ಮೊಟ್ಟೆ ಪ್ರಿಯರಿಗಾಗಿ ಬಗೆ-ಬಗೆಯ ರುಚಿಯಲ್ಲಿ ತಯಾರಿಸಬಹುದು ಸ್ಪೆಷಲ್ ಎಗ್ ರೆಸಿಪಿ..!!

0
2633

ಮೊಟ್ಟೆ ನಾವು ತಿನ್ನುವ ಆಹಾರಗಳಲ್ಲಿ ಸೂಪರ್ ಫುಡ್ ಎಂಬ ಖ್ಯಾತಿಗೆ ಪಾತ್ರವಾಗಿದೆ. ಅತಿ ಹೆಚ್ಚು ಪ್ರಮಾಣದ ಪೋಷಕಾಂಶ ಹಾಗೂ ವಿಟಮಿನ್ ಗಳು ಸಿಗುತ್ತವೆ. ಹೀಗಾಗಿ ಪ್ರತಿ ನಿತ್ಯ ಬೇಯಿಸಿದ ಮೊಟ್ಟೆ ತಿಂದರೆ ಆರೋಗ್ಯಕ್ಕೆ ಬಹಳ ಉತ್ತಮ. ಮೊಟ್ಟೆ ಹಲವು ಪೋಷಕಾಂಶಗಳ ಆಗರ. ಬಗೆ ಬಗೆಯ ರುಚಿಯಲ್ಲಿ ತಯಾರಿಸಬಹುದು ಸ್ಪೆಷಲ್ ಎಗ್ ರೆಸಿಪಿಗಳು.

ಎಗ್‌ ಪಕೋಡ

ಮೊಟ್ಟೆ ಪ್ರಿಯರಿಗೆ ಇಷ್ಟವಾಗುವ ಪಕೋಡವಿದು. ಇದನ್ನು ಬೇಯಿಸಿದ ಮೊಟ್ಟೆ, ಕಡ್ಲೆ ಹಿಟ್ಟು, ಖಾರ ಪು ಡಿ, ಆಮ್‌ಚೂರ್‌ ಪುಡಿ ಹಾಕಿ ತಯಾರಿಸುತ್ತಾರೆ. ಬಿಸಿ ಬಿಸಿಯಾದ ಎಗ್‌ ಪಕೋಡ ಮಳೆಗಾಲದ ಸಂಜೆಗೆ ಹೇಳಿ ಮಾಡಿಸಿದ ತಿನಿಸಾಗಿದೆ.

ಎಗ್ ಬರ್ಗರ್‌

ಬೇಕಾಗುವ ಸಾಮಾಗ್ರಿಗಳು

4 ಮೊಟ್ಟೆ, 1 ಕ್ಯಾರೆಟ್‌ (ಕತ್ತರಿಸಿದ್ದು), 1 ಸೌತೆಕಾಯಿ(ಸಿಪ್ಪೆ ಸುಲಿದಿದ್ದು), 1/4 ಚಮಚ ಕಾಳು ಮೆಣಸಿನ ಪುಡಿ, ಚಿಟಿಕೆಯಷ್ಟು, ಉಪ್ಪು, 4 ಬರ್ಗರ್‌ ಬನ್‌, 2 ಬೇಯಿಸಿದ ಆಲೂಗಡ್ಡೆ (ಮ್ಯಾಶ್‌ ಮಾಡಿ), ಈರುಳ್ಳಿ 2, 1 ಟೊಮೆಟೊ, 2 ಚಮಚ ಬೆಣ್ಣೆ, 4 ಚಮಚ ಸನ್ ಫ್ಲವರ್‌ ಎಣ್ಣೆ.

ಮಾಡುವ ವಿಧಾನ:

ಮೊಟ್ಟೆ, ರುಚಿಗೆ ತಕ್ಕ ಉಪ್ಪು, ಕಾಳು ಮೆಣಸಿನ ಪುಡಿ ಹಾಕಿ ಚೆನ್ನಾಗಿ ಕದಡಿ. ಪ್ಯಾನ್‌ನಲ್ಲಿ ಒಂದು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ, ಅದಕ್ಕೆ ಕತ್ತರಿಸಿದ ಈರುಳ್ಳಿ ಹಾಕಿ ಫ್ರೈ ಮಾಡಿ. ಮ್ಯಾಶ್‌ ಮಾಡಿದ ಆಲೂಗಡ್ಡೆ ಜತೆಗೆ ಮಿಕ್ಸ್ ಮಾಡಿದ ಮೊಟ್ಟೆ ಹಾಕಿ. ಈಗ ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ, ಈಗ ಆಲೂ ಮತ್ತು ಮೊಟ್ಟೆ ಮಿಕ್ಸ್ ಹಾಕಿ ಆಮ್ಲೆಟ್‌ ಮಾಡಿ. ಇದೇ ಸಮಯದಲ್ಲಿ ಮತ್ತೊಂದು ಪ್ಯಾನ್‌ಗೆ ಬೆಣ್ಣೆ ಹಾಕಿ ಬನ್‌ನ ಎರಡೂ ಬದಿ 30 ಸೆಕೆಂಡ್‌ವರೆಗೆ ಬಿಸಿ ಮಾಡಿ.ಈಗ ಬನ್‌ನಲ್ಲಿ ಆಮ್ಲೆಟ್‌ ಇಟ್ಟು, ಸೌತೆಕಾಯಿ, ಟೊಮೆಟೊ, ಈರುಳ್ಳಿ , ಕ್ಯಾರೆಟ್‌ ಇಟ್ಟು ಮತ್ತೊಂದು ಬನ್‌ನಿಂದ ಕವರ್‌ ಮಾಡಿ, ಕೆಚಪ್‌ನೊಂದಿಗೆ ಸರ್ವ್ ಮಾಡಿ.

ಎಗ್ ಟೋಸ್ಟ್

ಬೇಕಾಗುವ ಸಾಮಾಗ್ರಿಗಳು

ಹಾಲು, ಪುಡಿ ಸಕ್ಕರೆ, ಮೊಟ್ಟೆ, ಬ್ರೆಡ್ ಸ್ಲೈಸ್, ತುಪ್ಪ

ಮಾಡುವ ವಿಧಾನ:

ಮೊದಲಿಗೆ ಮೊಟ್ಟೆಯನ್ನು ಒಂದು ಬೌಲ್ ಬಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ . ಇದಕ್ಕೆ ಹಾಲು ಹಾಗೂ ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ. ಇದರಲ್ಲಿ ಬ್ರೆಡ್ ಸ್ಲೈಸ್ ಗಳನ್ನು ಅದ್ದಿ, ತವಾದ ಮೇಲೆ ತುಪ್ಪ ಹಾಕಿ ಟೋಸ್ಟ್ ಮಾಡಿಕೊಳ್ಳಿ. ಎಗ್ ಟೋಸ್ಟ್ ಮಾಡಿದ ಮೇಲೆ ಏನ್ ಮಾಡಬೇಕು ಅಂತ ಗೊತ್ತುತಾನೆ. ನಿಮ್ಮ ಹೊಟ್ಟೆಗೆ ಸೇವಿಸಿ.

ಎಗ್ ರೋಲ್

ಬೇಕಾಗುವ ಸಾಮಾಗ್ರಿ

1 ಈರುಳ್ಳಿ ಹಾಗೂ ಟೊಮಾಟೋ ಸಣ್ಣದಾಗಿ ಹೆಚ್ಚಿದ್ದು, 2 ಸಣ್ಣದಾಗಿ ಹಚ್ಚಿದ ಹಸಿ ಮೆಣಸಿನಕಾಯಿ, 2 ಟೇಬಲ್ ಸ್ಪೂನ್ ನಷ್ಟು ಎಣ್ಣೆ, 4 ಎಗ್, ರೋಟಿ, ಅರ್ಧ ಟೀ ಸ್ಪೂನ್ ನಷ್ಟು ನಿಂಬೆ ರಸ, ಟೊಮಾಟೊ ಸಾಸ್

ಮಾಡುವ ವಿಧಾನ

ಮೊದಲಿಗೆ ಒಂದು ಬೌಲ್ ನಲ್ಲಿ ಎಗ್ ಜತೆಗೆ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಒಂದು ಪಾತ್ರೆಯಲ್ಲಿ ಎಣ್ಣೆ ಕಾಯಲು ಬಿಡಿ. ಇದಕ್ಕೆ ಎಗ್ ಹಾಕಿ ಆಮ್ಲೆಟ್ ರೀತಿಯಲ್ಲಿ ಮಾಡಿಕೊಳ್ಳಿ. ಆಮ್ಲೆಟ್ ಅರ್ಧ ಬೆಂದ ಬಳಿಕ ನಂತರ ಅದರ ಮೇಲೆ ರೊಟಿ ಹಾಕಿ ಒತ್ತಿರಿ. ಆಮ್ಲೆಟ್ ಬೆಂದ ನಂತರ ಗ್ಯಾಸ್ ಆಫ್ ಮಾಡಿ ಇದಕ್ಕೆ ಈರುಳ್ಳಿ, ಹಸಿ ಮೆಣಸಿನಕಾಯಿ, ಟೊಮೆಟೊ ಸಾಸ್ ಮತ್ತು ಸ್ವಲ್ಪ ನಿಂಬೆ ರಸವನ್ನು ಆಮ್ಲೆಟ್ ಮಧ್ಯದಲ್ಲಿ ಹಾಕಿ ರೋಲ್ ಮಾಡಿ.