ಕರ್ನಾಟಕ ಹಾಗೂ ಕೇರಳದಲ್ಲಿ ಬಲಿಯಾದ ಕಾರ್ಯಕರ್ತರಿಗೆ ಈ ಜಯವನ್ನು ಸಮರ್ಪಿಸುತ್ತಿದ್ದೇವೆ: ಪ್ರಧಾನಿ ಮೋದಿ

0
438

Kannada News | Karnataka News

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯಾವಾಗಲು ನಿಷ್ಠೆಯಿಂದ ಕೆಲಸ ಮಾಡುವವರಿಗೆ ಕೃತಜ್ಞತೆಯನ್ನು ತಿಳಿಸಲು ಮರೆಯುವುದಿಲ್ಲ. ಇದಕ್ಕೆ ಮತ್ತೊಂದು ಉದಾಹರಣೆ ಎಂದರೆ ಅವರ ಇತ್ತೀಚಿನ ಭಾಷಣ. ಅವರು ಈಶಾನ್ಯ ರಾಜ್ಯಗಳಲ್ಲಿ ಕಮಲ ಅರಳಲು ಪಕ್ಷದ ಕಾರ್ಯಕರ್ತರು ಮಾಡಿದ ತ್ಯಾಗ ಬಲಿದಾನಗಳೇ ಕಾರಣ ಎಂದು ಕಾರ್ಯಕರ್ತರನ್ನು ಹೊಗಳಿದರು.

ಹೌದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಕರ್ನಾಟಕ ಮತ್ತು ಕೇರಳದಲ್ಲಿ ಪಕ್ಷದ ಕಾರ್ಯಕರ್ತರು ತಮ್ಮ ಸಿದ್ಧಾಂಗಳಿಗಾಗಿ ಮಾಡಿದ ತ್ಯಾಗ-ಬಲಿದಾನಗಳೇ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಗೆಲುವಿಗೆ ಕಾರಣ ಎಂದು ಹಾಡಿ-ಹೊಗಳಿದ್ದಾರೆ.

ತ್ರಿಪುರಾ, ನಾಗಾಲ್ಯಾಂಡ್‌ ಮತ್ತು ಮೇಘಾಲಯ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ, ದೆಹಲಿಯಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಬಿಜೆಪಿ ಮುಖ್ಯ ಕಚೇರಿಯಲ್ಲಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿಯವರು, ಎಡಪಕ್ಷದ ಭದ್ರಕೋಟೆಯಾಗಿದ್ದ ತ್ರಿಪುರಾದಲ್ಲಿ ಬಿಜೆಪಿಯ ಜಯವು, ಹಿಂಸಾಚಾರ ನಡೆಸುತ್ತಿದ್ದ ಪಕ್ಷಗಳಿಗೆ ಜನರು ತಕ್ಕ ಪಾಠ ಕಳಿಸಿದ್ದಾರೆ ಎಂದು ಸಿಪಿಎಂ ಮತ್ತು ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಚುನಾವಣೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಆದರೆ, ಕೆಲವರು ಇದನ್ನು ವೈಯಕ್ತಿಕ ಪ್ರತಿಷ್ಠೆ ಎಂದು ಪರಿಗಣಿಸಿ ಕೇರಳ ಮತ್ತು ಕರ್ನಾಟಕದಲ್ಲಿ ಹತ್ತಾರು ಜನ ಅಮಾಯಕ ಕಾರ್ಯಕರ್ತರನ್ನು ಹತ್ಯೆ ಮಾಡಿರುವುದು ಖಂಡನೀಯ. ತಾಕತ್ ಇದ್ದಾರೆ ಚುನಾವಣೆಯಲ್ಲಿ ಪೈಪೋಟಿ ನೀಡಲಿ ಎಂದು ಅವರು ಹೇಳಿದರು.

ಈಶಾನ್ಯ ಭಾರತದವನ್ನು ಕಾಂಗ್ರೆಸ್‌ ಮುಕ್ತ ಮಾಡುತ್ತೇವೆ ಎಂದು ಹೇಳಿದ್ದೆ. ಅದರಂತೆ ಈಶಾನ್ಯ ಭಾಗದಲ್ಲಿ ಕಮಲ ಅರಳಿದೆ. ಇನ್ನು ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅನ್ನು ಮಣ್ಣು ಮುಕ್ಕಿಸಲಿದ್ದೇವೆ ಎಂದರು. ಕರ್ನಾಟಕದಲ್ಲಿ ಬಿಜೆಪಿ ಅಭೂತಪೂರ್ಣ ಜಯ ಗಳಿಸಲಿದೆ ಎಂದು ಭವಿಷ್ಯ ನುಡಿದರು.

Also Read: ಸಾವಿರಾರು ಕೋಟಿ.ರೂ ವಂಚನೆ ಮಾಡಿ ವಿದೇಶಕ್ಕೆ ಓಡಿ ಹೋಗುವವರಿಗೆ ಶಾಕ್ ನೀಡಿದೆ ಮೋದಿ ಸರ್ಕಾರ…!!