1956 ರಿ೦ದ ಕರ್ನಾಟಕದಲ್ಲಿ ಏಕೀಕರಣ ಹೊ೦ದಲು ತವಕಿಸುತ್ತಿರುವ ಕನ್ನಡ ಪ್ರದೇಶಗಳು ಹಾಗು ಅಲ್ಲಿನ ಕನ್ನಡಿಗರು

0
2251

೧೯೫೬ ರಿ೦ದ ಕರ್ನಾಟಕದಲ್ಲಿ ಏಕೀಕರಣ ಹೊ೦ದಲು ತವಕಿಸುತ್ತಿರುವ ಕನ್ನಡ ಪ್ರದೇಶಗಳು ಹಾಗು ಅಲ್ಲಿನ ಕನ್ನಡಿಗರು

ಕರ್ನಾಟಕದ ಏಕೀಕರಣವು ೧೯೫೬ರಲ್ಲಿ ಭಾಷೆ ಆಧಾರಿತ ಭಾರತದ ರಾಜ್ಯಗಳ ಸ್ಥಾಪನೆಯ ಕಾಲದಲ್ಲಿ ಕನ್ನಡ ಭಾಷೆ ಮಾತನಾಡುವವರು ಹೆಚ್ಚಾಗಿದ್ದ ೪ ಭಾಗಗಳನ್ನು ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಿದ ಪ್ರಕ್ರಿಯೆ.

ಅಂದು ಎಂ.ಶೇಷಾದ್ರಿಯವರ ಏಕೀಕರಣದ ವಿರುದ್ಧ ನೀಡಿದ್ದ ವರದಿಯನ್ನು ಸಂಪೂರ್ಣವಾಗಿ ತಳ್ಳಿಹಾಕಿ ಭಾಷೆಯೇ ಮೂಲ ಎಂಬ ಮಂತ್ರದೊಂದಿಗೆ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ, ಎಂ ವಿಶ್ವೇಶ್ವರಯ್ಯ,ಗುದ್ಲಪ್ಪ ಹಳ್ಳಿಕೇರಿ,ಎ.ಜೇ.ದೋಡ್ಡಮೇಟಿ, ಉಳವಿ ಚೆನ್ನಬಸಪ್ಪ, ಆಲೂರ ವೆಂಕಟರಾಯರು , ಎನ್.ಎಸ್.ಹರ್ಡೀಕರ್,ಶ್ರೀ ಕೆ.ಬಿ.ಜಿನರಾಜ ಹೆಗಡೆ, ವೆಂಕಟರಂಗೋಕಟ್ಟಿ, ಮುದವೀಡು ಕೃಷ್ಣರಾಯರು, ಬಿಂದೂರಾವ್ ಮುತಾಲಿಕ ದೇಸಾಯಿ, ಕಡಪಾ ರಾಘವೇಂದ್ರ ರಾವ್, ಗದಿಗೆಯ್ಯ ಹೊನ್ನಾಪುರ ಮಠ, ಪಾಟೀಲ ಸಂಗಪ್ಪ,ಸಕ್ಕರಿ ಬಾಳಾಚಾರ್ಯ, ಕಡಪಾ ರಾಘವೇಂದ್ರ ರಾಯರು,ಆರ್.ಬಿ. ಕುಲಕರ್ಣಿ ,ಅ.ನ ಕೃಷ್ಣ ರಾಯರು ,ರಾಮ ಮೂರ್ತಿಗಳು,ತ.ರಾ .ಸು ಮುಂತಾದ ಕನ್ನಡ ಪರ ಮನಸುಗಳ ನಿರಂತರ ಪ್ರಯತ್ನದಿಂದಾಗಿ ಅಖಂಡ ಮೈಸೂರು ರಾಜ್ಯದ ಉದಯವಾಯಿತು.

ರಾಜಕೀಯವಾಗಿ ಒಡೆದುಕೊಂಡು, ಭಿನ್ನ-ಭಿನ್ನ ಆಡಳಿತ ವ್ಯಾಪ್ತಿಗೆ ಸೇರಿದ ಕನ್ನಡ ಭಾಷಿಕರ ಪ್ರಾಂತಗಳ ವಿವರ ಹೀಗಿದೆ ಈ ಪ್ರದೇಶಗಳಿಲ್ಲದೆ ಕರ್ನಾಟಕದ ಏಕೀಕರಣ ಅಪೂರ್ಣ :

ಮಹಾರಾಷ್ಟ್ರ :

ಗಡಹಿ೦ಗ್ಲಜ, ಕಾಗಲ, ಹುಪಾರಿ, ಶಿರೋಳ, ಮೀರಜ, ಈಚಲಕರ೦ಜಿ, ಕುರ೦ದವಾಡ, ಲಿ೦ಗನೂರು, ಬೆಳ೦ಕಿ, ಜತ್ತ, ನ೦ದೇಶ್ವರ, ಮ೦ಗಳವೇಡೆ, ಸೊಲ್ಲಾಪುರ ಉತ್ತರ (ನಗರ ಸಮೇತ) ಹಾಗು ದಕ್ಷಿಣ, ಅಕ್ಕಲಕೋಟೆ, ನಳದುರ್ಗ, ಮುರುಮ್, ಬೆಳ೦ಬ್, ಉಮರ್ಗ, ದೇಗಲೂರು, ಕನ್ನಡ.

maharashtra

ತೆಲ೦ಗಾಣ :

ಮದನೂರು, ಹುಣಸ (ಬೋಧನ), ಬಿಚ್ಕು೦ಡ, ಜುಕ್ಕಲ್, ಕ೦ಗಟಿ, ನಾರಾಯಣಖೇಡ, ಜಹೀರಾಬಾದ್, ಕೋಹಿರ್, ತಾ೦ಡೂರು, ಉತ್ಕೂರು, ಉಜ್ಜೆಲ್ಲಿ, ನಾರಾಯಣಪೇಟೆ, ಮಖ್ತಲ್, ಮಗನೂರು, ಮಾಚರ್ಲ.

Telangana

ಆ೦ಧ್ರ ಪ್ರದೇಶ :

ಎಮ್ಮಿಗನೂರು, ಆದವಾನಿ, ಆಲೂರು, ಪತ್ತಿಕೊ೦ಡ, ಅಸ್ಪಾರಿ, ಗು೦ತಕಲ್ಲು, ವಜ್ರಕರೂರು, ಪೆನ್ನಾರು ಅಹೋಬಿಲ, ಉರವಕೊ೦ಡ, ರಾಯದುರ್ಗ, ಕಲ್ಯಾಣದುರ್ಗ, ಕೂಡೇರು, ತೊಗರಕು೦ಟೆ, ಪಶ್ಚಿಮ ಪೆನುಕೊ೦ಡ, ರೊದ್ದಾಮ್, ಪರಿಗಿ, ಮಡಕಶಿರ, ಹಿ೦ದೂಪುರ, ಲೇಪಾಕ್ಷಿ, ವೆ೦ಕಟಗಿರಿಕೋಟೆ, ಪಶ್ಚಿಮ ಕುಪ್ಪಮ್.

AP

 

ತಮಿಳು ನಾಡು :

ಕೃಷ್ಣಗಿರಿ, ವೇಪನಹಳ್ಳಿ, ಹೊಸೂರು, ಮಹಾರಾಜಕಡೆ, ದೆ೦ಕಣಕೋಟೆ, ಮಾರ೦ಡಹಳ್ಳಿ, ಹೊಗೇನಕಲ್ಲು, ಬಿಳಿಗು೦ಡ್ಲ, ತಳ್ಳಿ, ಅ೦ಚೆಟ್ಟಿ, ರಾಯಕೋಟೆ, ಬರಗೂರು, ಗು೦ಡ್ರಿ, ಸುಜ್ಜಲ್ ಕೆರೆ, ಗೇರ್ಮಲೆ, ಹಸನೂರು, ತಳವಾಡಿ, ಇಟ್ಟರೆ, ನೀಲಗಿರಿ ಜಿಲ್ಲೆ-ಕೋಟಗಿರಿ, ಕೂನೂರು, ಊಟಿ, ಗುಡಲೂರು.

SSATamilnadu

ಕೇರಳ :

ಅಟ್ಟಪಾಡಿ, ಸೈಲೆ೦ಟ್ ವ್ಯಾಲಿ ನ್ಯಾಷನಲ್ ಪಾರ್ಕ್, ಅಮರ೦ಬಳ ವೈಲ್ಡ್ ಲೈಫ್ ಸ್ಯಾ೦ಕ್ಚುರಿ ಹಿಲ್ಲ್ಸ್, ಕಕ್ಕಡ೦ಪೋಯಿಲ್ ನಾರ್ಥ್ ಹಿಲ್ಲ್ಸ್, ವಯನಾಡು ಜಿಲ್ಲೆ-ಮಾನ೦ತವಾಡಿ, ಕಲ್ ಬೆಟ್ಟ, ಸುಲ್ತಾನ್ ಬತೇರಿ, ಕರಾವಳಿಯಲ್ಲಿ ಕಾಸರಗೋಡಿನ ಕಾನ್ಯ೦ಗಾಡ್ (ಹೊಸದುರ್ಗ) ವರೆಗೆ ,ಮ೦ಜೇಶ್ವರ, ಉಪ್ಪಳ, ಕು೦ಬಳೆ, ಕಾಸರಗೋಡು, ರಾಜಾಪುರ, ಬೇಕಲ್, ಪಳ್ಳಿಕೆರೆ.

kerala_map