ಎಗ್ ಪಲಾವ್ ಮಾಡೋದನ್ನ ಹೇಳಿಕೊಡ್ತೀವಿ, ರುಚಿಗೂ ಚೆನ್ನ ಪೌಷ್ಟಿಕಾಂಶಗಳಿಗೂ ಚೆನ್ನ!!

0
2108

ಪ್ರತಿದಿನವೂ ಒಂದೇ ತರಹದ ಅಡುಗೆಯನ್ನು ತಿಂದು ತಿಂದು ಬೇಜಾರ್ ಆಗಿರುತ್ತೆ ಆದಕಾರಣ ಹೊಸ ರುಚಿಕೊಡುವ ಆಹಾರ ಸಿಕ್ರೆ ಅದರ ರುಚಿನೇ ಬೇರೆಯಿರುತ್ತೆ. ಅಂತಹ ಸುಲಭವಾದ ಅಡುಗೆ ಅಂದ್ರೆ ಎಗ್ ಪಲಾವ್. ಈ ಎಗ್ ನಲ್ಲಿ ಮಾಡಿದ ಪದಾರ್ಥಗಳು ಅಂದ್ರೆ ಯಾರಿಗೆ ಇಷ್ಟವಾಗೋದಿಲ್ಲ ಹೇಳಿ..? ಯಾಕೆಂದರೆ ತಿನ್ನಲು ಎಷ್ಟು ರುಚಿ ಇರುತೋ ಅಷ್ಟೇ ಆರೋಗ್ಯಕೂ ಒಳ್ಳೆಯದು. ಮೊಟ್ಟೆಯಲ್ಲಿ ನೂರಾರು ವಿಧದ ರುಚಿ ರುಚಿಯಾದ ಆಹಾರವನ್ನು ತಯಾರಿಸಬಹುದು. ಅದ್ರಲಿ ಮೊಟ್ಟೆ ಪಲಾವ್ ಅಂತು ಸೂಪರ್ ಇದನ್ನು ಮೊದಲ ಸಲ ಅಡುಗೆ ಮಾಡುವರು ಕೊಡ ಸುಲಭವಾಗಿ ತಯಾರಿಸಿಕೊಳ್ಳಬಹುದು. ಅಷ್ಟೊಂದು ಸುಲಭದ ರುಚಿಯಾಗಿದೆ ಮತ್ತೆ ಇದನ್ನು ಹೇಗೆ ತಯಾರಿಸುವುದು ಅಂತ ಇಲ್ಲಿದೆ ನೋಡಿ.

Also read: ಕಡಿಮೆ ಸಮಯ ಹಾಗೂ ಸಾಮಗ್ರಿಗಳನ್ನು ಬಳಸಿ ರುಚಿಕರವಾದ ಎಗ್‌‌ ಬುರ್ಜಿ ಮಾಡುವ ವಿಧಾನ…!!

ತಯಾರಿಸಲು ಬೇಕಾದ ಸಮಯ ಕೇವಲ 15 ನಿಮಿಷಗಳು
ಬೇಕಾದ ಪದಾರ್ಥಗಳು :

1.. ಅನ್ನ – 2 ರಿಂದ 4 ಸ್ಪೂನ್
2. ಎರಡು ಮೊಟ್ಟೆ
3. ಕತ್ತರಿಸಿದ ಹಸಿ ಮೆಣಸಿನಕಾಯಿ
4. ಅವರೆಕಾಳು ಇದ್ದರೆ ಸ್ವಲ್ಪ ಹಾಕಿ
5. ಅರ್ಧ ಸ್ಪೂನ್ ಅರಿಶಿನ ಪುಡಿ
6. ಒಂದು ಟಿ ಚಮಚ ಖಾರದ ಪುಡಿ
7. ಒಂದು ಟಿ ಚಮಚ ಕರಿ ಮೆಣಸಿನ ಪುಡಿ
8. ಒಂದು ಟಿ ಚಮಚ ಗರಂ ಮಸಾಲ ಪುಡಿ
9. ಕತ್ತರಿಸಿದ ಎರಡು ಈರುಳ್ಳಿ
10. ಕತ್ತರಿಸಿದ ಒಂದು ಬೆಳ್ಳುಳ್ಳಿ
11. ಕತ್ತರಿಸಿದ ಎರಡು ಟೊಮೇಟೊ
12. ಒಂದು ಟಿ ಚಮಚ ಎಳ್ಳಿನ ಪುಡಿ
13. ರುಚಿಗೆ ತಕ್ಕಷ್ಟು ಉಪ್ಪು

Also read: ಮೊಟ್ಟೆ ಪ್ರಿಯರಿಗಾಗಿ ಬಗೆ-ಬಗೆಯ ರುಚಿಯಲ್ಲಿ ತಯಾರಿಸಬಹುದು ಸ್ಪೆಷಲ್ ಎಗ್ ರೆಸಿಪಿ..!!

ತಯಾರಿಸುವ ವಿಧಾನ :

ಬಾಣಲೆಯ ಮೇಲೆ ಎಣ್ಣೆಯನ್ನು ಹಾಕಿ, ಅದರಲ್ಲಿ ಈರುಳ್ಳಿ ಹಾಕಿ ಕಂದುಬಣ್ಣ ಬರುವವರೆಗೆ ಹುರಿಯಬೇಕು.
ನಂತರ ಕತ್ತರಿಸಿದ ಬೆಳ್ಳುಳ್ಳಿಗಳನ್ನು ಸೇರಿಸಿ, ಕೆಲವು ಕ್ಷಣಗಳವರೆಗೆ ಹುರಿಯಬೇಕು.
ಮೊಟ್ಟೆಗಳನ್ನು ಒಡೆದು, ಬಾಣಲೆಗೆ ಹಾಕಿ. ಮೊಟ್ಟೆಗಳನ್ನು ಚೆನ್ನಾಗಿ ಮಿಶ್ರಣ ಮಾಡುತ್ತ ಬೇಯಿಸಿ.
ಈಗ ಉಪ್ಪು, ಕರಿ ಮೆಣಸು, ಅರಿಶಿನ ಪುಡಿ, ಖಾರದ ಪುಡಿ, ಹಸಿ ಮೆಣಸಿನ ಕಾಯಿ, ಟೊಮೇಟೊಗಳನ್ನೆಲ್ಲಾ ಹಾಕಿ 3-4 ನಿಮಿಷಗಳ ಕಾಲ ಬೇಯಿಸಿ.
ಈಗ ಈ ಮಿಶ್ರಣಕ್ಕೆ ಅನ್ನವನ್ನು ಹಾಕಿ ಚೆನ್ನಾಗಿ ಬೆರೆಸಿ. ನಂತರ ಗರಂ ಮಸಾಲ ಪುಡಿಯನ್ನು ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿ. ಇದೆಲ್ಲ ಮುಗಿದ ಮೇಲೆ, ಒಲೆಯನ್ನು ಆರಿಸಿ.
ನಂತರ ಪಲಾವ್ ಮೇಲೆ ಎಳ್ಳು ಪುಡಿಯನ್ನು ಹಾಕಿ.
ಈಗ ನೋಡಿ ರುಚಿ ರುಚಿಯಾದ ಮೊಟ್ಟೆ ಪುಲಾವ್ ನಿಮ್ಮ ಮುಂದೆ ಸಿದ್ಧವಾಗಿರುತ್ತದೆ. ಇದನ್ನು ಸಾರಿನ ಜೊತೆಗೆ ಅಥವಾ ಸಾರಿಲ್ಲದೆ ಬಿಸಿ ಬಿಸಿಯಾಗಿರುವಾಗಲೆ ತಿಂದು ನೋಡಿ.

Also read: ಟೇಸ್ಟಿ ಎಗ್ ಬಿರಿಯಾನಿ ತಯಾರಿಸುವ ವಿಧಾನ

ಎಗ್ ಪಲಾವ್ ನಿಂದ ಆರೋಗ್ಯಕೆ ಸಿಗುವ ಪೋಷಕಾಂಶಗಳು:

ಇದರಲ್ಲಿ ಕ್ಯಾಲೊರಿಗಳ ಪ್ರಮಾಣ ಅಧಿಕವಾಗಿರುವುದಿಲ್ಲ. ಕಬ್ಬಿಣಾಂಶ, ಪ್ರೋಟೀನ್ ಮತ್ತು ಇನ್ನಿತರ ಪೋಷಕಾಂಶಗಳನ್ನು ಹೊಂದಿರುವ ಈ ಖಾದ್ಯವು ಊಟದ ಸಮಯದಲ್ಲಿ ಸೇವಿಸಲು ಹೇಳಿ ಮಾಡಿಸಿದಂತಿರುತ್ತದೆ. ಒಂದು ಪ್ಲೇಟ್ ರುಚಿಕರ ಎಗ್ ಪುಲಾವ್‍ನಲ್ಲಿ ವಿಟಮಿನ್ ಎ ಮತ್ತು ಸಿ ಗಳು ಸಮೃದ್ಧವಾಗಿರುತ್ತದೆ. ಸಲಹೆಗಳು