ಜೆಡಿಎಸ್ ಪಕ್ಷದ 2018ರ ಚುನಾವಣಾ ಪ್ರಣಾಳಿಕೆಯ ಮುಖ್ಯಾಂಶಗಳು…!

0
1316

ಜೆಡಿಎಸ್ ಪಕ್ಷದ 2018ರ ಚುನಾವಣಾ ಪ್ರಣಾಳಿಕೆಯ ಮುಖ್ಯಾಂಶಗಳು.
1. ರಾಜ್ಯದ ಎಲ್ಲಾ ರೈತರ,ಸಂಪೂರ್ಣ ಸಾಲ ಮನ್ನಾ (ಅಧಿಕಾರಕ್ಕೆ ಬಂದ 24 ಗಂಟೆಯೋಳಗೆ)
2. ನೇಕಾರರ, ಮೀನುಗಾರರ ಮತ್ತು ಗ್ರಾಮೀಣ ಕುಶಲಕರ್ಮಿಗಳ ಸಂಪೂರ್ಣ ಸಾಲ ಮುನ್ನಾ.
3. ಗ್ರಾಮೀಣ ಪ್ರದೇಶದಲ್ಲಿ 24*7 3 ಪೇಸ್ ವಿದ್ಯುತ್
4. “ಜೆ.ಪಿ. ಸದನ” ಯೋಜನೆ ಅಡಿ ಹಿಂದುಳಿದ ವರ್ಗ ಮತ್ತು ಇತರೆ ವರ್ಗದವರಿಗೆ 2 ಲಕ್ಷ ರೂ ಗಳ ವಸತಿ ನಿರ್ಮಾಣ
5. “ಹೆಚ್.ಡಿ. ದೇವೆಗೌಡ ಆರೋಗ್ಯ ಶ್ರೀ” ಯೋಜನೆ ಅಡಿ ಬಿಪಿಎಲ್ ಕುಟುಂಬ ವರ್ಗದವರಿಗೆ 1 ಲಕ್ಷ ದಿಂದ 3 ಲಕ್ಷದವರೆಗೆ ಉಚಿತ ಚಿಕಿತ್ಸೆ
6. 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜೋತೆಗೆ ಬೆಳಗಿನ ಉಪಹಾರ ಯೋಜನೆ ಜಾರಿಗೆ
7. 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 2 ಜೊತೆ ಉಚಿತ ಸಮವಸ್ತ್ರ, ಶೂ, ಟೈ, ಬೆಲ್ಟ್ ಮತ್ತು ಉಚಿತ ನೋಟ್ ಪುಸ್ತಕಗಳ ವಿತರಣೆ
8. ಬಿಪಿಎಲ್ ಪಡಿತರದಾರರಿಗೆ ಉಚಿತ ಮೊಬೈಲ್,ಮಿಕ್ಸಿ, ವಿತರಣೆ
9. ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ರೂ 10000 ಕ್ಕೆ ಹೆಚ್ಚಳ ಮತ್ತು ಕಾಯಂ
10. “ತುಂಗಭದ್ರೆಯ ಮೇಲಾಣೆ ರೈತರ ಹಿತರಕ್ಷಣೆ ನಮ್ಮ ಹೊಣೆ” ಎನ್ನುವ ಘೋಷಣೆಯೊಂದಿಗೆ ತುಂಗಭದ್ರೆ ಜಲಾಶಯದಲ್ಲಿನ ಹೂಳು ತೆಗೆದು
ಬಳ್ಳಾರಿ,ರಾಯಚೂರು,ಕೊಪ್ಪಳ ಭಾಗದ ರೈತರ ಎರೆಡು ಬೆಳಗೆ ನೀರು ಒದಗಿಸುವುದು.
11. ಕಾವೇರಿಯ ನೀರಿಗಾಗಿ ಮತ್ತು ಕಾವೇರಿ ಭಾಗದ ರೈತರ ರಕ್ಷಣೆಗಾಗಿ ಹೋರಾಟ ಮಾಡಲು ಸದಾ ಕಂಕಣ ಬದ್ಧರು.
12. ಉತ್ತರ ಕರ್ನಾಟಕದ ಜನರಿಗೆ ಕುಡಿಯುವ ನೀರನ್ನ ಒದಗಿಸುವುದಕ್ಕಾಗಿ ಮಹದಾಯಿ ಯೋಜನೆಯನ್ನ ಜಾರಿಗೆ ತರುವುದು.
13. ಅಂಗವಿಕಲರಿಗೆ ಮಾಸಿಕ 2500 ರೂ ವೇತನ ನೀಡುವುದು.
14. ವೃದ್ದಾಪ್ಯ ಮತ್ತು ವಿಧವಾ ವೇತನವನ್ನು 1500 ರೂ ಗೆ ಹೆಚ್ಚಳ.
15. ರಸಗೊಬ್ಬರ ಸಬ್ಸಿಡಿ. * ಬಿತ್ತನೆ ಬೀಜ ಮತ್ತು ಟ್ರ್ಯಾಕ್ಟರ್ಗಳಿಗೆ ಶೇಕಡಾ 75ರಷ್ಟು ಸಬ್ಸಿಡಿ.
16. ಬಿಪಿಎಲ್ ಪಡಿತರದಾರರ ಪ್ರತಿ ಕುಟಂಬದ ಮಹಿಳಾ ಮುಖ್ಯಸ್ಥೆಯ ಹೆಸರಿನಲ್ಲಿ ದೀಪಾವಳಿ ಹಬ್ಬಕ್ಕೆ 1000 ರೂ ಸಹಾಯಧನ .
17. ಗ್ರಾಮೀಣ ಭಾಗದ ಗರ್ಭಿಣಿಯರು ಮತ್ತು ಮಗುವಿನ ಆರೋಗ್ಯಕ್ಕಾಗಿ ಒಂದು ವರ್ಷದವರೆಗೆ ಪ್ರತಿ ತಿಂಗಳು 5000 ರೂ ಸಹಾಯಧನ.
18. ಭ್ರಷ್ಟಾಚಾರ ನಿರ್ಮೂಲನೆಗಾಗಿ ಜಾಗೃತಿ ಧಳವನ್ನು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರಚಿಸುವುದು.
19. ಮುಂದಿನ ಐದು ವರ್ಷಗಳಲ್ಲಿ ನೀರಾವರಿ ಯೋಜನೆಗಳಿಗೆ 65 ಸಾವಿರ ಕೋಟಿ ಹಣ ಮೀಸಲಿಟ್ಟು, ಸುಮಾರು ಹತ್ತು ಲಕ್ಷ ಎಕರೆ ಭೂಮಿಗೆ ನೀರಾವರಿ.
20. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಎತ್ತಿನಹೊಳೆ ನೀರಾವರಿ ಯೋಜನೆ.
21. ಕೃಷ್ಣಾ ಮೇಲ್ದಂಡೆ 2ನೇ ಹಂತದ ನೀರಾವರಿ ಯೋಜನೆ ಶೀಘ್ರ ಅನುಷ್ಠಾನ.
22. ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಐದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಆರಂಭ.
23. ಪರಿಸರಕ್ಕೆ ಹಾನಿಯಾಗುವಂತಹ ಗಣಿಗಾರಿಕೆಯ ನಿಷೇಧ.
24. ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಜನತಾದರ್ಶನ ಮತ್ತು ಗ್ರಾಮ ವಾಸ್ತವ್ಯ ಮುಂದುವರಿಕೆ.
ರಾಜ್ಯದ ಮತದಾರ ಬಾಂಧವರೇ, ಈಗಾಗಲೇ ರಾಜ್ಯದ ಆಡಳಿತವನ್ನು 2009 ರಲ್ಲಿ ಬಿಜೆಪಿ ಸರ್ಕಾರವನ್ನ ಆಯ್ಕೆ ಮಾಡಿದ್ದೀರಿ, 2013 ರಲ್ಲಿ ಕಾಂಗ್ರೇಸ್ ಸರ್ಕಾರವನ್ನ ಆಯ್ಕೆ ಮಾಡಿರುತ್ತೀರಿ, 2018 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಒಂದು ಅವಕಾಶವನ್ನು ನೀಡಿ ಪ್ರಚಂಡ ಬಹುಮತದಿಂದ ಜೆಡಿಎಸ್ ಸರ್ಕಾರವನ್ನ ಆಯ್ಕೆ ಮಾಡಿ ರಾಜ್ಯದ ಮತ್ತು ರೈತರ ಅಭಿವೃದ್ಧಿಗಾಗಿ ಸಹಕರಿಸಬೇಕೆಂದು ವಿನಂತಿಸುತ್ತೇನೆ.
ಇದು ಜೆಡಿಎಸ್ ಪಕ್ಷದ 2018ರ ಚುನಾವಣಾ ಪ್ರಣಾಳಿಕೆಯ ಮುಖ್ಯಾಂಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.