ಪ್ರತಿ ದಿನ ಸಿಹಿ ತಿನ್ನೋದು, ಸಿಗರೇಟ್ ಸೇದೋದು ಮತ್ತು ಧೂಮಪಾನ ಮಾಡೋದಕ್ಕಿಂತ ಅಪಾಯ!!

0
333

ಸಕ್ಕರೆ ಇಲ್ಲದೆ ಜೀವನವಿಲ್ಲ ಎಂಬ ಹಾಗೆ ಜನರು ಪ್ರತಿದಿನವೂ ತಮ್ಮ ಆಹಾರದಲ್ಲಿ ಮತ್ತು ಚಹಾ, ಕೆಫೆ, ಹೇಗೆ ಎಲ್ಲದರಲ್ಲೂ ಸಕ್ಕರೆ ಬೇಕೆಬೇಕೆ. ಅದರಲ್ಲಿ ಬೇಕರಿ ಸಿಹಿ ತಿನುಸುಗಳು ಸಕ್ಕರೆಯಿಂದ ತಯಾರಾಗುತ್ತೇವೆ. ಇಂತಹ ಪದಾರ್ಥಗಳನ್ನು ನೋಡಿದರೆ ತಿನ್ನದೇ ಇರಲು ಸಾದ್ಯವಿಲ್ಲ. ಅದರಲ್ಲಿ ಲೆಕ್ಕವಿಲ್ಲದಷ್ಟು ಹಬ್ಬ, ಮದುವೆಗಳಲ್ಲಿ ಸಕ್ಕರೆಯಿಂದ ತಯಾರಿಸಿದ ಆಹಾರವನ್ನು ಸವಿಯುವುದು ಸಾಮಾನ್ಯ. ಈ ರೀತಿಯಲ್ಲಿ ಸೇವಿಸುವ ಸಕ್ಕರೆಯಿಂದ ವಿವಿಧ ತರಹದ ಖಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಅಂತವುಗಳ ಬಗ್ಗೆ ಸ್ವಲ್ಪ ಗಮನಹರಿಸಿ. ಅತಿಯಾದರೆ ಅಮೃತವು ವಿಷ ಎಂಬ ಮಾತು ಮರೆಯಬೇಡಿ.

ನೀವು ಪ್ರತಿನಿತ್ಯ ಹೆಚ್ಚು ಸಕ್ಕರೆ ಅಂಶವಿರುವ ಆಹಾರಗಳನ್ನು ಸೇವಿಸಿ, ಯಾವುದೇ ವ್ಯಾಯಾಮ ಮಾಡದೇ ಇದ್ದರೆ ಆರೋಗ್ಯದಲ್ಲಿ ಹಾನಿಯುಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಏಕೆಂದರೆ ದೇಹದಲ್ಲಿ ಸಕ್ಕರೆ ಮಟ್ಟವು ಹೆಚ್ಚುವುದರಿಂದ ನಿಮ್ಮ ಶಕ್ತಿ- ಸಾಮರ್ಥ್ಯ ಕುಂಠಿತವಾಗುತ್ತದೆ. ಇದರಿಂದ ದೇಹ ದಣಿವಿನ ಸಮಸ್ಯೆಯನ್ನು ಎದುರಿಸುತ್ತದೆ.

ಸಕ್ಕರೆ ಸೇವನೆಯಿಂದ ಬರುವ ಸಮಸ್ಯೆಗಳು?

ಸಕ್ಕರೆ ಅಂಶವಿರುವ ಆಹಾರಗಳನ್ನು ಹೆಚ್ಚೆಚ್ಚು ಸೇವಿಸುದರಿಂದ ದೇಹದ ಟೇಸ್ಟ್​ ಬಡ್ಸ್​ ಸೆಲ್​ಗಳು ಸಾಯುತ್ತದೆ. ಕಾಲಕ್ರಮೇಣ ಇದು ಇಂದ್ರೀಯಗಳ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಮಧುಮೇಹ ರೋಗಕ್ಕೆ ಒಳಗಾಗುತ್ತೀರಿ. ಮಿತಿಮೀರಿದ ಸಕ್ಕರೆ ಸೇವನೆಯು ನಮ್ಮ ದೇಹದ ತೂಕವನ್ನು ಹೆಚ್ಚಿಸುತ್ತದೆ. ಸಕ್ಕರೆಯಲ್ಲಿ ಪ್ರೋಟೀನ್ ಅಥವಾ ಫೈಬರ್ ಅಂಶಗಳಿರುವುದಿಲ್ಲ. ಇದರಲ್ಲಿ ಕ್ಯಾಲೋರಿ ಅಂಶ ಹೆಚ್ಚಾಗಿರುವುದರಿಂದ ಸ್ಥೂಲಕಾಯತೆ ಸಮಸ್ಯೆಯನ್ನು ತಂದೊಡ್ಡುತ್ತದೆ. ದೇಹದಲ್ಲಿರುವ ಇನ್ಸುಲಿನ್ ಹಾರ್ಮೋನ್​ನ್ನು ಸಕ್ಕರೆ ಉತ್ತೇಜಿಸುವುದರಿಂದ ದೇಹ ತೂಕ ಬಹುಬೇಗನೆ ಹೆಚ್ಚಾಗುತ್ತದೆ. ಅಲ್ಲದೆ ಇದು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಸಕ್ಕರೆ ಸೇವನೆಯಿಂದ ಚರ್ಮ ಸುಕ್ಕುಗಟ್ಟುವುದು ಮತ್ತು ಡ್ರೈ ಸ್ಕಿನ್​ ಸಮಸ್ಯೆ. ಹೆಚ್ಚಾಗಿ ಕಾಡುತ್ತೆ.

ಸಕ್ಕರೆ ಖಾಯಿಲೆಯಿಂದ ಆಗುವ ಪರಿಣಾಮಗಳು:

ರಕ್ತದಲ್ಲಿ ಸಕ್ಕರೆ ಅಂಶವು ಹೆಚ್ಚಾಗುವುದರಿಂದ ದೇಹದ ಇಮ್ಯುನಿಟಿ ಮೇಲೆ ಪ್ರಭಾವ ಬೀರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡಿ ದೇಹ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ. ಇದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ತಲೆದೂರುತ್ತದೆ. ಸಕ್ಕರೆ ಅಂಶ ದೇಹ ಸೇರುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟವು ಹೆಚ್ಚುತ್ತದೆ. ಇದರಿಂದ ಹಸಿವು ಕೂಡ ಹೆಚ್ಚಾಗುತ್ತದೆ. ಆದರೆ ನಾವು ಆಹಾರ ಸೇವಿಸಿದರೂ, ನಮ್ಮ ಮನಸ್ಸಿನಲ್ಲಿ ಆಹಾರ ಸೇವಿಸಿದ ತೃಪ್ತಿ ಇರುವುದಿಲ್ಲ. ಅತಿಯಾದ ಸಕ್ಕರೆ ಸೇವನೆಯಿಂದ ನಮ್ಮ ಚರ್ಮದ ಜೀವಕೋಶಗಳು ನಿರ್ಜೀವವಾಗುತ್ತದೆ. ಇದರಿಂದ ಚರ್ಮವು ಡ್ರೈ ಸ್ಕಿನ್ ಸಮಸ್ಯೆ ಮತ್ತು ಶೀಘ್ರ ಸುಕ್ಕುಗಟ್ಟುವ ತೊಂದರೆಗೆ ಒಳಗಾಗುತ್ತದೆ.

ಖಾಯಿಲೆಗೆ ಎಚ್ಚರಿಕೆ ವಹಿಸುವುದು ಮುಖ್ಯ:

ಕೆಲಸ ಕಾರ್ಯಗಳನ್ನು ಮಾಡಿ ಉಂಟಾಗುವ ಆಯಾಸಕ್ಕೂ, ಶೀಘ್ರದಲ್ಲೇ ದಣಿಯುವುದಕ್ಕೂ ವ್ಯತ್ಯಾಸವಿದೆ. ಅಂದರೆ ನೀವು ಬಹುಬೇಗನೆ ಆಯಾಸಗೊಳ್ಳುತ್ತಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ. ನಿಮ್ಮ ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಿದ್ದರೆ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹೀಗಾಗಿ ನಾವು ಆಹಾರ ಕಡೆ ವಿಶೇಷ ಗಮನ ನೀಡಬೇಕಾಗುತ್ತದೆ. ಇದರಿಂದ ಸಕ್ಕಯಿಂದ ಬರುವ ಸಮಸ್ಯೆಗಳನ್ನು ಹಿಡಿತದಲ್ಲಿಡಲು ಸಾಧ್ಯವಾಗುತ್ತೆ.