ಪ್ರಧಾನಿ ಕುರ್ಚಿ ಉಳಿಯುತ್ತೋ ಬಿಡುತ್ತೋ ಗೊತ್ತಿಲ್ಲ; ಒಂದೋ ನಾನು ಜೀವಂತವಾಗಿರಬೇಕು ಇಲ್ಲವೇ ಉಗ್ರರು ಜೀವಂತವಾಗಿರಬೇಕು ನರೇಂದ್ರ ಮೋದಿ..

0
269

ಉಗ್ರರನ್ನು ನಡುಗಿಸಿದ ಮೋದಿಯವರ ಕಟು ನಿರ್ಧಾರಗಳ ಬಗ್ಗೆ ದೇಶಕ್ಕೆ ಅಷ್ಟೇ ಅಲ್ಲದೆ ಇಡಿ ಪ್ರಪಂಚಕ್ಕೆ ತಿಳಿದಿದೆ. ಪುಲ್ವಾಮ ದಾಳಿಯ ಪ್ರತಿಕಾರವಾಗಿ ನಡೆದ ದಾಳಿಯಿಂದ ಪಾಕಿಸ್ತಾನ ನಡುಗಿ ಹೋಗಿದೆ. ಈ ಸರದಿಯಲ್ಲಿ ನಡೆದ ವಾಯುದಾಳಿಯಲ್ಲಿ ಪಾಕಿಸ್ತಾನದಲ್ಲಿ ಸಿಲುಕಿಕೊಂಡ ವಾಯುಸೇನೆಯ ಪೈಲಟ್ ಅಭಿನಂದನ್ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಬೇಕು ಎಂದು ಭಾರತ ಪಾಕಿಸ್ತಾನಕ್ಕೆ ತಾಕಿತ್ತು ಮಾಡಿತ್ತು. ಈ ವಿಷಯದಲ್ಲಿ ಮೋದಿಯವರು ಪಾಕ್-ಗೆ ಯಾವ ರೀತಿಯ ಎಚ್ಚರಿಕೆ ಕೊಟ್ಟಿದರು ಎನ್ನುವುದರ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ ಆದರೆ ಒಂದೇ ದಿನದಲ್ಲಿ ಅಭಿನಂದನ್ ಅವರನ್ನು ಬಿಡುಗಡೆ ಮಾಡಲು ಮೋದಿ ನೀಡಿದ ಎಚ್ಚರಿಕೆ ಏನು ಅಂತ ಅವರೇ ಹೇಳಿಕೊಂಡಿದ್ದಾರೆ.

Also read: ಮೈತ್ರಿ ಸರ್ಕಾರದ ಸಿಎಂ ಪ್ರತಿದಿನ ಅಳುತ್ತಾರೆ, ಕುರ್ಚಿ ಉಳಿಸಿಕೊಳ್ಳಲು ಕಾಂಗ್ರೆಸ್ ಅವರನ್ನೇ ಅಪ್ಪಿಕೊಳ್ಳುತ್ತಾರೆ: ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್..

ಹೌದು ಅಭಿನಂದನ್ ಬಿಡುಗಡೆ ಮಾಡಲು ಪಾಕಿಸ್ತಾನಕ್ಕೆ ಮನಸ್ಸು ಇಲ್ಲದೆ ಇದರು ಮೋದಿ ಎಚ್ಚರಿಕೆಯಿಂದ ಒಂದೇ ದಿನದಲ್ಲಿ ಅಭಿನಂದನ್ ಬಿಡುಗಡೆ ಮಾಡಲಾಯಿತು. ಇದರ ಕುರಿತು ಗುಜರಾತಿನ ಪಠಣ್‍ನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಪೈಲಟ್ ಪಾಕ್ ವಶದಲ್ಲಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿತ್ತು. ಈ ವೇಳೆ ಸರ್ಕಾರ ಸುದ್ದಿಗೋಷ್ಠಿ ನಡೆಸಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆಯನ್ನು ನೀಡಿದೆ ಎಂದು ತಿಳಿಸಿದ ಮೋದಿಯವರು ನನ್ನ ಪ್ರಧಾನಿ ಹುದ್ದೆ ಉಳಿಯುತ್ತದೆಯೋ ಇಲ್ಲವೋ. ಆದರೆ ಭಯೋತ್ಪಾದಕರಿರಬೇಕು ಅಥವಾ ನಾನು ಇರಬೇಕು ಎಂಬುದನ್ನು ನಾನು ನಿರ್ಧರಿಸಿಯಾಗಿದೆ ಎಂದು ಮೋದಿ ಜನತೆಗೆ ತಿಳಿಸಿದ್ದಾರೆ.

ಪಾಕ್ ಗೆ ಮೋದಿ ಎಚ್ಚರಿಕೆ ಏನು?

ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆಯನ್ನು ನೀಡಿ ಒಂದು ವೇಳೆ ನಮ್ಮ ಪೈಲಟ್‍ಗೆ ಏನಾದರೂ ತೊಂದರೆಯಾದಲ್ಲಿ ಆ ನಂತರ ಪರಿಸ್ಥಿತಿ ಹೇಗಿರುತ್ತದೆ ಅಂದರೆ ಇಡೀ ವಿಶ್ವಕ್ಕೆ ಈ ಪರಿಸ್ಥಿತಿಗೆ ಮೋದಿಯೇ ಕಾರಣ ಎಂದು ಹೇಳಬೇಕಾಗುತ್ತದೆ” ಎನ್ನುವ ಕಠಿಣ ಸಂದೇಶವನ್ನು ಪಾಕಿಸ್ತಾನಕ್ಕೆ ರವಾನಿಸಿದ್ದೇವು ಎಂದು ತಿಳಿಸಿದ ಅವರು. ಅಭಿನಂದನ್ ಪಾಕ್ ವಶದಲ್ಲಿದ್ದಾಗ ಮೋದಿ 12 ಕ್ಷಿಪಣಿಗಳನ್ನು ಸಿದ್ಧಗೊಳಿಸಿದ್ದರು. ಎರಡನೇ ದಿನಕ್ಕೇ ಪಾಕಿಸ್ತಾನ ಅಭಿನಂದನ್ ಬಿಡುಗಡೆಯನ್ನು ಘೋಷಿಸಿತ್ತು. ಇಲ್ಲವಾದಲ್ಲಿ ಆ ರಾತ್ರಿ “ರಕ್ತಪಾತದ ರಾತ್ರಿಯಾಗಿರುತ್ತಿತ್ತು” ಎಂದು ಅಮೆರಿಕದ ಹಿರಿಯ ಅಧಿಕಾರಿಗಳಲ್ಲೊಬ್ಬರು ಹೇಳಿದ್ದರು.

Also read: ಬಾಗಲಕೋಟೆ, ಚಿಕ್ಕೋಡಿಯಲ್ಲಿ ಸೇರಿದ್ದ ಜನಸ್ತೋಮ ನೋಡಿ ಮೋದಿ ಫುಲ್ ಖುಷ್; ತಮಗೆ ಅದ ಅನುಭವವನ್ನು ಫೇಸ್ಬುಕ್ ನಲ್ಲಿ ಹಂಚಿಕೊಂಡ ಮೋದಿ..

ಇದನ್ನು ಹೇಳಿದ್ದು ಅಮೆರಿಕ, ಈಗ ಈ ಬಗ್ಗೆ ನಾನೇನು ಹೇಳುವುದಿಲ್ಲ, ಸಮಯ ಬಂದಾಗ ನಾನು ಈ ಬಗ್ಗೆ ಮಾತನಾಡುತ್ತೇನೆ. ಇನ್ನು ಮೋದಿ ಮುಂದೇನು ಮಾಡುತ್ತಾರೆ ಎಂಬ ಬಗ್ಗೆ ಭಯವಾಗುತ್ತಿದೆ ಎಂಬ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿಕೆಗೂ ಮೋದಿ ಪ್ರತಿಕ್ರಿಯೆ ನೀಡಿದ್ದು, ಶರದ್ ಪವಾರ್ ಅವರು ಮೋದಿ ಮುಂದೇನು ಮಾಡುತ್ತಾರೆ ಎಗೊತ್ತಿಲ್ಲ ಎಂದು ಹೇಳುತ್ತಾರೆ. ಅವರಿಗೇ ನಾನೇನು ಮಾಡುತ್ತೇನೆಂಬುದು ಗೊತ್ತಿಲ್ಲ ಎಂದ ಮೇಲೆ ಇಮ್ರಾನ್ ಖಾನ್ ಗೆ ಹೇಗೆ ತಿಳಿಯುತ್ತದೆ ಎಂದು ಮೋದಿ ಹೇಳಿದ್ದಾರೆ.

ಒಂದು ನಾನಿರಬೇಕು ಇಲ್ಲ ಉಗ್ರರಿರಬೇಕು;

Also read: ಮೋದಿ ಮುಖ ಸರಿ ಇಲ್ಲದ್ದಕ್ಕೆ ಪತ್ನಿಯೇ ಮೋದಿಯನ್ನು ಬಿಟ್ಟಿದ್ದಾರೆ; ಅವ್ರ ಮುಖ ನೋಡಿ ವೋಟ್ ಹಾಕಬೇಕೇ : ಕಾಂಗ್ರೆಸ್-ನ ಜಮೀರ್ ಅಹ್ಮದ್; ಇದು ದುರಹಂಕಾರದ ಮಾತು ಅಲ್ಲವೇ??

ರಾಷ್ಟ್ರೀಯ ಭದ್ರತೆಯ ವಿಚಾರವನ್ನು ಪ್ರಸ್ತಾಪಿಸಿದ ಮೋದಿ, ಪ್ರಧಾನಿ ಸೀಟ್ ಇರುತ್ತದೋ ಇಲ್ಲವೋ ಗೊತ್ತಿಲ್ಲ. ನಾನು ಇರುವವರೆಗೂ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ. ಒಂದೋ ನಾನು ಜೀವಂತವಾಗಿರಬೇಕು ಇಲ್ಲವೇ ಉಗ್ರರು ಜೀವಂತವಾಗಿರಬೇಕು. ಈ ನಿರ್ಧಾರವನ್ನು ನಾನು ಈಗಾಗಲೇ ಕೈಗೊಂಡಾಗಿದೆ ಎಂದು ತಿಳಿಸಿದ ಅವರು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಶತಃಸಿದ್ಧ. ಆದರೆ ಗುಜರಾತಿನಲ್ಲಿ 26 ಸ್ಥಾನ ಗೆಲ್ಲದೇ ಇದ್ದಲ್ಲಿ ಮೇ 23ರ ಟಿವಿ ವಾಹಿನಿಗಳಲ್ಲಿ ಈ ವಿಚಾರದ ಬಗ್ಗೆ ಮುಖ್ಯ ಚರ್ಚೆಯಾಗುತ್ತದೆ, ಆದಕಾರಣ ಈ ರಾಜ್ಯದ ಮಣ್ಣಿನ ಮಗನಾದ ನನ್ನನ್ನು ರಕ್ಷಿಸುವ ಕರ್ತವ್ಯ ನಿಮ್ಮ ಮೇಲಿದೆ. ಹೀಗಾಗಿ ಎಲ್ಲ 26 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿಕೊಡಬೇಕೆಂದು ಮನವಿ ಮಾಡಿಕೊಂಡರು.