EVM ನಿಂದ ಮೋಸವಾಗುತ್ತಿದೆ ಎಂದು ಸುಳ್ಳು ಆರೋಪ ಮಾಡದ ಹಾಗೆ, ಚುನಾವಣಾ ಆಯೋಗ ಒಂದು ಹೊಸ ದಾರಿ ಕಂಡುಹಿಡಿದಿದೆ, ಏನೆಂದು ನೀವೇ ನೋಡಿ…

0
1142

ಇಲೆಕ್ಟ್ರಾನಿಕ್ ವೋಟಿಂಗ್ ಮಷೀನ್-ಗಳನ್ನು (EVM) ಹ್ಯಾಕ್ ಮಾಡಬಹುದು ಅದರಲ್ಲಿರುವ ಮಾಹಿತಿಯನ್ನು ಬದಲಿಸಬಹುದೆಂದು ಹಾಗು ಚುನಾವಣೆಯಲ್ಲಿ EVM ನಿಂದ ಚಲಾಯಿಸಿದ ಮತಗಳನ್ನು ಮರು ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್-ನಲ್ಲಿ ಕೇಸ್ ಹಾಕಿದ್ದ ಕಾಂಗ್ರೆಸ್ ನ್ಯಾಯಮೂರ್ತಿಗಳಿಂದ ಚೀಮಾರಿ ಹಾಕಿಸಿಕೊಂಡಿತ್ತು, ಇಂತವರ ಇಲ್ಲದ ಆರೋಪಗಳಿಗೆ ತೆರೆಯೆಳೆಯಲೆಂದೇ ಚುನಾವಣಾ ಆಯೋಗ ಒಂದು ಹೊಸ ಮಾರ್ಗ ಕಂಡು ಹಿಡಿದಿದೆ, ಏನದು ನೀವೇ ನೋಡಿ.

EVM ಬಗ್ಗೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ವಿರುದ್ಧ ಮಾಡಿಕೊಂಡು ಬಂದಿರುವ ಕಾಂಗ್ರೆಸ್ ಈಗ ಗುಜುರಾತ್ ಮತ್ತು ಹಿಮಾಚಲ್ ಪ್ರದೇಶದ ಚುನಾವಣೆಯ ಸೋಲಿನ ನಂತರ ಅವರು EVM ನನ್ನು ದೂರಲಾರಂಭಿಸಿದ್ದಾರೆ, ಈ ಕುರಿತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಸೋಲುಂಡಿತ್ತು. ಇನ್ನು ಜನರಿಗೆ ತಪ್ಪು ಸಂದೇಶ ರವಾನಿಸುತ್ತಿರುವ ಇಂತವರಿಗೆ ಉತ್ತರ ಕಲಿಸಲೆಂದೇ ಚುನಾವಣಾ ಆಯೋಗ ಒಂದು ಹೊಸ ಮಾರ್ಗ ಕಂಡು ಹಿಡಿದಿದೆ ಅದೇ VVPAT (ವೋಟರ್ ವೇರಿಫೈಡ್ ಪೇಪರ್ ಆಡಿಟ್ ಟ್ರಯಲ್) ಇದನ್ನು ಮುಂಬರುವ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಎಲ್ಲ 224 ಕ್ಷೇತ್ರದಲ್ಲಿ ಅಳವಡಿಸಲು ಚಿಂತನೆ ನಡೆಸಿದೆ.

VVPAT (ವೋಟರ್ ವೇರಿಫೈಡ್ ಪೇಪರ್ ಆಡಿಟ್ ಟ್ರಯಲ್) ವ್ಯವಸ್ಥೆಯಲ್ಲಿ, ನೀವು ಮತ ಹಾಕಿದ ಕೇವಲ 7 ಸೆಕೆಂಡ್-ಗಳಲ್ಲಿ ನಿಮಗೆ ಒಂದು ಪೇಪರ್ ಸಿಗುತ್ತದೆ (ಉದಾ: ನೀವು ATM ಗಳಲ್ಲಿ ಹಣ ತೆಗೆದಾಗ ಮಷೀನ್-ನಿಂದ ಕೊನೆಗೆ ಬರುವ ವ್ಯವಹಾರದ ರಸೀದಿ ಪೇಪರ್-ನ ಹಾಗೆ) ಅದರಲ್ಲಿ ನೀವು ಯಾರಿಗೆ ಮತ ಚಲಿಸಿದ್ದೀರಿ ಎಂದು ನಮೂದಿಸಿರುತ್ತದೆ, ನೀವು ಚಲಾಯಿಸಿದ ಮತ ಸರಿಯಾದ ಅಭ್ಯರ್ಥಿಗೆ ಬಿದ್ದಿದೆಯೋ ಇಲ್ಲವೋ ಎಂದು ತಕ್ಷಣ ಗೊತ್ತಾಗುತ್ತದೆ, ನಂತರ ಆ ಪೇಪರ್ ಚೀಟಿಯನ್ನು ಪಕ್ಕದಲ್ಲಿಯೇ ಇರುವ ಪೆಟ್ಟಿಗೆಗೆ ಹಾಕಬೇಕು ಯಾವದೇ ಕಾರಣಕ್ಕೂ ಹೊರಗೆ ತೆಗೆದುಕೊಂಡು ಹೋಗುವ ಹಾಗಿಲ್ಲ.

EVM ಬಗ್ಗೆ ಹಲವು ಜನ ತಕರಾರು ಮಾಡಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ VVPAT ವ್ಯವಸ್ಥೆಯನ್ನು ಅಳವಡಿಸುವಂತೆ ಚುನಾವಣಾ ಆಯೋಗಕ್ಕೆ ಕಳೆದ ವರ್ಷ ಸಲಹೆ ನೀಡಿತ್ತು. ಇದನ್ನು ಚುನಾವಣಾ ಆಯೋಗ ರೆಡಿ ಮಾಡಿ ಈ ಬಾರಿ ನಡೆಯಲಿರುವ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಎಲ್ಲ 224 ಕ್ಷೇತ್ರಗಳ ಪ್ರತಿಯೊಂದು ಮತಗಟ್ಟೆಗಳಲ್ಲಿಯೂ ಅಳವಡಿಸಿ, ತಮ್ಮ ಸೋಲಿಗೆ EVM ನನ್ನು ಧೂರುತ್ತಿರುವ ಹಲವು ಜನರ ಬಾಯಿಗೆ ಬೀಗಹಾಕಲಿದೆ.