ಚುನಾವಣೆ ಪ್ರಚಾರಕ್ಕೆ ಇಳಿದ ನಟರ ಚಿತ್ರಗಳ ನಿಷೇಧಕ್ಕೆ ಆಗ್ರಹಿಸಿ ದೂರಿಗೆ ಸ್ಪಷ್ಟನೆ; ಯಶ್, ದರ್ಶನ್ ಸಿನಿಮಾ ಪ್ರಸಾರಕ್ಕೆ ನಿರ್ಬಂಧ ವಿಲ್ಲ??

0
390

ಲೋಕಸಭಾ ಚುನಾವಣಾ ದಿನಾಂಕ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ಹೊಸ ಹೊಸ ಬೆಳವಣಿಗೆಗಳು ಕೇಳಿ ಬರುತ್ತಿವೆ. ಅದರಲ್ಲಿ ಮಂಡ್ಯ ಕ್ಷೆತ್ರದ ಚುನಾವಣೆ ಬಿರುಸಾಗಿದ್ದು, ಸುಮಲತಾ ಅವರಿಗೆ ಹಲವು ಸ್ಟಾರ್ ನಟರು ಬೆಂಬಲ ನಿಂತಿದ್ದು ನಟ ಯಶ್, ದರ್ಶನ್, ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವರು ಪ್ರಚಾರಕ್ಕೆ ಇಳಿದಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆ ಮುಗಿಯುವವರೆಗೂ ಇವರ ಚಲನಚಿತ್ರಗಳನ್ನು ನಿಷೇಧಿಸಬೇಕೆಂದು ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಆರ್‌.ಚಂದ್ರಪ್ಪ ದೂರಿನಲ್ಲಿ ತಿಳಿಸಿದ್ದರು.

Also read: ನಾವೇನು ಅಂಟಾರ್ಟಿಕಾ, ಪಾಕಿಸ್ತಾನದಿಂದ ಬಂದಿಲ್ಲ. ಮೈಸೂರಲ್ಲಿ ಹುಟ್ಟಿ ಮಂಡ್ಯವನ್ನು ದಾಟಿ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿದ್ದೇವೆ; ಜೆ.ಡಿ.ಎಸ್.ಗೆ ತಿರುಗೇಟು ನೀಡಿದ ಯಶ್..

ಅದರಂತೆ ಯಾವುದೇ ಸ್ಟಾರ್‌ ನಟ ಅಥವಾ ಪ್ರಚಾರಕ ಚುನಾವಣೆಯ ಪ್ರಚಾರದಲ್ಲಿ ತೊಡಗಿಸಿಕೊಂಡರೆ ಅವರೆಲ್ಲರೂ ಚುನಾವಣಾ ನೀತಿ ಸಂಹಿತೆ ಅಡಿಯಲ್ಲಿ ಬರುತ್ತಾರೆ. ಹೀಗಾಗಿ ಚಿತ್ರನಟರು ನಟಿಸಿರುವ ಚಿತ್ರಗಳನ್ನು ನಿಷೇಧಿಸಬೇಕೆಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದೂರಿನಲ್ಲಿ ಚಂದ್ರಪ್ಪ ಆಗ್ರಹಿಸಿದ್ದರು. ಈ ವಿಷಯ ಚಲನಚಿತ್ರ ಪ್ರದರ್ಶನಕ್ಕೆ ಸ್ಪಷ್ಟನೆ ಹೊರಬಂದಿದ್ದು. ಚುನಾವಣೆಯಲ್ಲಿ ಸ್ಪರ್ಧಿಸುವ ನಟರ ಚಲನಚಿತ್ರ ಪ್ರದರ್ಶನಕ್ಕೆ ದೂರದರ್ಶನದಲ್ಲಿ ಮಾತ್ರ ನಿರ್ಬಂಧವಿದೆ ಎಂದು ಮಂಡ್ಯ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಈ ಸ್ಪಷ್ಟನೆ ನೀಡಲಾಗಿದೆ.

ಹೌದು ಚುನಾವಣೆಯಲ್ಲಿ ನಟರು ಸ್ಪರ್ಧಿಸುತ್ತಿರುವುದರಿಂದ ಅವರು ನಟಿಸಿರುವ ಚಲನಚಿತ್ರಗಳು ಪ್ರದರ್ಶನವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಪತ್ರ ಸಂ 437/6ಜಿಜೆ-ಹೆಚ್‍ಪಿ/2014 ಅನ್ವಯ ಖಾಸಗಿ ಚಾನೆಲ್‍ಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ನಟರ ವಾಣಿಜ್ಯ ಜಾಹಿರಾತು, ಚಲನಚಿತ್ರಗಳ ಪ್ರದರ್ಶನ ಹಾಗೂ ಸಿನಿಮಾ ಮಂದಿರಗಳಲ್ಲಿ ಚಲನಚಿತ್ರಗಳನ್ನು ಪ್ರದರ್ಶಿಸಲು ಯಾವುದೇ ನಿರ್ಬಂಧ ಇರುವುದಿಲ್ಲ.

Also read: ಸುಮಲತಾ ಬೆಂಬಲಕ್ಕೆ ನಿಂತ ಸ್ಟಾರ್ ನಟರಿಬ್ಬರ ವಿರುದ್ದ ಚುನಾವಣಾ ಆಯೋಗಕೆ ದೂರು; ಜೆಡಿಎಸ್ ಶಾಸಕರಿಂದ ಯಶ್, ದರ್ಶನ್ ಗೆ ಎಚ್ಚರಿಕೆ??

ಆದರೆ ಲೋಕಸಭೆ ಸಾರ್ವತ್ರಿಕ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರ್ಕಾರಿ ಸ್ವಾಮ್ಯದ ದೂರದರ್ಶನ ಚಾನೆಲ್‍ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ನಟರ ಚಲನಚಿತ್ರಗಳನ್ನು (ವಾಣಿಜ್ಯ ಜಾಹಿರಾತು ಹೊರತುಪಡಿಸಿ) ಪ್ರದರ್ಶಿಸಲು ನಿರ್ಬಂಧವಿರುತ್ತದೆ ಎಂದು ಮಂಡ್ಯ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಎನ್.ಮಂಜುಶ್ರೀ ಅವರು ತಿಳಿಸಿದ್ದಾರೆ.

ದರ್ಶನ್-ಯಶ್ ಚಿತ್ರ ಪ್ರಸಾರಕ್ಕೆ ನಿರ್ಬಂಧ ವಿಲ್ಲ?

Also read: ಮನೆ ಮಕ್ಕಳಾಗಿ ಸುಮಲತಾ ಬೆಂಬಲಕ್ಕೆ ಕನ್ನಡ ಚಿತ್ರರಂಗದ ಸ್ಟಾರ್ ನಟರು; ಅಂಬಿ ಅಣ್ಣನ ಮೇಲಿನ ಅಭಿಮಾನದ ಎದುರು ನಿಖಿಲ್-ಗೆ ಗೆಲ್ಲೋಕ್ಕಾಗುತ್ತಾ??

ಆದರೆ, ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರ್ಕಾರಿ ಸ್ವಾಮ್ಯದ ದೂರದರ್ಶನ ಚಾನೆಲ್‍ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ನಟರ ಚಲನಚಿತ್ರಗಳನ್ನು (ವಾಣಿಜ್ಯ ಜಾಹಿರಾತು ಹೊರತುಪಡಿಸಿ) ಪ್ರದರ್ಶಿಸಲು ನಿರ್ಬಂಧವಿರುತ್ತದೆ ಎಂದು ತಿಳಿಸಿದ್ದಾರೆ. ಇದಕ್ಕೆ ಆಯೋಗದ ಸ್ಪಷ್ಟನೆ ನೀಡಿದ್ದು. ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಈ ಕುರಿತು ಮಾಹಿತಿ ನೀಡಿದ್ದು, ‘ಸುಮಲತಾ ಅಂಬರೀಶ್ ಜೊತೆ ಕಾಣಿಸಿಕೊಂಡ ಕಾರಣಕ್ಕೆ ದರ್ಶನ್ ಮತ್ತು ಯಶ್ ನಟಿಸಿರುವ ಚಲನಚಿತ್ರಗಳ ಪ್ರಸಾರಕ್ಕೆ ನಿರ್ಬಂಧ ಹೇರುವುದಿಲ್ಲ’ ಎಂದು ಹೇಳಿದ್ದಾರೆ. ಇದರಿಂದ ಮಂಡ್ಯದಲ್ಲಿ ಸುಮಲತಾ ಅವರ ಎದುರು ಸ್ಪರ್ಧಿಗೆ ತಳಮಳ ಶುರುವಾಗಿದ್ದು. ದರ್ಶನ್ ಮತ್ತು ಯಶ್ ಅಭಿಮಾನಿಗಳ ಮೇಲೆ ಸಿನಿಮಾ ಪ್ರಸಾರ ಪ್ರಭಾವ ಬಿಳಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.