5 ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ: ಬುಧವಾರದಿಂದಲೇ ನೀತಿ ಸಂಹಿತೆ ಜಾರಿ

0
659

ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಹೇಳಲಾದ ಉತ್ತರ ಪ್ರದೇಶ, ಪಂಜಾಬ್. ಮಣಿಪುರ, ಗೋವಾ ಹಾಗೂ ಉತ್ತರ್ಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಪ್ರಕಟಿಸಿದ್ದು, ಬುಧವಾರದಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದೆ.

ಗೋವಾ, ಪಂಜಾಬ್, ಉತ್ತರಖಂಡ್ಗಳಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮಣಿಪುರದಲ್ಲಿ 2 ಹಾಗೂ ಉತ್ತರ ಪ್ರದೇಶದಲ್ಲಿ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾಚರ್್ 11ರಂದು ಎಣಿಕೆ ನಡೆಯಲಿದ್ದು, ಅದೇ ದಿನ ಸಂಜೆಯೊಳಗೆ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ.

ಚುನಾವಣಾ ವಿವರ:
ಗೋವಾ: ಫೆಬ್ರವರಿ 4
ಪಂಜಾಬ್: ಫೆಬ್ರವರಿ 4
ಉತ್ತರ್ಖಂಡ್: ಫೆಬ್ರವರಿ 15
ಮಣಿಪುರ: ಮಾಚರ್್ 4 ಮತ್ತು 8
ಉತ್ತರಪ್ರದೇಶ: ಫೆ. 11, 15, 19, 23, 27, ಮಾಚರ್್ 4 ಮತ್ತು 8

ನೀತಿ ಸಂಹಿತೆ
* ಉ.ಪ್ರ, ಪಂಜಾಬ್, ಉತ್ತರಾಖಂಡ್ ಅಭ್ಯಥರ್ಿಗಳ ಚುನಾವಣಾ ವೆಚ್ಚ 28 ಲಕ್ಷ ಮೀರಬಾರದು. ಗೋವಾ ಮತ್ತು ಮಣಿಪುರ ಅಭ್ಯಥರ್ಿಗಳ ಮಿತಿ 20 ಲಕ್ಷ.
* ಪೇಯ್ಡ್ ನ್ಯೂಸ್ಗಳ ಮೇಲೆ ಪ್ರೆಸ್ ಕೌನ್ಸಿಲ್ ಮತ್ತು ಆಯೋಗ ನಿಗಾ
ಕಪ್ಪುಹಣ ಚಲಾವಣೆ ಬಗ್ಗೆ ಹದ್ದಿನಕಣ್ಣು
ನೀತಿ ಸಂಹಿತೆ ಬುಧವಾರದಿಂದಲೇ ಜಾರಿ