ಬೇಯಿಸುವಾಗ ಮೊಟ್ಟೆ ಒಡೆಯಬಾರದು ಅಂದ್ರೆ ಏನು ಮಾಡಬೇಕು…?

0
6040

ಮೊಟ್ಟೆ ಬೇಯಿಸುವಾಗ ಒಂದಲ್ಲ ಒಂದು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮೊಟ್ಟೆ ಒಡೆದು ಹೋಗುವುದು, ಸರಿಯಾಗಿ ಬೆಂದಿರದೇ ಇರುವುದು ಇವೆಲ್ಲಾ ಸರ್ವೇ ಸಾಮಾನ್ಯ. ಹಾಗೇ ಆಗಬಾರದು ಎಂಬುದಕ್ಕೆ ನಾವು ನಿಮಗೆ ಈ ಟಿಪ್ಸ್ ಮೂಲಕ ಸಹಾಯ ಮಾಡುತ್ತೇವೆ. ಇವುಗಳನ್ನು ಅನುಸರಿಸಿ ಮೊಟ್ಟೆ ಒಡೆಯದಂತೆ ಬೇಯಿಸಿ.

ಮೊಟ್ಟೆಯನ್ನು ಬೇಯಿಸುವಾಗ ಅದಕ್ಕೆ ಒಂದು ಚಮಚ ಉಪ್ಪು ಹಾಕಿ, ಆವಾಗ ಮೊಟ್ಟೆ ಒಡೆದು ಹೋಗುವುದಿಲ್ಲ.

ಮೊಟ್ಟೆಯು ಬೆಂದಿದೆಯೇ ಇಲ್ಲವೇ ಎಂದು ತಿಳಿಯಲು, ಮೊದಲಿಗೆ ಅದನ್ನು ನೀವು ನಾಲ್ಕು ಇಂಚು ನೀರಿರುವ ಪಾತ್ರೆಯಲ್ಲಿ ಹಾಕಿ. ಮೊಟ್ಟೆಯು ಪೂರ್ತಿಯಾಗಿ ಮುಳುಗಿದರೆ ಅದು ಸರಿಯಾಗಿ ಬೆಂದಿದೆ ಎಂದು ಅರ್ಥ ಹಾಗೂ ಅದು ಅರ್ಧ ಮೇಲೆ ನಿಂತರೆ ಸರಿಯಾಗಿ ಬೆಂದಿಲ್ಲವೆಂದು ತಿಳಿಯುತ್ತದೆ.

Image result for egg boiling

ಬೇಯಿಸುವ ಮೊದಲು ಮೊಟ್ಟೆಯನ್ನು ರೂಮ್ ಟೆಂಪ್ರೇಚರ್‍ಗೆ ತನ್ನಿ. ಅಂದರೆ ನೀವು ಫ್ರಿಡ್ಜ್‍ನಲ್ಲಿಟ್ಟಿದರೆ ಅದನ್ನು ಕೂಡಲೇ ಬೇಯಿಸಬೇಡಿ. ಬದಲಿಗೆ ಅದನ್ನು ಹೊರ ತೆಗೆದು ತಂಪು ಆರಿದ ನಂತರ ಬೇಯಿಸಿ.

ಫ್ರೆಶ್ ಮೊಟ್ಟೆಗಳ ಬದಲಾಗಿ ಹಳೆಯ ಮೊಟ್ಟೆಗಳನ್ನು ಬಳಸಿ. ಯಾಕೆಂದರೆ ಈ ಮೊಟ್ಟೆಯ ಸಿಪ್ಪೆ ಗಟ್ಟಿಯಾಗಿರುತ್ತದೆ.

ಬೇಯಿಸುವ ಮೊದಲು ಸೇಫ್ಟಿ ಪಿನ್ ಮೂಲಕ ಸಣ್ಣದಾಗಿ ಶೆಲ್ ಮೇಲೆ ಚುಚ್ಚಿ. ಇದರಿಂದ ಮೊಟ್ಟೆ ಒಡೆದು ಹೋಗಲು ಕಾರಣವಾಗುವ ಏರ್ ಬಬಲ್ ಉಂಟಾಗುವುದಿಲ್ಲ.

Image result for egg boiling
ಒಂದು ಬೌಲ್‍ನಲ್ಲಿ ಹಲವಾರು ಮೊಟ್ಟೆಗಳನ್ನು ಹಾಕಬೇಡಿ. ಅದು ಸಾವಾಕಾಶವಾಗಿ ಇರುವಂತೆ ಹಾಕಿ.
ನಂತರ ಅದಕ್ಕೆ ನೀರು ಹಾಕಿ. ಒಂದು ಬೌಲ್‍ನಲ್ಲಿ ಮೂರು ಸೆಂ.ಮೀವರೆಗೆ ನೀರು ಹಾಕಿದರೆ ಉತ್ತಮ.

ಈ ನೀರಿಗೆ ಅರ್ಧ ಚಮಚ ಉಪ್ಪು ಬೆರೆಸಿ. ಇದರಿಂದ ಮೊಟ್ಟೆಯನ್ನು ಸುಲಭವಾಗಿ ಸಿಪ್ಪೆ ತೆಗೆಯಲು ಸಹಾಯವಾಗುತ್ತದೆ. ಅಲ್ಲದೇ ಮೊಟ್ಟೆ ಕ್ರಾಕ್ ಆಗೋದರಿಂದ ಬಚಾವಾಗುತ್ತದೆ.

Image result for egg boiling

ಮೊಟ್ಟೆಯನ್ನು ಯಾವತ್ತೂ ಬಿಸಿ ನೀರಿನ ಪಾಟ್‍ಗೆ ನೇರವಾಗಿ ಹಾಕಬೇಡಿ. ಇದರಿಂದ ಮೊಟ್ಟೆ ಬೇಗನೆ ಒಡೆದು ಹೋಗುತ್ತದೆ.
ಒಂದು ಮೊಟ್ಟೆಗೆ ಸರಿಯಾದಂತೆ ಒಂದು ಚಮಚ ವಿನೇಗರ್ ಹಾಕಿ. ನಂತರ ಮೊಟ್ಟೆಯನ್ನು ಬಿಸಿ ಮಾಡಿ. ಇದರಿಂದ ಮೊಟ್ಟೆಯ ಬಿಳಿ ಭಾಗ ಬೇಗನೆ ಗಟ್ಟಿಯಾಗುತ್ತದೆ ಹಾಗೂ ಒಡೆಯುವುದಿಲ್ಲ.