ಸುಮಲತಾ ಬೆಂಬಲಕ್ಕೆ ನಿಂತ ಸ್ಟಾರ್ ನಟರಿಬ್ಬರ ವಿರುದ್ದ ಚುನಾವಣಾ ಆಯೋಗಕೆ ದೂರು; ಜೆಡಿಎಸ್ ಶಾಸಕರಿಂದ ಯಶ್, ದರ್ಶನ್ ಗೆ ಎಚ್ಚರಿಕೆ??

0
431

ಮಂಡ್ಯ ಕ್ಷೆತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಸ್ಪರ್ದೆಗೆ ಇಳಿದಿದ್ದು, ಇವರ ಬೆಂಬಲಕ್ಕೆ ಚಿತ್ರರಂಗದ ಹಲವು ಸ್ಟಾರ್ ನಟರು ಸೇರಿದಂತೆ ಹಿರಿಯ, ಕಿರಿಯ ನಟರು ಸುಮಲತಾ ಪರವಾಗಿ ಪ್ರಚಾರಕ್ಕೆ ಇಳಿಯುವ ಭರವಸೆಯನ್ನು ಸೂಚಿಸಿದ್ದಾರೆ. ಅದರಂತೆ ಚಾಲೆಂಜಿಗ್ ಸ್ಟಾರ್ ದರ್ಶನ್, ಯಶ್ ಅವರು ನೀಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅದಿಕೃತ ಹೇಳಿಕೆ ನೀಡಿ ನಾವು ಸಂಪೂರ್ಣವಾಗಿ ಸುಮಲತಾ ಅವರ ಪರವಾಗಿ ಪ್ರಚಾರಕ್ಕೆ ನಿಂತಿದ್ದೇವೆ ಎಂದು ಹೇಳಿದ್ದರು.


Also read: ಈ ಹೊಸ ಸಮೀಕ್ಷೆ ನೋಡಿ ಇದರ ಪ್ರಕಾರ ಮೋದಿ ಮತ್ತೆ ಅಧಿಕಾರಕ್ಕೆ ಬರುವುದು ಪಕ್ಕಾ!! ನೀವು ಈ ಸಮೀಕ್ಷೆ ನಿಜವಾಗುತ್ತೆ ಅಂತೀರಾ??

ಈ ವಿಷಯ ರಾಜ್ಯದ ರಾಜಕೀಯದಲ್ಲಿ ಬಾರಿ ಚರ್ಚೆಗೆ ತುತ್ತಾಗಿ ಮಂಡ್ಯ ಕ್ಷೆತ್ರದಲ್ಲಿ ಅಲೆಯನ್ನು ಮೂಡಿಸಿ ಮತ್ತಷ್ಟು ಬೆಳವಣಿಗೆಯನ್ನು ಸೂಚಿಸಿತ್ತು. ಇದಕ್ಕೆ ಮೈತ್ರಿ ಸರ್ಕಾರದಿಂದ ಕಣಕ್ಕೆ ಇಳಿದಿರುವ ನಿಖಿಲ್ ಅಭಿಮಾನಿಗಳು ಸುಮಲತಾ ಅವರ ಬೆಂಬಲಿಗರ ವಿರುದ್ದ ಕಿಡಿ ಕಾರಿದ್ದರು. ಮುಖ್ಯಮಂತ್ರಿಗಳು ಕೂಡ ಈ ವಿಷಯವಾಗಿ ವ್ಯಂಗ್ಯವಾಡಿದರು. ಕನ್ನಡ ಚಿತ್ರರಂಗದ ಜನಪ್ರಿಯ ನಟರನ್ನು ಮುಂದೆ ಇಟ್ಟುಕೊಂಡು ಸುಮಲತಾ ರಾಜಕೀಯಕ್ಕೆ ಇಳಿದಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಇದು ಇಷ್ಟಕ್ಕೆ ನಿಲ್ಲದೆ. ಸುಮಲತಾ ಪರ ನಿಂತ ಯಶ್, ದರ್ಶನ್ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಸುದ್ದಿ ರಾಜಕೀಯದಲ್ಲಿ ರಾಜಕೀಯದಲ್ಲಿ ಮತ್ತಷ್ಟು ಅಲೆ ಮೂಡಿಸಿದೆ.


Also read: ಕರಾವಳಿ ಜನರಿಗೆ ಬುದ್ದಿ ಇಲ್ಲ; ಎಂದ ಕುಮಾರಸ್ವಾಮಿ ಹೇಳಿಕೆಗೆ, ಫುಲ್ ಗರಂ ಆಗಿ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಚಳಿ ಬಿಡಿಸಿದ ಕರಾವಳಿಗರು..

ಯಶ್ ದರ್ಶನ್ ವಿರುದ್ದ ದೂರು?

ಸುಮಲತಾ ಅವರಿಗೆ ಬಹಿರಂಗವಾಗಿ ಬೆಂಬಲ ಮತ್ತು ಪ್ರಚಾರ ನೀಡುವುದಾಗಿ ಈ ಇಬ್ಬರು ನಟರು ಘೋಷಿಸಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆ ಅಡಿಯಲ್ಲಿ ಪ್ರಕರಣ ಬರುವುದರಿಂದ ಜನರ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿರುವುದರಿಂದ ಚುನಾವಣಾ ಅಧಿಕಾರಿಗಳಿಗೆ ರಕ್ಷಣಾ ವೇದಿಕೆಯ ಮುಖಂಡರು ದೂರು ಸಲ್ಲಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣಾ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯುವವರೆಗೆ ನಟರಾದ ದರ್ಶನ್ ಮತ್ತು ಯಶ್ ಅವರ ಚಲನಚಿತ್ರಗಳು, ಟಿ ವಿ ಕಾರ್ಯಕ್ರಮಗಳು, ಜಾಹೀರಾತುಗಳು ಮತ್ತು ಸಿನಿಮಾಗಳನ್ನು ಪ್ರಸಾರ ಮಾಡಬಾರದು.
ಚುನಾವಣೆ ಮುಗಿಯುವವರೆಗೆ ಈ ಇಬ್ಬರು ನಟರ ಎಲ್ಲಾ ಮನರಂಜನಾ ಕಾರ್ಯಕ್ರಮಗಳಿಗೆ ತಡೆ ನೀಡಬೇಕೆಂದು ಕೋರಿ ಆಯೋಗಕ್ಕೆ ದೂರು ಸಲ್ಲಿಸಿದ್ದೇವೆ. ಈ ದೂರಿನಲ್ಲಿ ಸ್ಟಾರ್ ನಟರಿಬ್ಬರೂ ಸುಮಲತಾ ಪರ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ. ಅದರ ಬಗ್ಗೆ ಚುನಾವಣಾ ಆಯೋಗಕ್ಕೆ ಸಿಡಿ‌ ಸಹಿತ ನಮ್ಮ ವೇದಿಕೆಯಿಂದ ದೂರು‌ ನೀಡಿದ್ದೇವೆ. ಈ ಬಗ್ಗೆ ಪರಿಶೀಲಿಸುತ್ತೇವೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿರುವುದಾಗಿ‌ ಅವರು ಹೇಳಿದ್ದಾರೆ ಎಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಜಯರಾಜು ನಾಯ್ಡು ತಿಳಿಸಿದ್ದಾರೆ. ಇದಷ್ಟ ಅಲ್ಲದೆ ನಟರಿಗೆ ಶಾಸಕರೋಬ್ಬರಿಂದ ಎಚ್ಚರಿಕೆ ಕೂಡ ಬಂದಿರುವುದು ಕೇಳಿಬರುತ್ತಿದೆ.

ಸ್ಟಾರ್ ನಟರಿಗೆ ಶಾಸಕರಿಂದ ಎಚ್ಚರಿಕೆ?


Also read: ಮನೆ ಮಕ್ಕಳಾಗಿ ಸುಮಲತಾ ಬೆಂಬಲಕ್ಕೆ ಕನ್ನಡ ಚಿತ್ರರಂಗದ ಸ್ಟಾರ್ ನಟರು; ಅಂಬಿ ಅಣ್ಣನ ಮೇಲಿನ ಅಭಿಮಾನದ ಎದುರು ನಿಖಿಲ್-ಗೆ ಗೆಲ್ಲೋಕ್ಕಾಗುತ್ತಾ??

ಮಂಡ್ಯ ಚುನಾವಣಾ ಅಖಾಡಕ್ಕೆ ಸ್ಟಾರ್ ನಟ ದರ್ಶನ್ ಮತ್ತು ಯಶ್ ಧುಮುಕಿರುವುದು ಮಂಡ್ಯ ರಾಜಕೀಯ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಸ್ವತಂತ್ರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡುವುದಾಗಿ ದರ್ಶನ್ ಮತ್ತು ಯಶ್ ಹೇಳಿದ್ದು, ಇದು ಜೆಡಿಎಸ್ ಬೆಂಬಲಿಗರಿಗೆ ನುಂಗಲಾರದ ತುತ್ತಾಗಿದೆ. ಸ್ಟಾರ್ ನಟರು ಮಂಡ್ಯಕ್ಕೆ ಎಂಟ್ರಿ ಕೊಟ್ಟಿರುವ ಹಿನ್ನೆಲೆ ಕೆ.ಆರ್ ಪೇಟೆ ಶಾಸಕ ನಾರಾಯಣ ಗೌಡ ” ನೀವು ಗೌರವದಿಂದ ಇದ್ದರೇ ಒಳಿತು. ನಾಳೆ ದಿನ ನೀವು ಮಾಡಿರುವ ಆಸ್ತಿ ಬಗ್ಗೆ ಪರಿಶೀಲನೆ ಮಾಡಬೇಕಾಗುತ್ತೆ. ಸರ್ಕಾರ ನಮ್ದೆ ಇದೆ. ಸೋ, ಸುಮ್ಮನೆ ಮರ್ಯಾದೆಯಿಂದ ಮನೆಯಲ್ಲಿದ್ರೆ ಒಳ್ಳೆಯದು” ಎಂದು ಹೆಸರು ಹೇಳದೇ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಜೆಡಿಎಸ್ ಶಾಸಕರ ಈ ಹೇಳಿಕೆ ಈಗ ಬಹುದೊಡ್ಡ ಚರ್ಚೆಗೆ ಕಾರಣವಾಗಿದೆ.