips in kannada

ಬಾಳೆ ಇದು ಭಾರತದ ಹಣ್ಣು. ಇದು ಅಸಂಖ್ಯ ಪ್ರಕಾರಗಳಲ್ಲಿ ದೊರೆಯುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್ಸ್, ಕ್ಯಾಲ್ಸಿಯಮ್, ಫಾಸ್ಫರಸ್ ಹಾಗೂ ಇತರ ವಿಟಮಿನ್‍ಗಳು ಇವೆ. (ಇದರಲ್ಲಿರುವ ಕ್ಯಾಲೋರಿ 116). ಇದು ಪೋಷಕ ಆಹಾರವೆಂದೇ ಪ್ರಸಿದ್ಧವಾಗಿದೆ. ಬಾಳೆಯ ಹಣ್ಣನ್ನು ಸೇಬು ಹಣ್ಣಿನೊಂದಿಗೆ ಹೋಲಿಸಿದರೆ, ಇದರಲ್ಲಿ ನಾಲ್ಕು ಪಟ್ಟು ಪ್ರೋಟೀನ್ ಇದೆ, ಎರಡು ಪಟ್ಟು ಕಾರ್ಬೋಹೈಡ್ರೇಟ್ಸ್ ಇವೆ, ಮೂರುಪಟ್ಟು ಫಾಸ್ಫರಸ್ ಇದೆ, ಐದು ಪಟ್ಟು ವಿಟಮಿನ್ ಎ ಹಾಗೂ ಕಬ್ಬಿಣಸತ್ವ ಇವೆ, ಎರಡುಪಟ್ಟು ಇತರ ವಿಟಮಿನ್ ಹಾಗೂ ಮಿನರಲ್ಸ್ ಇವೆ.

ಬಾಳೆ ಹಣ್ಣು ತಿನ್ನೋದ್ರಿಂದ ತೂಕ ಜಾಸ್ತಿಯಾಗುತ್ತೆ ಎಂದು ಅನೇಕರು ನಂಬಿದ್ದಾರೆ. ಆದರೆ ಇದು ತಪ್ಪುಕಲ್ಪನೆ. ಪ್ರತಿದಿನ ಬಾಳೆಹಣ್ಣು ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ.

ಪ್ರತಿದಿನ ಬಾಳೆಹಣ್ಣು ಸೇವಿಸುವುದರಿಂದಾಗುವ 10 ಲಾಭಗಳನ್ನು ತಿಳಿಯೋಣ

  1. ಪಕ್ವ ಬಾಳೆಯ ಹಣ್ಣು ಕರುಳಿನ ಬೇನೆಗೆ ಉತ್ತಮ. ಇದರಲ್ಲಿರುವ ವಿಟಮಿನ್ ಯು’ ಕರುಳಿನ ವ್ರಣಕ್ಕೆ ಉಪಶಮನಕಾರಿಯಾಗಿದೆ.
  2. ಮಲಬದ್ಧತೆ, ಬೇಧಿ, ಸಂಧಿವಾತ, ರಕ್ತಹೀನತೆ, ಮತ್ತು ಕಿಡ್ನಿಯ ತೊಂದರೆಗೆ ಉಪಶಮನಕಾರಿಯಾಗಿದೆ.
  3. ಬೇಯಿಸಿ ಬಾಳೆಹಣ್ಣನ್ನು ಸೇವನೆಯಿಂದ ಟಿ.ಬಿ.ಮುಂತಾದ ಕಾಯಿಲೆಗಳನ್ನು ಗುಣಪಡಿಸಬಹುದು.
  4. ಮೂತ್ರಕೋಶ ಹಾಗೂ ಕಿಡ್ನಿಯ ಕಾರ್ಯಾಚರಣೆಗೆ ಇದರಿಂದ ಉತ್ತೇಜನ ದೊರೆಯುತ್ತದೆ.
  5. ಕೆನೆಯನ್ನು ತೆಗೆದ ಹಾಲಿನಲ್ಲಿ ಬಾಳೆಹಣ್ಣನ್ನು ಬೆರೆಸಿ ಕೊಟ್ಟಾಗ ದೇಹದ ಅತಿಭಾರ ಕಡಿಮೆಯಾಗುತ್ತದೆ. (ದಿನದಲ್ಲಿ ಆರು ಬಾಳೆಹಣ್ಣು ಮತ್ತು ನಾಲ್ಕು ಗ್ಲಾಸ್ ಹಾಲು ಸೇವಿಸಬೇಕು. ಬೇರೆಯ ಯಾವ ಆಹಾರ ಸೇವಿಸಬಾರದು. ಹದಿನೈದು ದಿನಗಳಲ್ಲಿ ಇದರ ಪರಿಣಾಮ ತಿಳಿಯುತ್ತದೆ.)
  6. ಅನಿಯಮಿತವಾಗಿ ಮುಟ್ಟಾಗುವ ಸ್ತ್ರೀಯರು ಬಾಳೆಯ ಹೂವನ್ನು ಬೇಯಿಸಿ ಮೊಸರಲ್ಲಿ ಕಲಿಸಿ ಸೇವಿಸಿದರೆ ಅವರಿಗಾಗುವ ಋತುಕಾಲದ ವೇದನೆ ಹಾಗೂ ಅತಿಯಾದ ರಕ್ತಸ್ರಾವ ಕಡಿಮೆಯಾಗುವುದು.
  7. ಸಕ್ಕರೆ ಕಾಯಿಲೆ ಇರುವವರು ಬಾಳೆಹಣ್ಣನ್ನು ತಮ್ಮ ಮಿತಿಯಲ್ಲಿ ತಿಂದಾಗ ಅದು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ.
  8. ರಕ್ತಹೀನತೆಯಿಂದ ಬಳಲುವವರಿಗೆ ಬಾಳೆಹಣ್ಣು ಸೇವಿಸಿದರೆ ಉತ್ತಮ. ಇದರಲ್ಲಿ ಕಬ್ಬಿಣ ಅಂಶ ಹೆಚ್ಚಾಗಿರುವುದರಿಂದ ಹಿಮೋಗ್ಲೋಬಿನ್ ಉತ್ಪಾದಿಸಲು ಸಹಕಾರಿಯಾಗಿದೆ.
  9. ದಿನಕ್ಕೆ ಮೂರು ಸಣ್ಣ ಬಾಳೆಹಣ್ಣು ತಿನ್ನೋದ್ರಿಂದ 90 ನಿಮಿಷ ವ್ಯಾಯಾಮ ಮಾಡಿದಾಗ ಸಿಗುವಷ್ಟು ಶಕ್ತಿ ಸಿಗುತ್ತದೆಯಂತೆ. ಬರೀ ಶಕ್ತಿ ಮಾತ್ರವಲ್ಲ ದೇಹ ಫಿಟ್ ಆಗಿರುವ ಜೊತೆಗೆ ಆರೋಗ್ಯ ಕೂಡ ಸುಧಾರಿಸುತ್ತದೆ.
  10. ಬಾಳೆಹಣ್ಣು ಸೇವನೆ ಮಾಡುವವರು ಶೇಕಡಾ 21ರಷ್ಟು ರಕ್ತಹೆಪ್ಪುಗಟ್ಟುವ ಅಪಾಯದಿಂದ ಬಚಾವ್ ಆಗ್ತಾರೆ. ಹಾಗೆ ಸ್ಟ್ರೋಕ್ ಅಪಾಯವನ್ನು ಇದು ತಡೆಯುತ್ತದೆ.

Also Read: ಆರೋಗ್ಯಕ್ಕೆ ಮಾರಕವಾಗಿ ಬರುತ್ತಿದೆ ಚೀನೀ ಪ್ಲಾಸ್ಟಿಕ್ ಮೊಟ್ಟೆ!! ಆತಂಕದಲ್ಲಿ ಬೆಂಗಳೂರು