ನಿಮ್ಮ ಮೇಲೆ ವಾಮಾಚಾರ ಆಗಿದೆಯೋ ಇಲ್ಲವೋ ಎಂದು ಈ ರೀತಿ ಮಾಡಿ ತಿಳಿದುಕೊಳ್ಳಿ…!

0
2614

Kannada News | kannada Useful Tips

ಕೆಲವರು ತಮಗೆ ಆಗದಿರುವ ಕೆಲಸಗಳನ್ನು ಬೇರೆಯವರು ಮಾಡುತ್ತಿರುವದನ್ನು ನೋಡಿ ಸಹಿಸಲಾಗದೆ ಅವರನ್ನು ಸೋಲಿಸಲು ಏನಾದರೊಂದು ಆಲೋಚನೆ ಮಾಡುತ್ತಿರುತ್ತಾರೆ. ಇನ್ನು ಕೆಲವರು ತಪ್ಪು ದಾರಿಗೆ ಹೋಗಿ “ಮಾಟ ಮಂತ್ರ” ಅಥವಾ ವಾಮಾಚಾರ ಮಾಡಿಸುತ್ತಾರೆ. ನಿಮ್ಮ ಮೇಲೆ ವಾಮಾಚಾರ ಆಗಿದೆಯೋ ಇಲ್ಲವೋ ಎಂದು ಹೇಗೆ ತಿಳಿಯೋದು ಗೊತ್ತೇ.

ಈ ಮಾಟ ಮಂತ್ರ ಅಥವಾ ವಾಮಾಚಾರ ಎಂಬ ಕೆಟ್ಟ ಆಚರಣೆಯೇ ಹಾಗೆ, ನೋವಾಗುತ್ತದೆ ಆದರೆ ಯಾರು ಹೊಡೆದದ್ದು ಅಂತ ಗೊತ್ತಾಗುವುದಿಲ್ಲ. ಇನ್ನು ಬಹಳ ಜನಕ್ಕೆ ತಮ್ಮ ಮೇಲೆ ವಾಮಾಚಾರ ಪ್ರಯೋಗ ಆಗಿದೆ ಎಂಬ ಅನುಮಾನ ಮೂಡಿದರೂ ಹೇಳಿಕೊಳ್ಳಲು ಆಗುವುದಿಲ್ಲ ಅಷ್ಟು ನಾಚಿಕೆ.

ನಿಮ್ಮ ಮೇಲೆ ವಾಮಾಚಾರ ಆಗಿದೆಯೋ ಇಲ್ಲವೋ ಎಂದು ಈ ರೀತಿ ಮಾಡಿ ತಿಳಿದುಕೊಳ್ಳಿ.

ಊಟದಲ್ಲಿ ಕೂದಲು:

ಆಹಾರದಲ್ಲಿ ಆಗೊಮ್ಮೆ- ಈಗೊಮ್ಮೆ ಅಪರೂಪಕ್ಕೆ ಕೂದಲು ಸಿಗುವುದು ಬೇರೆ. ಆದರೆ ನಿಮ್ಮ ಮೇಲೆ ವಾಮಾಚಾರ ಪ್ರಯೋಗ ಆಗಿದ್ದರೆ ಊಟದಲ್ಲಿ ಪದೇಪದೇ ಕೂದಲು ಸಿಗುತ್ತದೆ. ಅದು ಆಗೊಮ್ಮೆ- ಈಗೊಮ್ಮೆ ಅಲ್ಲ ಪ್ರತಿ ಬಾರಿಯೂ ಸಿಗುತ್ತದೆ, ನಿಮಗೆ ನೀವೇ ಅನುಮಾನ ಪಡುವಷ್ಟು ಕೂದಲು ಪದೇ-ಪದೇ ಕಾಣಸಿಗುತ್ತವೆ.

ಯಾರಿಗೂ ಗೊತ್ತಾಗದ ಸಮಸ್ಯೆ:

ಗುರುತಿಸಲು ಸಾಧ್ಯವೇ ಆಗದಂಥ ಸಮಸ್ಯೆ ಸೃಷ್ಟಿಯಾಗಿ, ಜ್ಯೋತಿಷಿಗಳಿಂದಲೂ, ಜಾತಕದಲ್ಲಿ ಯಾವ ತೊಂದರೆಯೂ ಇಲ್ಲ ಎಂಬ ಉತ್ತರ. ವ್ಯಾಪಾರದಲ್ಲಿ ದಿಢೀರ್ ಆಗಿ ಮೇಲಿಂದ ಮೇಲೆ ನಷ್ಟ ಕಾಣತೊಡಗಿ, ಕೆಲಸ ಕಳೆದುಕೊಳ್ಳುವ ಮತ್ತು ಕೈಗೂಡಬೇಕಾದ ಕೆಲಸ ಪದೇ-ಪದೇ ಕೊನೆ ಕ್ಷಣದಲ್ಲಿ ಕೈತಪ್ಪುವುದು.

ಕೆಟ್ಟ ಕನಸು:

ನಿತ್ಯ ಮಲಗಿದಾಗೆಲ್ಲ ಕೆಟ್ಟ ಕನಸುಗಳು ಬೀಳುವುದು. ಕನಸಿನಲ್ಲಿ ಯಾರೋ ಬಂದು ಕತ್ತು ಹಿಸುಗಿ ಸಾಯಿಸಿದಂತೆ ಆಗುವುದು. ಪದೇಪದೇ ಈ ರೀತಿ ಕೆಟ್ಟ ಕನಸುಗಳು ಬೀಳುವಾಗ ಎಚ್ಚರ ಆಗಲೇಬೇಕು. ಕೆಲವರಿಗೆ ನಿಧಾನವಾಗುತ್ತದೆ ಇನ್ನು ಕೆಲವರಿಗೆ ಈ ಅನುಭವ ಬಹಳ ಬೇಗ ಆಗುತ್ತದೆ.

ಕುಂಕುಮ:

ಪೊಟ್ಟಣದಲ್ಲಿ ಕಟ್ಟಿದ ಕುಂಕುಮ, ಅರಿಶಿನ, ನಿಂಬೆಹಣ್ಣು, ಗೊಂಬೆ, ಭಸ್ಮ, ದಾರ ಸುತ್ತಿಟ್ಟ ಮಡಿಕೆ, ಸೂಜಿ ಚುಚ್ಚಿದ ವಸ್ತು, ಮೊಟ್ಟೆ, ಮತ್ತು ಮೆಣಸಿನಕಾಯಿ ನಿಮ್ಮ ಮನೆಯ ಆಸುಪಾಸಿನಲ್ಲಿ ಅಥವಾ ಸುತ್ತ-ಮುತ್ತಲು ಪದೇ-ಪದೇ ಕಂಡು ಬಂದರೆ ಅದು ವಾಮಾಚಾರದ ಸೂಚನೆ.

ಸಿಟ್ಟು:

ಸುಮ್ಮನೆ ಯಾವುದೇ ಕಾರಣವಿರದೆ ಸಿಟ್ಟು ಬರುವುದು. ಸ್ನೇಹಿತರು, ಮನೆಯವರು ನಿಮ್ಮ ಮೇಲೆ ಅಥವಾ ನೀವು ಅವರ ಮೇಲೆ ಯಾವ ಕಾರಣವೂ ಇಲ್ಲದೆ ಸಿಟ್ಟು ಮಾಡಿಕೊಂಡು ವಿರೋಧ ಕಟ್ಟಿಕೊಂಡು ಶತ್ರುವಂತೆ ವರ್ತಿಸುವುದು. ಈ ರೀತಿಯಾದರೆ ಒಂದು ಸಾರಿ ಯೋಚಿಸುವುದು ಒಳ್ಳೆಯದು.

ಪರಿಹಾರ:

ಇನ್ನು ಇಂತಹ ತಿಳಿಯಲು ಆಸಾದ್ಯವಾಗುವಂತಹ ವಾಮಾಚಾರಕ್ಕೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದರೆ ಪ್ರಶ್ನಶಾಸ್ತ್ರ, ಕವಡೆ ಶಾಸ್ತ್ರ ಅಥವಾ ತಾಂಬೂಲ ಶಾಸ್ತ್ರದ ಮೂಲಕ ಮಾಟ ಮಂತ್ರ ಪ್ರಯೋಗ ಆಗಿದೆಯಾ ಎಂಬುದು ತಿಳಿದುಕೊಳ್ಳಬೇಕು. ಆ ನಂತರ ಅದಕ್ಕೆ ಯಾವ ರೀತಿ ಪರಿಹಾರ ಕಂಡುಕೊಳ್ಳಬೇಕು, ಯಾವ ಹೋಮ-ಹವನ ಮಾಡಿಸಬೇಕು ಅಂತ ನುರಿತ ಪಂಡಿತರಲ್ಲಿ ತಿಳಿದುಕೊಳ್ಳಬಹುದು.

ಇದು ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ ಮುಂದುವರೆದ ದೇಶಗಳಲ್ಲಿಯೂ ಇದನ್ನು ಮಾಡುತ್ತಿದ್ದಾರೆ, ಅಲ್ಲಿ ಇದಕ್ಕೆ “ಬ್ಲಾಕ್ ಮ್ಯಾಜಿಕ್”. ಇನ್ನು ಕಾನೂನಿನ ಪ್ರಕಾರ ವಾಮಾಚಾರ ಮಾಡುವವರಿಗೆ ಮತ್ತು ಮಾಡಿಸುವವರಿಗೆ ಎಲ್ಲ ದೇಶಗಳಲ್ಲಿ ದಂಡ ಸಹಿತ ಕಠಿಣ ಶಿಕ್ಷೆ ಇದೆ.