ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರದಿಂದ ರೋಗಿಗಳು ಎಷ್ಟು ಪರದಾಡುತ್ತಿದ್ದಾರೆ?? ಏನೂ ತಪ್ಪು ಮಾಡದ ನಾಗರಿಕರೇ ಯಾಕೆ ಯಾವಾಗಲೂ ಕಷ್ಟ ಅನುಭವಿಸಬೇಕು??

0
266

ಖಾಸಗಿ ಆಸ್ಪತ್ರೆಗಳ ಮುಷ್ಕರದ ಬಿಸಿ ವ್ಯಾಪಕವಾಗಿದೆ. ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ರೋಗಿಗಳು ನರಳಾಟ ನಡೆಸಿದ್ದಾರೆ. ಪರಿಣಾಮ ಎಂದು ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡದ ರೋಗಿಗಳು ಇಂದು ಸರ್ಕಾರಿ ಆಸ್ಪತ್ರೆಗಳತ್ತಮುಖ ಮಾಡಿದ್ದಾರೆ. ಇನ್ನು ರಾಜ್ಯವಾಪಿ ನಡೆಯುತ್ತಿರುವ ಪ್ರತಿಭಟನೆಗೆ ಎಲ್ಲ ಖಾಸಗಿ ವೈದ್ಯರು ಬೆಂಬಲ ಸೂಚಿಸಿದ ಬೆನ್ನಲ್ಲೆ ಜಿಲ್ಲೆಗಳಲ್ಲೂ ರೋಗಿಗಳು ನರಳಾಟ ನಡೆಸಿದ್ದಾರೆ.


ಬಾಗಲಕೋಟೆಯಲ್ಲಿ ಹೆರಿಗೆ ನೋವಿನಿಂದ ನರಳತ್ತು, ಚಿಕಿತ್ಸೆಗಾಗಿ ಪರದಾಡುತ್ತಿದ್ದ, ಮಹಿಳೆಗೆ ಕೊನೆಗೂ ಚಿಕಿತ್ಸೆ ಸಿಕ್ಕಿದೆ. ಹುನಗುಂದ ತಾಲೂಕಿನ ಚಿಕ್ಕಕೊಡಗಲಿ ಗ್ರಾಮದ 22 ವರ್ಷದ ಚೈತ್ರ ಪವಾರ್ ಹೆರಿಗೆ ನೋವಿನಿಂದಬಳಲುತ್ತಿದ್ದರು. ಗರ್ಭಿಣಿ ಚೈತ್ರರನ್ನು ಇಳಕಲ್ ಖಾಸಗಿ ಆಸ್ಪತ್ರೆಗೆ ಕರೆ ತಂದಾಗ ರಾಜ್ಯಾದ್ಯಂತ ವೈದ್ಯರ ಮುಷ್ಕರ ಕಾರಣದಿಂದ ಹೊರ ರೋಗಿಗಳಿಗೆ ಚಿಕಿತ್ಸೆ ನೀಡುವುದಿಲ್ಲ ಎಂದು ತಿಳಿಸಿದ್ರು.

ಇನ್ನು ಬೆಂಗಳೂರಿನಲ್ಲೂ ಇಂತಹದೊಂದು ಅಮಾನವೀಯ ಘಟನೆ ನಡೆದಿದೆ. ಹೌದು ನಗರದ ಕಿಮ್ಸ್‍ ಆಸ್ಪತ್ರೆಗೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು, ಇವರನ್ನು ಆಸ್ಪತ್ರೆಯ ಒಳಗೆ ಕರೆದುಕೊಂಡು ಹೋಗುವ ಔದಾರ್ಯತೋರದೆ ವೈದ್ಯರು ನಿರ್ಲಕ್ಷಿಸಿದ್ರು. ಪರಿಣಾಮ ರೋಗಿಯನ್ನು ಆಟೋರಿಕ್ಷಾದಲ್ಲೇ ಮತ್ತೊಂದು ಆಸ್ಪತ್ರೆಗೆ ರವಾನೆ ಮಾಡಲಾಯಿತು.
ಖಾಸಗಿ ಆಸ್ಪತ್ರೆಯ ಮುಷ್ಕರದ ಬಿಸಿ ಸರ್ಕಾರಿ ಆಸ್ಪತ್ರೆಗಳಿಗೆ ದೌಢಾಯಿಸುತ್ತಿರುವ ರೋಗಿಗಳ ಪರದಾಡುತ್ತಿದ್ದಾರೆ. ಇನ್ನು ಹೊರರೋಗಿಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆ ಗಂಟೆ ಗಟ್ಟಲೇ ಕಾದು ಕಾದು ರೋಗಿಗಳು ಸುಸ್ತಾಗಿದ್ದಾರೆ.


ಉತ್ತರ ಕರ್ನಾಟಕದ ಗದಗ್ ಜಿಲ್ಲೆಯಲ್ಲಿ ಆಟೋದಲ್ಲಿ ಬಂದ ರೋಗಿಗಳನ್ನು ಒಳಗೆ ಕಡೆದುಕೊಂಡು ಹೋಗಲು ಸರಿಯಾದ ವ್ಯವಸ್ಥೆ ಇರದ ಹಿನ್ನೆಲೆ, ಆಸ್ಪತ್ರೆಯಲ್ಲಿ ದಾಖಲಿಸಲು ರೋಗಿಯನ್ನು ಹೊತ್ತ ನಡೆದರು. ಇದನ್ನು ರೆಕಾರ್ಡ್‍ಮಾಡಲು ಮುಂದಾದ ಮಾಧ್ಯಮಗಳನ್ನು ಕಂಡು, ಕಕ್ಕಾಬಿಕ್ಕಿಯಾದ ಸಿಬ್ಬಂದಿಗಳು ರೋಗಿಗಳನ್ನು ಒಳ ಸೇರಿಸಲು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂದು ರೋಗಿಯ ಸಿಬ್ಬಂದಿ ತಿಳಿಸಿದ್ದಾರೆ.