ರಾಜ್ಯದಲ್ಲೂ ಕೊರೊನಾ ವೈರಸ್ ಭೀತಿ; ಶಾಲಾ ಮಕ್ಕಳಲ್ಲಿ ಮತ್ತು ಸಿಬ್ಬಂದಿಗಳಲ್ಲಿ ಜ್ವರ ಕಂಡು ಬಂದ್ರೆ ಕಡ್ಡಾಯವಾಗಿ ರಜೆ ನೀಡಲು ಶಿಕ್ಷಣ ಇಲಾಖೆ ಸೂಚನೆ.!

0
254

ವಿಶ್ವಕ್ಕೆ ಮಾರಕವಾದ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಚೀನಾದಲ್ಲಿ ಇದೀಗ ಮತ್ತೆ 48 ಮಂದಿ ಬಲಿಯಾಗಿದ್ದು, ಈ ಮೂಲಕ ಜಾಗತಿಕವಾಗಿ ವೈರಸ್ ನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 3,000ಕ್ಕೆ ಏರಿಕೆಯಾಗಿದೆ. ಒಟ್ಟು ಚೀನಾದಲ್ಲಿ 2,912 ಮಂದಿ ಬಲಿಯಾಗಿದ್ದಾರೆಂದು ಚೀನಾದ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು ಅಮೇರಿಕಾಡಲ್ಲಿ 6 ಜನ ಬಲಿ ಆಗಿದ್ದಾರೆ. ಇನ್ನ ಭಾರತಕ್ಕೂ ಪ್ರವೇಶಿಸಿದ ಕೊರೊನಾ. ಭಾರಿ ಭೀತಿಯನ್ನು ಹುಟ್ಟಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ಕೂಡಾ ಕೊರೊನಾ ವೈರಸ್ ತಡೆಗೆ ವಿಶೇಷ ಕ್ರಮಗಳನ್ನು ತೆಗೆದುಕೊಂಡಿದೆ.


Also read: 60 ದೇಶಗಳಲ್ಲಿ ಕೊರೊನಾ ವೈರಸ್ ಪತ್ತೆ; ಭಾರತದಲ್ಲಿ ಮೂರು ಪ್ರಕರಣದ ಹಿನ್ನೆಲೆ ಭಾರಿ ಅಪಾಯದ ಎಚ್ಚರಿಕೆ.!

ಹೌದು ರಾಜ್ಯದಲ್ಲಿ ಕೊರೊನಾ ಭೀತಿ ಹೆಚ್ಚಾಗುತ್ತಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯದ ಶಾಲೆಗಳಲ್ಲಿ ಯಾವುದೇ ಮಕ್ಕಳಿಗೆ ಜ್ವರದ ಲಕ್ಷಣ ಕಂಡು ಬಂದ್ರೆ ಆ ಮಕ್ಕಳಿಗೆ ಕಡ್ಡಾಯವಾಗಿ ರಜೆ ನೀಡಬೇಕು ಅಂತ ಎಲ್ಲಾ ಶಾಲೆಗಳಿಗೆ ಸೂಚನೆ ನೀಡಿದೆ. ಮಗುವಿಗೆ ಜ್ವರ ಕಡಿಮೆ ಆಗೋವರೆಗೂ ಕಡ್ಡಾಯ ರಜೆ ನೀಡಬೇಕು. ಅ ಮಗು ಸೂಕ್ತ ಚಿಕಿತ್ಸೆ ಪಡೆದು ಜ್ವರ ವಾಸಿಯಾದ ನಂತರವೇ ಮತ್ತೆ ಶಾಲೆಗೆ ಬರ ಮಾಡಿಕೊಳ್ಳಬೇಕು ಅಂತ ತಿಳಿಸಿದೆ. ಕೊರೊನಾ ಭೀತಿಯಿಂದ ಉಳಿದ ಮಕ್ಕಳಿಗೆ, ಪೋಷಕರಿಗೆ ಆತಂಕ ನಿವಾರಣೆ ಮಾಡೋ ನಿಟ್ಟಿನಲ್ಲಿ ಈ ಮಹತ್ವದ ಕ್ರಮವನ್ನ ಶಿಕ್ಷಣ ಇಲಾಖೆ ತೆಗೆದುಕೊಂಡಿದೆ. ಅಷ್ಟೇ ಅಲ್ಲದೆ ಶಿಕ್ಷಕರಿಗೂ ಜ್ವರ ಬಂದರೂ ರಜೆ ನೀಡಬೇಕೆಂದು ಹೇಳಿದೆ.


Also read: ವಿಶ್ವಾದ್ಯಂತ ಭೀತಿ ಹುಟ್ಟಿಸಿದ ಡೇಂಜರಸ್ ‘ಕೊರೊನಾ ವೈರಸ್’ ಗೆ ಕಾರಣವಾಯ್ತ ಬಾವಲಿ ಸೂಪ್? ಈ ವೈರಸ್ ಹಬ್ಬುವುದು ಹೇಗೆ?

ಶಾಲಾ ಸಿಬ್ಬಂದಿ ಸೇರಿದಂತೆ ಯಾರಿಗೆ ಜ್ವರ ಕಂಡು ಬಂದರು ಅವರಿಗೆ ಕೂಡಲೇ ರಜೆ ಕೊಡಬೇಕು. ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಬೇಕು ಅಂತ ಎಲ್ಲಾ ಆಡಳಿತ ಮಂಡಳಿಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಸಂಪೂರ್ಣವಾಗಿ ಗುಣಮುಖವಾಗೋವರೆಗೆ ಎಲ್ಲರಿಗೂ ರಜೆ ಕೊಡಲು ಸೂಚನೆ ನೀಡಿದೆ. ಇಷ್ಟೇ ಅಲ್ಲ ಹಾಸ್ಟೆಲ್ ಗಳಲ್ಲಿ ಕೂಡಾ ವಿದ್ಯಾರ್ಥಿಗಳಿಗೆ ಜ್ವರ ಕಂಡು ಬಂದರೆ ಅವರನ್ನ ಪ್ರತ್ಯೇಕ ವಿಭಾಗದಲ್ಲಿ ಇರಿಸಬೇಕು. ಜ್ವರದಿಂದ ಬಳಲುತ್ತಿರೋ ಮಕ್ಕಳಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ಕೊಡಿಸಬೇಕು. ವಿದ್ಯಾರ್ಥಿಗಳು ಸಂಪೂರ್ಣವಾಗಿ ಗುಣಮುಖರಾದ ನಂತರವೇ ಎಲ್ಲರ ಜೊತೆ ತೊಡಗಿಸಿಕೊಳ್ಳಲು ಅವಕಾಶ ನೀಡಬೇಕು ಅಂತ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.


Also read: ಚಿನಾದಲ್ಲಿನ ಕೊರೋನ ವೈರಸ್ ಭೀತಿ ಬೆಂಗಳೂರಿನ ಕುಡುಕರಿಗೆ ಹೇಗೆ ಖುಷಿ ತಂದಿದೆ ಅಂತ ಗೊತ್ತಾದ್ರೆ ಬಿದ್ದು ಬಿದ್ದು ನಗ್ತೀರಾ!!

ಏಕೆಂದರೆ ಪಾಲಕರು ಮಕ್ಕಳನ್ನು ಶಾಲೆಗೆ ಸೇರಿಸಲು ಹೆದರುತ್ತಿದ್ದು, ಒಂದು ಮಕ್ಕಳಿಗೆ ಬರುವ ಜ್ವರ ಮತ್ತೊಬ್ಬರಿಗೆ ಹರಡುತ್ತೆ ಎನ್ನುವ ಅಂತಕದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಇಡಿ ವಿಶ್ವವೆ ಹಲವು ಮಹತ್ವದ ಸಭೆಗಳನ್ನು ಮುಂದಕ್ಕೆ ಹಾಕುತ್ತಿದೆ. ವಿದೇಶ ಪ್ರವಾಸ ಮಾಡಿದ ಪ್ರತಿಯೊಬ್ಬರಿಗೂ ತಪಾಷಣೆ ಮಾಡಿಸುತ್ತಿದೆ. ಅಮೆರಿಕಾ, ಆಸ್ಟ್ರೇಲಿಯಾ, ಇಟಲಿ ಹಾಗೂ ಯೂರೋಪ್ ರಾಷ್ಟ್ರಗಳಲ್ಲೂ ವೈರಾಣೂ ಪತ್ತೆಯಾಗಿದೆ. 60ರ ವಯಸ್ಸಿನ ನಂತಹ ವ್ಯಕ್ತಿಗಳಲ್ಲಿ, ಅನಾರೋಗ್ಯ ಪೀಡಿತರಲ್ಲಿ ವೈರಾಣು ಹೆಚ್ಚು ಪತ್ತೆಯಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ ಕೊರೋನಾ ವೈರಸ್ ವೊದು ಜಾತಿಯ ವೈರಸ್ ಆಗಿದೆ. ಸೂಕ್ಷ್ಮ ದರ್ಶಕದಲ್ಲಿ ಇದು ಕಿರೀಟ ರೀತಿ ಕಾಣಿಸುತ್ತದೆ.
ಲ್ಯಾಟಿನ್ ಭಾಷೆಯಲ್ಲಿ ಕೊರೋನಾ ಎಂದರೆ ಕಿರೀಟ ಎಂದರ್ಥ. ಹೀಗಾಗಿ ವೈರಸ್’ಗೆ ಕೊರೋನಾ ಹೆಸರು. ಚೀನಾದ ವುಹಾನ್ ನಗರದಲ್ಲಿನ ಅಕ್ರಮ ವನ್ಯ ಜೀವಿ ಮಾಂಸ ಕೇಂದ್ರದ ಮೂಲಕ ಮಾನವರಿಗೆ ವೈರಸ್ ತಗುಲಿದೆ. ವೈರಸ್ ಒಂಟೆ, ಬೆಕ್ಕು, ಬಾವಲಿ ಸೇರಿದಂತೆ ಹಲವಾರು ಪ್ರಾಣಿಗಳಲ್ಲೂ ಪ್ರವೇಶಿಸುತ್ತಿದೆ. ಎಂದು ಹೇಳಲಾಗಿದೆ.