ಬಂಧನದ ಭೀತಿಯಲ್ಲಿರುವ ಡಿಕೆಶಿ, ದೆಹಲಿಯಲ್ಲಿ ಸಿಕ್ಕ ಹಣ ನನ್ನದೆಂದು ಒಪ್ಪಿಕೊಂಡು ಬಿಚ್ಚಿಟ್ಟ ಸತ್ಯವೇನು??

0
271

ಮಾಜಿ ಸಚಿವ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಅವರಿಗೆ ಬಂಧನದ ಭೀತಿ ಶುರುವಾಗಿದ್ದು. ಅಕ್ರಮ ಹಣ ಹೊಂದಿದ್ದಾರೆ ಎನ್ನುವ ಕುರಿತು ಸಮನ್ಸ್ ಜಾರಿಗೊಳಿಸಿದ್ದು, ಇಂದು ದೆಹಲಿಗೆ ತೆರಳುವ ಮುನ್ನ ಕೆಲವು ಮಹತ್ವದ ವಿಚಾರವನ್ನು ಬಿಚ್ಚಿಟ್ಟ ಡಿಕೆಶಿ ದೆಹಲಿಯಲ್ಲಿ ಸಿಕ್ಕ ಹಣ ನನ್ನದೇ ಆದರೆ ಯಾವುದೇ ತಪ್ಪು ಮಾಡಿಲ್ಲ, ಎಂದು ಹಲವು ವಿಚಾರವಾಗಿ ಚರ್ಚೆ ನಡೆಸಿದ ಡಿಕೆ ಶಿವಕುಮಾರ್, ಪಕ್ಷ ಕಟ್ಟುವಲ್ಲಿ ರಾಜ್ಯದಲ್ಲಿ ಮಾತ್ರವಲ್ಲದೆ ಹಲವು ರಾಜ್ಯದಲ್ಲಿ ನನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ಎಂದು ಹೇಳಿ ಸುದ್ದಿಗೋಷ್ಠಿ ಮುಗಿಸಿದ ಡಿಕೆ ಶಿವಕುಮಾರ್ ದೆಹಲಿ ಹೊರಟಿದ್ದಾರೆ. ಈ ವೇಳೆ ಅವರು ಹೇಳಿದ ಹಲವು ವಿಚಾರಗಳು ಇಲ್ಲಿವೆ ನೋಡಿ.

ಹೌದು ಇಡಿ ಪ್ರಕರಣದಲ್ಲಿ ಮಾಜಿ ಸಚಿವ ಡಿ. ಕೆ ಶಿವಕುಮಾರ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದ್ದಾರೆ. ಹೀಗಾಗಿ ಟ್ರಬಲ್ ಶೂಟರ್ ಡಿಕೆಶಿಗೆ ಈಗ ಬಂಧನದ ಭೀತಿ ಎದುರಾಗಿದೆ. ಅರ್ಜಿಯಲ್ಲಿ ಸಮನ್ಸ್ ರದ್ದು ಕೋರಿ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಬೇಕು. ಇಡಿ ತಕ್ಷಣ ಬಂಧಿಸದಂತೆ ಮಧ್ಯಂತರ ತಡೆಗೆ ಮನವಿ ಮಾಡಿಕೊಳ್ಳಲಾಗಿದೆ. ನಿನ್ನೆ ಅರ್ಜಿಯ ವಜಾ ಬಗ್ಗೆ ಮೇಲ್ಮನವಿ ಸಲ್ಲಿಸಲಿದ್ದೇವೆ. ಅಲ್ಲಿಯತನಕ ಬಂಧಿಸದಂತೆ ಇಡಿಗೆ ಸೂಚಿಸಬೇಕು. ಅಲ್ಲದೆ ಮಧ್ಯಂತರ ಅರ್ಜಿ ಸಲ್ಲಿಸುವ ತನಕ ಬಂಧಿಸದಂತೆ ಸೂಚಿಸಲು ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಡಿಕೆಶಿ ಬಿಚ್ಚಿಟ್ಟ ಸಿಕ್ರೆಟ್ ಏನು?

ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಹೇಳಿದ ಮಾಹಿತಿಯಂತೆ, ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಡೆಸಿಕೊಂಡು ಬಂದಿದ್ದೇನೆ. ಗುಜರಾತ್ ಶಾಸಕರು, ಮಹಾರಾಷ್ಟ್ರ ಕಾಪಾಡುವ ಜವಾಬ್ದಾರಿ ನಿಭಾಯಿಸಿದ್ದೇನೆ. ನಮ್ಮ ರಾಜ್ಯದ ಶಾಸಕರನ್ನು ಕಾಪಾಡುವ ಜವಾಬ್ದಾರಿ ನಿರ್ವಹಿಸಿದ್ದೇನೆ. ಕಳೆದ 30 ವರ್ಷಗಳಿಂದ ನನ್ನದೇ ರೀತಿಯ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಪ್ರಾಮಾಣಿಕತೆಯಿಂದ ನಿರಂತರವಾಗಿ ನನ್ನ ಕರ್ತವ್ಯ ನಿಭಾಯಿಸಿದ್ದೇನೆ. ನನ್ನ ಹೋರಾಟ ಕೆಲವು ವೇಳೆ ಫಲ ಕೊಟ್ಟಿದೆ, ಕೆಲವು ಸಂದರ್ಭದಲ್ಲಿ ಕೊಟ್ಟಿಲ್ಲ, ಅದು ಒಂದು ವಿಚಾರವಾದರೆ 85 ವರ್ಷದ ನನ್ನ ತಾಯಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮಧ್ಯಮ ವರ್ಗದ ಕುಟುಂಬದಲ್ಲಿ ನಾವು ಬೆಳೆದು ಬಂದೆವು. ನಮ್ಮ ತಾಯಿ ಸಂಪಾದಿಸಿದ ಕುಟುಂಬದ ಆಸ್ತಿಯನ್ನು ಬೇನಾಮಿ ಆಸ್ತಿ ಎಂದು ಹೇಳಲಾಗುತ್ತಿದೆ.

ಡಿಕೆಶಿ ಬೇನಾಮಿ ಆಸ್ತಿ ಸಂಪಾದಿಸಿದ್ದಾರೆಂದು ಆರೋಪಿಸಲಾಗುತ್ತಿದೆ. ಕನಕಪುರ ಮನೆಯಿಂದ ಎಲ್ಲವನ್ನೂ ಬೇನಾಮಿ ಆಸ್ತಿ ಎಂದು ತೀರ್ಮಾನಿಸಿದ್ದಾರೆ. ಇದನ್ನು ಪ್ರಶ್ನಿಸಿ ಕೋರ್ಟ್ ಗೆ
ಹೋಗಿದ್ದೆ, ಕೋರ್ಟ್ ತಡೆಯಾಜ್ಞೆ ನೀಡಿದೆ. ತಾಯಿ ಮಗನನ್ನು, ಮಗ ತಾಯಿಯನ್ನು ನಂಬದೇ ಯಾರನ್ನು ನಂಬುವುದು? ತಿಳಿಯುತ್ತಿಲ್ಲ. ಇದು ಆದಾಯ ತೆರಿಗೆ ಇಲಾಖೆಗೆ ಸಂಬಂಧಿಸಿದ ಕೇಸ್, ಇಡಿಗೆ ಸಂಬಂಧಿಸಿದ ಕೇಸ್ ಅಲ್ಲ. ನಾನು ವಿದೇಶಿ ವ್ಯವಹಾರ ನಡೆಸಿಲ್ಲ, ಮೋಸ ಮಾಡಿಲ್ಲ, ಲಂಚದ ದುಡ್ಡು ಅಲ್ಲ. ಟ್ಯಾಕ್ಸ್ ಕಟ್ಟಿದ್ದೇನೆ, ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಹೀಗಾಗಿ ಇಡಿ ಸಮನ್ಸ್ ರದ್ದುಪಡಿಸುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದೆ, ನಿನ್ನೆ ಹೈಕೋರ್ಟ್ ನನ್ನ ಅರ್ಜಿ ವಜಾಗೊಳಿಸಿತು. ನಾನು ಸಚಿವ ನಾಗಿದ್ದೆ, ನನ್ನ ತಮ್ಮ ಸಂಸದನಾಗಿರುವ ಕಾರಣ ನಮ್ಮ ಆಸ್ತಿಯನ್ನು ಕೊಂಡು ಕೊಳ್ಳಲು ಸಹ ಯಾರೂ ಮುಂದೆ ಬರುತ್ತಿಲ್ಲ ಎಂದು ನಗುತ್ತಾ ಹೇಳಿದ ಡಿಕೆ.ಶಿವಕುಮಾರ್, ಅದಕ್ಕಾಗಿಯೇ ನಾವು ನಮ್ಮ ಹಲವು ಆಸ್ತಿಯನ್ನು ಸರ್ಕಾರಕ್ಕೆ ದಾನ ಮಾಡಿದ್ದೇವೆ. ಎಂದು ಹೇಳಿ ತಮ್ಮ ಮನೆಯಿಂದ ದೆಹಲಿಗೆ ಹೊರಟಿದ್ದಾರೆ.

Also read: ರಾಜ್ಯದಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತ; ಈ ಜಿಲ್ಲೆಯಲ್ಲಿ ದಲಿತರು ಹೋಟೆಲ್‍ಗೆ ಹೋಗಂಗಿಲ್ಲ, ಕುಡಿಯಲು ನೀರು ಇಲ್ಲ, ಮೆಡಿಕಲ್-ನಲ್ಲಿ ಟ್ಯಾಬ್ಲೆಟ್ ಕೂಡ ಕೊಡಲ್ಲ..